ತೆಕ್ಕಟ್ಟೆ (ಹೊಸಮಠ): ಕೊರ್ಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಮಠ ಜನತಾ ಕಾಲನಿಯಲ್ಲಿ ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದ್ದು ನೀರಿಗಾಗಿ ಮೈಲು ದೂರ ಕ್ರಮಿಸಬೇಕಾದ ಅನಿವಾರ್ಯ ಪರಿಸ್ಥಿತಿ ಕಾಲನಿ ಜನತೆಗೆ ಎದುರಾಗಿದೆ.
ಸುಮಾರು 46 ಮನೆಗಳನ್ನು ಒಳಗೊಂಡ ಸುಮಾರು 200 ಮಂದಿ ವಾಸವಾಗಿರುವ ಈ ಜನತಾ ಕಾಲನಿಯಲ್ಲಿ ಕುಡಿಯುವ ನೀರಿನ ಬಾವಿ ಹಾಗೂ ಓವರ್ ಹೆಡ್ ಟ್ಯಾಂಕ್, ಪ್ರತಿ ಮನೆಗಳಿಗೂ ಕೂಡಾ ನೀರಿನ ಸಂಪರ್ಕ ಪೈಪ್‌ಗ್ಳನ್ನು ಅಳವಡಿಸಿದರು ಕೂಡಾ ಬತ್ತಿದ ಅಂತರ್ಜಲ ಹಾಗೂ ನೀರಿನ ಮೂಲ ಸೆಲೆಯಾಗಿದ್ದ ಸಾರ್ವಜನಿಕ ಬಾವಿಯೂ ಕೂಡಾ ಬತ್ತಿ ಹೋಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಕಾಲನಿಯ ಜನತೆಗೆ ಈಗಾಗಲೇ ತಲೆನೋವಾಗಿ ಪರಿಣಮಿಸಿದೆ.
ಕುಡಿಯುವ ನೀರಿಗಾಗಿ ಕ್ರಮಿಸಬೇಕು ಮೈಲು ದೂರ ಹೊಸಮಠ ಜನತಾ ಕಾಲನಿಯ ಪರಿಸರದಲ್ಲಿ ಎಪ್ರಿಲ್ ತಿಂಗಳಲ್ಲಿ ಅಂತರ್ಜಲ ಮಟ್ಟ ಸಂಪೂರ್ಣ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿಗಾಗಿ ಹೊಸಮಠ ಧರ್ಮದಗೋಳಿ ದೇವಸ್ಥಾನದಲ್ಲಿರುವ ಬಾವಿಯನ್ನು ಆಶ್ರ ಯಿಸಬೇಕಾದ ಅನಿವಾರ್ಯತೆ ಎದು ರಾಗುವುದಲ್ಲದೆ ಕುಡಿಯುವ ನೀರಿಗಾಗಿ ಮೈಲಿದೂರ ಕ್ರಮಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಮಾತ್ರ ವಾಸ್ತವ ಸತ್ಯ.
ಕೊರ್ಗಿ ಗ್ರಾ.ಪಂ ವ್ಯಾಪ್ತಿಯ ನೂಜಿ, ದೊಡ್ನರೆಕಲ್ಲು ಸೇರಿದಂತೆ ಕೆಲವು ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಗ್ರಾ.ಪಂ. ಸರ್ವ ಸದಸ್ಯರ ನಿರ್ಣಯದಂತೆ ಟ್ಯಾಂಕರ್‌ನಲ್ಲಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಅಲ್ಲದೆ ಅದೇ ರೀತಿ ಹೊಸಮಠ ಜನತಾ ಕಾಲನಿಯಲ್ಲಿ ಉದ್ಭವಿಸಿರುವ ಈ ಸಮಸ್ಯೆಗಳಿಗೆ ಕೂಡಾ ಗ್ರಾ.ಪಂ. ತತ್‌ಕ್ಷಣವೇ ಸ್ಪಂದಿಸಲಿದೆ.
– ಗಂಗೆ ಕುಲಾಲ್ತಿ, ಅಧ್ಯಕ್ಷರು ಗ್ರಾ.ಪಂ. ಕೊರ್ಗಿ
ಹೊಸಮಠ ಜನತಾ ಕಾಲನಿಯಲ್ಲಿ ದಶಕಗಳಿಂದಲೂ ತಲೆದೋರು ತ್ತಿರುವ ಈ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಿಂದ ವಾರಾಹಿ ಕುಡಿಯುವ ನೀರನ್ನು ಸರಬರಾಜು ಮಾಡುವ ಮಹತ್ವಾಕಾಂಕ್ಷಿ ಯೋಜನೆಗಳ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ಗಮನಹರಿಸಲಿ.
– ಹೊಸಮಠ ಜನತಾ ಕಾಲನಿಯ ನಿವಾಸಿಗಳು