Advertisement

Northern Ireland; ಮಾಜಿ ಮಾಲೀಕನ ಅರಸಿ 64 ಕಿ.ಮೀ. ನಡೆದ ಶ್ವಾನ

07:47 AM May 02, 2023 | Team Udayavani |

ನಿಯತ್ತಿಗೆ ಮತ್ತೊಂದು ಹೆಸರೇ ಶ್ವಾನ ಎನ್ನುವ ಮಾತು ಅಕ್ಷರಶಃ ಸತ್ಯ. ಅಂಥದ್ದೇ ಒಂದು ನಿದರ್ಶನ ಜಾಲತಾಣದಲ್ಲಿ ನೆಟ್ಟಿಗರ ಮನಮಿಡಿದಿದೆ. ಉತ್ತರ ಐರ್ಲೆಂಡ್‌ನ‌ ಕಂಟ್ರಿ ಟೈರೋನ್‌ ನಿವಾಸಿ ನಿಗೆಲ್‌ ಫ್ಲೆಮಿಂಗ್‌ ಎಂಬುವರು ಕೂಪರ್‌ ಎನ್ನುವ ಶ್ವಾನವೊಂದನ್ನು ಇತ್ತೀಚೆಗೆಷ್ಟೇ ದತ್ತು ಪಡೆದಿದ್ದರು. ಅದು ಒಂದು ತಿಂಗಳಿಂದ ಕಾಣೆಯಾಗಿತ್ತು. ಕೂಪರ್‌ಗಾಗಿ ನಿಗೆಲ್‌ ತೀವ್ರ ಹುಡುಕಾಟ ನಡೆಸಿದರು.

Advertisement

ಈ ವೇಳೆ ಕೂಪರ್‌ ಬಗ್ಗೆ ಮಾಹಿತಿ ಸಿಕ್ಕಿದ್ದು, ಆತ ತನ್ನ ಮಾಜಿ ಮಾಲೀಕರ ವಿಳಾಸವನ್ನು ಹುಡುಕುತ್ತಾ, ಊಟ-ನೀರು ಇಲ್ಲದೆ, 27 ದಿನಗಳ ಕಾಲ 64 ಕಿ.ಮೀ. ನಡೆದಿರುವುದು ತಿಳಿದುಬಂದಿದೆ.

ಮಾಜಿ ಮಾಲೀಕರ ಮೇಲಿನ ಕೂಪರ್‌ ಪ್ರೀತಿ ಕಂಡು ನೆಟ್ಟಿಗರು ಕಣ್ಣಂಚು ತುಂಬಿದ್ದು, ಕೂಪರ್‌ನನ್ನು ಮತ್ತೆ ಪತ್ತೆಹಚ್ಚಿರುವ ನಿಗೆಲ್‌ ಆತನನ್ನು ಅದೇ ಕಾಳಜಿ ಪೀತಿಯಿಂದ ನೋಡಿಕೊಳ್ಳುವುದಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next