Advertisement

ಮಳೆಯ ನಡುವೆ ಕಸದ ತೊಟ್ಟಿಯಲ್ಲಿ ಪತ್ತೆಯಾಯ್ತು ನವಜಾತ ಹೆಣ್ಣು ಮಗು: ಆಸ್ಪತ್ರೆಯಲ್ಲಿ ಚಿಕಿತ್ಸೆ

09:11 AM Oct 09, 2022 | Team Udayavani |

ನವದೆಹಲಿ : ರಾಜೋಕ್ರಿ ಬಸ್‌ ನಿಲ್ದಾಣದ ಬಳಿಯ ಕಸದ ತೊಟ್ಟಿಯಲ್ಲಿ ನವಜಾತ ಹೆಣ್ಣು ಮಗುವೊಂದು ಪತ್ತೆಯಾಗಿದೆ, ಕೂಡಲೇ ಮಗುವನ್ನು ದೆಹಲಿಯ ವಸಂತ್‌ ಕುಂಜ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

ಅಕ್ಟೋಬರ್ 8 ರಂದು ಬೆಳಿಗ್ಗೆ 8:12 ಕ್ಕೆ, ರಾಜೋಕ್ರಿ ಬಸ್ ನಿಲ್ದಾಣದಲ್ಲಿ ಕಸದ ತೊಟ್ಟಿಯಲ್ಲಿ ಮಗುವೊಂದು ಅಳುವ ಸದ್ದು ಕೇಳಿದೆ, ಇದನ್ನು ಗಮನಿಸಿದ ಸಾರ್ವಜನಿಕರು ಹತ್ತಿರದ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ, ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಮಗುವಿದ್ದ ಸ್ಥಳಕ್ಕೆ ಬಂದು ಮಗುವನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ, ಅದೃಷ್ಟವಶಾತ್ ಮಗುವಿನ ಅರೋಗ್ಯ ಸ್ಥಿರವಾಗಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಸಂತ್ ಕುಂಜ್‌ನ ಫೋರ್ಟಿಸ್ ಆಸ್ಪತ್ರೆಯ ಪೀಡಿಯಾಟ್ರಿಕ್ಸ್‌ನ ನಿರ್ದೇಶಕ ಮತ್ತು ಎಚ್‌ಒಡಿ ಡಾ.ರಾಹುಲ್ ನಾಗ್‌ಪಾಲ್ ನೇತೃತ್ವದ ವೈದ್ಯರ ತಂಡ ಮಗುವಿನ ಆರೈಕೆ ಮಾಡುತ್ತಿದೆ.

ಪ್ರಾಥಮಿಕ ಪರೀಕ್ಷೆಯಲ್ಲಿ, ಮಗು 24-48 ಗಂಟೆಗಳ ಹಿಂದೆ ಜನಿಸಿರಬಹುದು, ಮಳೆ ಬರುತ್ತಿದ್ದ ಪರಿಣಾಮ ಮಗುವಿನ ಅರೋಗ್ಯ ಹದಗೆಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ.

ಕಾನೂನು ಪ್ರಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದು, ಮಗುವಿನ ಪೋಷಕರ ಪತ್ತೆ ಕಾರ್ಯ ನಡೆಸಲಾಗುತ್ತಿದೆ ಎಂದಿದ್ದಾರೆ.

Advertisement

ಇದನ್ನೂ ಓದಿ : ದಸರಾ ರಜೆ ಹಿನ್ನೆಲೆ : ಕರಾವಳಿಯ ದೇಗುಲ, ಪ್ರವಾಸಿ ತಾಣಗಳಲ್ಲಿ ಜನ ದಟ್ಟಣೆ

Advertisement

Udayavani is now on Telegram. Click here to join our channel and stay updated with the latest news.

Next