Advertisement

ನ್ಯೂಜಿಲ್ಯಾಂಡ್‌ ಸೋಲಿನಿಂದ ಪಾರು

11:24 PM Jun 06, 2019 | Sriram |

ಲಂಡನ್‌: ಬುಧವಾರ “ಕೆನ್ನಿಂಗ್ಟನ್‌ ಓವಲ್‌’ನಲ್ಲಿ ನಡೆದ ಹಗಲು-ರಾತ್ರಿ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ಕಡೆಯ ಹಂತದ ಆತಂಕದಿಂದ ಪಾರಾಗಿ ಬಾಂಗ್ಲಾದೇಶವನ್ನು 2 ವಿಕೆಟ್‌ಗಳಿಂದ ಮಣಿಸಿ ನಿಟ್ಟುಸಿರೆಳೆಯಿತು.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶ 244 ರನ್ನಿಗೆ ಆಲೌಟಾದರೆ, ನ್ಯೂಜಿಲ್ಯಾಂಡ್‌ 47.1 ಓವರ್‌ಗಳಲ್ಲಿ 8 ವಿಕೆಟಿಗೆ 248 ರನ್‌ ಗಳಿಸಿ ಗೆಲುವು ಒಲಿಸಿಕೊಂಡಿತು.

82 ರನ್‌ ಬಾರಿಸಿದ ರಾಸ್‌ ಟೇಲರ್‌ (91 ಎಸೆತ, 9 ಬೌಂಡರಿ) ನ್ಯೂಜಿಲ್ಯಾಂಡ್‌ ಸರದಿಯನ್ನು ಆಧರಿಸಿ ನಿಂತರು. ಟೇಲರ್‌ ಕ್ರೀಸಿನಲ್ಲಿ ಇರುವಷ್ಟು ಹೊತ್ತು ಕಿವೀಸ್‌ ಸುಲಭ ಗೆಲುವಿನ ಕನಸು ಕಾಣುತ್ತಿತ್ತು. ಆಗ ಸ್ಕೋರ್‌ 4 ವಿಕೆಟಿಗೆ 195 ರನ್‌ ಆಗಿತ್ತು. ಈ ಮೊತ್ತದಲ್ಲಿ ಟೇಲರ್‌ ಔಟಾದೊಡನೆ ನಾಟಕೀಯ ಕುಸಿತವೊಂದನ್ನು ಸಂಭವಿಸಿತು. 218ಕ್ಕೆ 7 ವಿಕೆಟ್‌ ಉರುಳಿತು. ಬಾಂಗ್ಲಾ ಕೈ ಮೇಲಾಗುವ ಸೂಚನೆ ಲಭಿಸಿತಾದರೂ ಅದೃಷ್ಟ ಕೈಕೊಟ್ಟಿತು. ನ್ಯೂಜಿಲ್ಯಾಂಡ್‌ ಈ ಕೂಟದಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದ ಮೊದಲ ತಂಡವಾಗಿದೆ.

ಸ್ಕೋರ್‌ ಪಟ್ಟಿ
ಬಾಂಗ್ಲಾದೇಶ 244
ನ್ಯೂಜಿಲ್ಯಾಂಡ್‌
ಮಾರ್ಟಿನ್‌ ಗಪ್ಟಿಲ್‌ ಸಿ ತಮಿಮ್‌ ಬಿ ಶಕಿಬ್‌ 25
ಕಾಲಿನ್‌ ಮುನ್ರೊ ಸಿ ಮೆಹಿದಿ ಬಿ ಶಕಿಬ್‌ 24
ಕೇನ್‌ ವಿಲಿಯಮ್ಸನ್‌ ಸಿ ಮೊಸದ್ದೆಕ್‌ ಬಿ ಮೆಹಿದಿ 40
ರಾಸ್‌ ಟೇಲರ್‌ ಸಿ ರಹೀಂ ಬಿ ಮೊಸದ್ದೆಕ್‌ 82
ಟಾಮ್‌ ಲ್ಯಾಥಂ ಸಿ ಸೈಫ‌ುದ್ದೀನ್‌ ಬಿ ಮೆಹಿದಿ 0
ಜೇಮ್ಸ್‌ ನೀಶಮ್‌ ಸಿ ಸರ್ಕಾರ್‌ ಬಿ ಮೊಸದ್ದೆಕ್‌ 25
ಡಿ ಗ್ರ್ಯಾಂಡ್‌ಹೋಮ್‌ ಸಿ ರಹೀಂ ಬಿ ಸೈಫ‌ುದ್ದೀನ್‌ 15
ಮಿಚೆಲ್‌ ಸ್ಯಾಂಟ್ನರ್‌ ಔಟಾಗದೆ 17
ಮ್ಯಾಟ್‌ ಹೆನ್ರಿ ಬಿ ಸೈಫ‌ುದ್ದೀನ್‌ 6
ಲಾಕಿ ಫ‌ರ್ಗ್ಯುಸನ್‌ ಔಟಾಗದೆ 4
ಇತರ 10
ಒಟ್ಟು (47.1 ಓವರ್‌ಗಳಲ್ಲಿ 8 ವಿಕೆಟಿಗೆ) 248
ವಿಕೆಟ್‌ ಪತನ: 1-35, 2-55, 3-160, 4-162, 5-191, 6-218, 7-218, 8-238.
ಬೌಲಿಂಗ್‌:
ಮಶ್ರಫೆ ಮೊರ್ತಜ 5-0-32-0
ಮೆಹಿದಿ ಹಸನ್‌ 10-0-47-2
ಮುಸ್ತಫಿಜುರ್‌ ರಹಮಾನ್‌ 7.1-0-48-0
ಶಕಿಬ್‌ ಅಲ್‌ ಹಸನ್‌ 10-0-47-2
ಮೊಹಮ್ಮದ್‌ ಸೈಫ‌ುದ್ದೀನ್‌ 7-0-41-2
ಮೊಸದ್ದೆಕ್‌ ಹೊಸೈನ್‌ 8-0-33-2
ಪಂದ್ಯಶ್ರೇಷ್ಠ: ರಾಸ್‌ ಟೇಲರ್‌

Advertisement

Udayavani is now on Telegram. Click here to join our channel and stay updated with the latest news.

Next