Advertisement

ವೈಟ್‌ ಐಲ್ಯಾಂಡ್‌ ಲಾವಾ ಸ್ಫೋಟ: 5 ಪ್ರವಾಸಿಗರ ಸಾವು

10:13 AM Dec 11, 2019 | Team Udayavani |

ವೆಲ್ಲಿಂಗ್ಟನ್‌: ನ್ಯೂಜಿಲ್ಯಾಂಡ್‌ ಜನಪ್ರಿಯ ಪ್ರವಾಸಿ ಸ್ಥಳವಾಗಿರುವ ವೈಟ್‌ ಐಲ್ಯಾಂಡ್‌ನ‌ತ್ತ ವಿಲಾಸಿ ನೌಕೆಯಲ್ಲಿ ಹೋಗುತ್ತಿದ್ದ ವೇಳೆ ಸ್ಫೋಟಗೊಂಡ ಲಾವಾರಸಕ್ಕೆ ಐವರು ಪ್ರಾಣ ಕಳೆದುಕೊಂಡಿದ್ದಾರೆ. 18ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ. ಜ್ವಾಲಾಮುಖೀ ಸ್ಫೋಟದ ವೇಳೆ ಅಲ್ಲಿ 50ಕ್ಕೂ ಹೆಚ್ಚು ಮಂದಿ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಹಲವರು ಉಕ್ಕಿ ಹರಿದ ಲಾವಾ ರಸದ ಕೆಳಗೆ ಇದ್ದಾರೆ ಎಂದು ಶಂಕಿಸಲಾಗಿದೆ. ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಲಾವಾರಸ ಸ್ಫೋಟಕ್ಕೆ ಮುಂಚೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾದ ಪ್ರಕಾರ ಹಲವರು ನಡೆದುಕೊಂಡು ಹೋಗುತ್ತಿರುವ ದೃಶ್ಯಗಳಿವೆ. ಏಕಾಏಕಿ ಲಾವಾ ಉಕ್ಕಿ ಹರಿದು, ಅನಂತರ ಸ್ಕ್ರೀನ್‌ ಬ್ಲ್ಯಾಂಕ್‌ ಆಗಿದೆ. ಇದು ಸುಮಾರು 4 ಸಾವಿರ ಮಂದಿ ಪ್ರಯಾಣಿಸುವ ನೌಕೆಯಾಗಿದೆ. ಅವರೆಲ್ಲರೂ ಆಸ್ಟ್ರೇಲಿಯಾದ ಸಿಡ್ನಿಯಿಂದ ಕಳೆದ ವಾರ ಹೊರಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next