Advertisement

ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡಿಗೆ ಇನಿಂಗ್ಸ್‌ ಮುನ್ನಡೆ

09:15 PM Mar 11, 2023 | Team Udayavani |

ಕ್ರೈಸ್ಟ್‌ಚರ್ಚ್‌: ಡೆರಿಲ್‌ ಮಿಚೆಲ್‌ ಅವರ ಸೊಗಸಾದ ಶತಕ ಮತ್ತು ಮ್ಯಾಟ್‌ ಹೆನ್ರಿ ಅವರ ಬಿರುಸಿನ ಅರ್ಧಶತಕದಿಂದಾಗಿ ನ್ಯೂಜಿಲೆಂಡ್‌ ತಂಡವು ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದ ಮೂರನೇ ದಿನ ಪ್ರಥಮ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಲು ಯಶಸ್ವಿಯಾಗಿದೆ.
ಮಿಚೆಲ್‌, ಹೆನ್ರಿ ಮತ್ತು ನೀಲ್‌ ವಾಗ್ನರ್‌ ಅವರ ಉಪಯುಕ್ತ ಆಟದಿಂದಾಗಿ ನ್ಯೂಜಿಲೆಂಡ್‌ ತಂಡವು 373 ರನ್‌ ಗಳಿಸಿ ಆಲೌಟಾಯಿತು. ಈ ಮೂಲಕ ಮೊದಲ ಇನಿಂಗ್ಸ್‌ನಲ್ಲಿ 18 ರನ್‌ ಮುನ್ನಡೆ ಪಡೆಯಿತು. ಇದಕ್ಕುತರವಾಗಿ ದ್ವಿತೀಯ ಇನಿಂಗ್ಸ್‌ ಆರಂಭಿಸಿರುವ ಶ್ರೀಲಂಕಾ ತಂಡವು ಮೂರನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್‌ ಕಳೆದುಕೊಂಡಿದ್ದು 83 ರನ್‌ ಗಳಿಸಿದೆ. ಏಂಜೆಲೊ ಮ್ಯಾಥ್ಯೂಸ್‌ 20 ರನ್‌ ಗಳಿಸಿ ಆಡುತ್ತಿದ್ದಾರೆ. ಸದ್ಯ ಶ್ರೀಲಂಕಾ ತಂಡ 65 ರನ್ನುಗಳ ಮುನ್ನಡೆಯಲ್ಲಿದೆ. ಇನ್ನೆರಡು ದಿನಗಳ ಆಟ ಬಾಕಿ ಉಳಿದಿದ್ದು ಈ ಪಂದ್ಯದಲ್ಲಿ ಫ‌ಲಿತಾಂಶ ಬರುವ ಸಾಧ್ಯತೆಯಿದೆ.

Advertisement

ಈ ಮೊದಲು 5 ವಿಕೆಟಿಗೆ 162 ರನ್ನುಗಳಿಂದ ದಿನಾಟದ ಆರಂಭಿಸಿದ ನ್ಯೂಜಿಲೆಂಡ್‌ ತಂಡವು ಬಾಲಂಗೋಚಿಗಳ ಉಪಯುಕ್ತ ಆಟದಿಂಧಾಗಿ ಉತ್ತಮ ಮೊತ್ತ ಪೇರಿಸಲು ಯಶಸ್ವಿಯಾಯಿತು. ಡೆರಿಲ್‌ ಮಿಚೆಲ್‌ ಮತ್ತು ಮ್ಯಾಟ್‌ ಹೆನ್ರಿ ಅವರ ಆಟದಿಂದಾಗಿ ಆತಿಥೇಯ ತಂಡ ಮುನ್ನಡೆ ದಾಖಲಿಸಲು ಸಮರ್ಥವಾಯಿತು. 40 ರನ್ನುಗಳಿಂದ ದಿನದಾಟ ಮುಂದುವರಿಸಿದ ಮಿಚೆಲ್‌ ಮೂರು ತಾಸುಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದರಲ್ಲದೇ 187 ಎಸೆತಗಳಿಂದ ಶತಕ ಸಿಡಿಸಿ ಸಂಭ್ರಮಿಸಿದರು. ಇದು ಟೆಸ್ಟ್‌ನಲ್ಲಿ ಅವರ ಐದನೇ ಮತ್ತು ಶ್ರೀಲಂಕಾ ವಿರುದ್ಧ ಮೊದಲ ಶತಕವಾಗಿದೆ.

ತನ್ನ ದೇಶದ ಪರ ಶತಕ ದಾಖಲಿಸುವುದು ಯಾವಾಗಲೂ ಖುಷಿಯ ವಿಷಯವಾಗಿದೆ. ತಾಳ್ಮೆಯ ಆಟದ ವೇಳೆ ಈ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಮಿಚೆಲ್‌ ಹೇಳಿದರು. ಮಿಚೆಲ್‌ಗೆ ಉತ್ತಮ ನೆರವು ನೀಡಿದ ಮ್ಯಾಟ್‌ ಹೆನ್ರಿ 75 ಎಸೆತಗಳಿಂದ 72 ರನ್‌ ಹೊಡೆದರು. ಇದು ಅವರ ಐದನೇ ಅರ್ಧಶತಕವಾಗಿದೆ.
ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ 355 ಮತ್ತು 3 ವಿಕೆಟಿಗೆ 83 (ಒಶಾದ ಫೆರ್ನಾಂಡೊ 28, ಮ್ಯಾಥ್ಯೂಸ್‌ 20 ಔಟಾಗದೆ, ಬ್ಲೇರ್‌ ಟಿಕ್ನರ್‌ 28ಕ್ಕೆ 3); ನ್ಯೂಜಿಲೆಂಡ್‌ 373 (ಟಾಮ್‌ ಲಾಥಮ್‌ 67, ಡ್ಯಾರಿಲ್‌ ಮಿಚೆಲ್‌ 102, ಮ್ಯಾಟ್‌ ಹೆನ್ರಿ 72, ಆಸಿತಾ ಫೆರ್ನಾಂಡಿಸ್‌ 85ಕ್ಕೆ 4, ಲಹಿರು ಕುಮಾರ 76ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next