Advertisement

ದಾಖಲೆಯ 7ನೇ ವಿಶ್ವಕಪ್‌ ಆಡಲಿರುವ ಗಪ್ಟಿಲ್‌

09:11 PM Sep 20, 2022 | Team Udayavani |

ಕ್ರೈಸ್ಟ್‌ಚರ್ಚ್‌: ನ್ಯೂಜಿಲೆಂಡ್‌ ಆರಂಭಕಾರ ಮಾರ್ಟಿನ್‌ ಗಪ್ಟಿಲ್‌ ದಾಖಲೆಯ 7ನೇ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಆಡಲಿದ್ದಾರೆ.

Advertisement

ಮಂಗಳವಾರ ಪ್ರಕಟಿಸಲಾದ ವಿಶ್ವಕಪ್‌ ತಂಡದಲ್ಲಿ  35 ವರ್ಷದ ಗಪ್ಟಿಲ್‌ ಕೂಡ ಸ್ಥಾನ ಸಂಪಾದಿಸಿದ್ದಾರೆ. ಇತ್ತೀಚಿನ ನ್ಯೂಜಿಲೆಂಡ್‌ನ‌ ಕೇಂದ್ರೀಯ ಗುತ್ತಿಗೆಯಿಂದ ಹೊರಗುಳಿದ ಟ್ರೆಂಟ್‌ ಬೌಲ್ಟ್ ಮತ್ತು ಜಿಮ್ಮಿ ನೀಶಮ್‌ ಕೂಡ ವಿಶ್ವಕಪ್‌ ತಂಡದಲ್ಲಿದ್ದಾರೆ. ಫಿನ್‌ ಅಲೆನ್‌ ಮತ್ತು ಮೈಕಲ್‌ ಬ್ರೇಸ್‌ವೆಲ್‌ ಇದೇ ಮೊದಲ ಸಲ ಹಿರಿಯರ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಆಡುವರು. ನ್ಯೂಜಿಲೆಂಡ್‌ ತನ್ನ ಮೊದಲ ಪಂದ್ಯವನ್ನು ಆತಿಥೇಯ ಆಸ್ಟ್ರೇಲಿಯ ವಿರುದ್ಧ ಅ. 22ರಂದು ಸಿಡ್ನಿಯಲ್ಲಿ ಆಡಲಿದೆ.

ನ್ಯೂಜಿಲೆಂಡ್‌ ತಂಡ: ಕೇನ್‌ ವಿಲಿಯಮ್ಸನ್‌ (ನಾಯಕ), ಟಿಮ್‌ ಸೌಥಿ, ಐಶ್‌ ಸೋಧಿ, ಮಿಚೆಲ್‌ ಸ್ಯಾಂಟ್ನರ್‌, ಗ್ಲೆನ್‌ ಫಿಲಿಪ್ಸ್‌, ಜಿಮ್ಮಿ ನೀಶಮ್‌, ಡ್ಯಾರಿಲ್‌ ಮಿಚೆಲ್‌, ಆ್ಯಡಂ ಮಿಲೆ°, ಮಾರ್ಟಿನ್‌ ಗಪ್ಟಿಲ್‌, ಲಾಕಿ ಫ‌ರ್ಗ್ಯುಸನ್‌, ಡೇವನ್‌ ಕಾನ್ವೆ, ಮಾರ್ಕ್‌ ಚಾಪ್‌ಮನ್‌, ಮೈಕಲ್‌ ಬ್ರೇಸ್‌ವೆಲ್‌, ಟ್ರೆಂಟ್‌ ಬೌಲ್ಟ್, ಫಿನ್‌ ಅಲೆನ್‌.

Advertisement

Udayavani is now on Telegram. Click here to join our channel and stay updated with the latest news.

Next