ಮುಂಬೈ: ಭಾರತದ ವಿರುದ್ಧ ಸತತ ಎರಡು ಏಕದಿನ ಪಂದ್ಯಗಳಲ್ಲಿ ಸೋಲನುಭವಿಸಿದ ನ್ಯೂಜಿಲ್ಯಾಂಡ್ ತಂಡವು ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ ಹಿನ್ನಡೆ ಅನುಭವಿಸಿದೆ. ರ್ಯಾಂಕಿಂಗ್ ನಲ್ಲಿ ಮೊದಲ ಸ್ಥಾನದಲ್ಲಿದ್ದ ಕಿವೀಸ್ ಇದೀಗ ತನ್ನ ಸ್ಥಾನ ಕಳೆದುಕೊಂಡಿದೆ.
ರಾಯ್ಪರದಲ್ಲಿ ಹೀನಾಯ ಸೋಲನುಭವಿಸಿದ ನ್ಯೂಜಿಲ್ಯಾಂಡ್ ತಂಡವು ಅಂಕ ಕಳೆದುಕೊಂಡಿದೆ. ಕಿವೀಸ್ ತಂಡವು ಎರಡನೇ ಸ್ಥಾನಕ್ಕೆ ಇಳಿದಿದೆ. ಸದ್ಯ ಭಾರತ, ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ತಲಾ 113 ಅಂಕಗಳೊಂದಿಗೆ ಇದೆ. ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದ್ದು, ಭಾರತ ಮೂರನೇ ಸ್ಥಾನದಲ್ಲಿದೆ.
ಇದನ್ನೂ ಓದಿ:ದ.ಕನ್ನಡದಲ್ಲಿ ಪೊಲೀಸರ ಬಲೆಗೆ ಬಿದ್ದ ದಿಲ್ಲಿ ಲೀಲಾ ಪ್ಯಾಲೆಸ್ ಹೋಟೆಲ್ ಗೆ 23 ಲಕ್ಷ ರೂ ವಂಚಿಸಿದ್ದ ವ್ಯಕ್ತಿ
ಆಸ್ಟ್ರೇಲಿಯಾ 112 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. 106 ಅಂಕಗಳೊಂದಿಗೆ ಪಾಕಿಸ್ಥಾನವು ಐದನೇ ಸ್ಥಾನದಲ್ಲಿದೆ.
Related Articles
ಕಿವೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯವನ್ನು ಗೆದ್ದರೆ ಭಾರತ ಏಕದಿನ ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನಕ್ಕೇರಲಿದೆ.
ಟಿ20ಯಲ್ಲಿ ನಂ.1 ಮತ್ತು ಟೆಸ್ಟ್‌ನಲ್ಲಿ ನಂ.2 ಆಗಿರುವ ಕಾರಣ ಭಾರತಕ್ಕೆ ಮೂರು ಸ್ವರೂಪಗಳಲ್ಲಿ ನಂ.1 ಸ್ಥಾನ ಪಡೆಯುವ ಅವಕಾಶವಿದೆ. 126 ಅಂಕಗಳೊಂದಿಗೆ ಆಸ್ಟ್ರೇಲಿಯಾ ಟೆಸ್ಟ್ ನಲ್ಲಿ ನಂ.1 ಸ್ಥಾನದಲ್ಲಿದೆ. 11 ಅಂಕಗಳಿಂದ ಭಾರತ ಹಿಂದಿದೆ. ಫೆಬ್ರವರಿ 9 ರಿಂದ ಭಾರತದಲ್ಲಿ ನಡೆಯಲಿರುವ ಬಹು ನಿರೀಕ್ಷಿತ 4-ಟೆಸ್ಟ್ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ.