Advertisement

5 ವರ್ಷಗಳ ಬಳಿಕ ಕಿವೀಸ್‌ ತಂಡಕ್ಕೆ ಮರಳಿದ ಮೆಕಾಯ್‌

12:30 AM Jan 21, 2019 | |

ವೆಲ್ಲಿಂಗ್ಟನ್‌: ಪ್ರವಾಸಿ ಭಾರತದೆದುರಿನ 3 ಪಂದ್ಯಗಳ ಟಿ20 ಸರಣಿಗೆ ನ್ಯೂಜಿಲ್ಯಾಂಡ್‌ ವನಿತಾ ತಂಡದಲ್ಲಿ ಭಾರೀ ಬದಲಾವಣೆ ಮಾಡಿಕೊಳ್ಳಲಾಗಿದೆ. ಬಲಗೈ ಬ್ಯಾಟ್ಸ್‌ಮನ್‌ ಫ್ರಾನ್ಸೆಸ್‌ ಮೆಕಾಯ್‌ ಅವರನ್ನು 5 ವರ್ಷಗಳ ಬಳಿಕ ತಂಡಕ್ಕೆ ಸೇರಿಸಿಕೊಂಡದ್ದು ಇದರಲ್ಲಿ ಪ್ರಮುಖವಾದದ್ದು.

Advertisement

ಕೇಟಿನ್‌ ಗರ್ರಿ, ರೋಸ್‌ಮೇರಿ ಮೈರ್‌ ಈ ತಂಡದ ಎರಡು ಹೊಸ ಮುಖಗಳು. ಇವರಲ್ಲಿ ಮೆಕಾಯ್‌ ಮತ್ತು ಗರ್ರಿ 2018-19ರ “ಸೂಪರ್‌ ಸ್ಮ್ಯಾಶ್‌’ ಸರಣಿಯಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರು. ಕ್ಯಾಂಟರ್‌ಬರಿ ಪರ ಆಡಿದ ಮೆಕಾಯ್‌ 2 ಶತಕ ಬಾರಿಸಿ ಮಿಂಚಿದ್ದರು. ಬಲಗೈ ಪೇಸ್‌ ಬೌಲರ್‌ ಮೈರ್‌ ಭಾರತದೆದುರಿನ ಅಭ್ಯಾಸ ಪಂದ್ಯದಲ್ಲಿ 28ಕ್ಕೆ 3 ವಿಕೆಟ್‌ ಉರುಳಿಸಿದ್ದರು.

ನ್ಯೂಜಿಲ್ಯಾಂಡ್‌ ತಂಡದಿಂದ ಹೊರಬಿದ್ದ ಪ್ರಮುಖರೆಂದರೆ ಮ್ಯಾಡಿ ಗ್ರೀನ್‌, ಲಾರೆನ್‌ ಡೌನ್‌, ಕ್ಯಾಟಿ ಪರ್ಕಿನ್ಸ್‌, ಹೋಲಿ ಹಡ್ಲ್ಸ್ಟೋನ್‌ ಮತ್ತು ಅನ್ನಾ ಪೀಟರ್‌ಸನ್‌.

ಫಾರ್ಮ್ನಲ್ಲಿರುವವರಿಗೆ ಆದ್ಯತೆ
“ನಾವು ಫಾರ್ಮ್ನಲ್ಲಿರುವ ಆಟಗಾರ್ತಿಯರಿಗೆ ಮೊದಲು ಅವಕಾಶ ನೀಡಬೇಕಾಗಿದೆ. ಆಗ ಸಹಜವಾಗಿಯೇ ಆಯ್ಕೆಗಾಗಿ ಆರೋಗ್ಯಕರ ಪೈಪೋಟಿ ಶುರುವಾಗುತ್ತದೆ. ತಂಡದ ಹಿತದೃಷ್ಟಿಯಿಂದ ಇದು ಒಳ್ಳೆಯದು’ ಎಂಬುದಾಗಿ ನ್ಯೂಜಿಲ್ಯಾಂಡ್‌ ತಂಡದ ಕೋಚ್‌ ಹೈಡಿ ಟಿಫ‌ನ್‌ ಹೇಳಿದ್ದಾರೆ.ಕಳೆದ ಟಿ20 ವಿಶ್ವಕಪ್‌ ಪಂದ್ಯಾವಳಿಯ ಲೀಗ್‌ ಮುಖಾಮುಖೀಯಲ್ಲಿ ಭಾರತ ತಂಡ ನ್ಯೂಜಿಲ್ಯಾಂಡಿಗೆ ಸೋಲುಣಿಸಿತ್ತು. ಇದರಿಂದ ಕಿವೀಸ್‌ಗೆ ಮುಂದಿನ ಸುತ್ತು ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ನ್ಯೂಜಿಲ್ಯಾಂಡ್‌ ಆಟಗಾರ್ತಿಯರು ಇದಕ್ಕೆ ಸೇಡು ತೀರಿಸಿಕೊಳ್ಳುವ ಹವಣಿಕೆಯಲ್ಲಿದ್ದಾರೆ.

ನ್ಯೂಜಿಲ್ಯಾಂಡ್‌ ತಂಡ: ಆ್ಯಮಿ ಸ್ಯಾಟರ್‌ವೈಟ್‌ (ನಾಯಕಿ), ಸುಝೀ ಬೇಟ್ಸ್‌, ಸೋಫಿ ಡಿವೈನ್‌, ಲೀಗ್‌ ಕಾಸ್ಪರೆಕ್‌, ಅಮೇಲಿಯಾ ಕೆರ್‌, ಕ್ಯಾಟಿ ಮಾರ್ಟಿನ್‌, ಬೆರ್ನಡೈನ್‌ ಬಿಝಿಡೆನೌಟ್‌, ಕೇಟಿÉನ್‌ ಗರ್ರಿ, ಹ್ಯಾಲಿ ಜೆನ್ಸೆನ್‌, ಫ್ರಾನ್ಸೆಸ್‌ ಮೆಕಾಯ್‌, ರೋಸ್‌ಮೇರಿ ಮೈರ್‌, ಹನ್ನಾ ರೋವ್‌, ಲೀ ಟಹುಹು.

Advertisement

ಭಾರತ-ನ್ಯೂಜಿಲ್ಯಾಂಡ್‌ ಸರಣಿ ವೇಳಾಪಟ್ಟಿ
ದಿನಾಂಕ    ಪಂದ್ಯ    ಸ್ಥಳ    ಆರಂಭ
ಜ. 24    1ನೇ ಏಕದಿನ    ನೇಪಿಯರ್‌    ಬೆ. 6.30
ಜ. 29    2ನೇ ಏಕದಿನ    ಮೌಂಟ್‌ ಮೌಂಗನುಯಿ    ಬೆ. 6.30
ಫೆ. 1    3ನೇ ಏಕದಿನ    ಹ್ಯಾಮಿಲ್ಟನ್‌    ಬೆ. 6.30
ಫೆ. 6    1ನೇ ಟಿ20    ವೆಲ್ಲಿಂಗ್ಟನ್‌    ಬೆ. 8.30
ಫೆ. 8    2ನೇ ಟಿ20    ಆಕ್ಲೆಂಡ್‌    ಬೆ. 8.30
ಫೆ. 10    3ನೇ ಟಿ20    ಹ್ಯಾಮಿಲ್ಟನ್‌    ಬೆ. 8.30

Advertisement

Udayavani is now on Telegram. Click here to join our channel and stay updated with the latest news.

Next