Advertisement

ಆತಿಥೇಯ ಐರ್ಲೆಂಡ್‌ ವಿರುದ್ಧ ನ್ಯೂಜಿಲ್ಯಾಂಡ್‌ 3-0 ಕ್ಲೀನ್‌ ಸ್ವೀಪ್‌ ಸಾಧನೆ

10:50 PM Jul 23, 2022 | Team Udayavani |

ಬೆಲ್‌ಫಾಸ್ಟ್‌: ಆತಿಥೇಯ ಐರ್ಲೆಂಡ್‌ ಎದುರಿನ 3ನೇ ಟಿ20 ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದ ನ್ಯೂಜಿಲ್ಯಾಂಡ್‌ ಸರಣಿಯನ್ನು ಕ್ಲೀನ್‌ ಸ್ವೀಪ್‌ ಆಗಿ ವಶಪಡಿಸಿಕೊಂಡಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಐರ್ಲೆಂಡ್‌ 6 ವಿಕೆಟಿಗೆ 174 ರನ್ನುಗಳ ಬೃಹತ್‌ ಮೊತ್ತ ದಾಖಲಿಸಿತು. ಆದರೆ ನ್ಯೂಜಿಲ್ಯಾಂಡ್‌ 19 ಓವರ್‌ಗಳಲ್ಲಿ ನಾಲ್ಕೇ ವಿಕೆಟಿಗೆ 180 ರನ್‌ ಬಾರಿಸಿ ಗೆದ್ದು ಬಂದಿತು. ಮೊದಲೆರಡು ಪಂದ್ಯಗಳಲ್ಲಿ ಕಿವೀಸ್‌ ಪಡೆ 31 ರನ್‌ ಹಾಗೂ 88 ರನ್ನುಗಳಿಂದ ಜಯಿಸಿತ್ತು.

ಚೇಸಿಂಗ್‌ ವೇಳೆ ಗ್ಲೆನ್‌ ಫಿಲಿಪ್ಸ್‌ ಅಜೇಯ 56 ರನ್‌ ಮಾಡಿ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಗಳೆರಡನ್ನೂ ತಮ್ಮದಾಗಿಸಿಕೊಂಡರು.

ಇದಕ್ಕೂ ಮೊದಲು ನ್ಯೂಜಿಲ್ಯಾಂಡ್‌ 3 ಪಂದ್ಯ ಗಳ ಏಕದಿನ ಸರಣಿಯಲ್ಲೂ ಐರ್ಲೆಂಡ್‌ಗೆ
ವೈಟ್‌ವಾಶ್‌ ಮಾಡಿತ್ತು. ಅಜೇಯವಾಗಿ ತನ್ನ ಪ್ರವಾಸವನ್ನು ಕೊನೆಗೊಳಿಸಿತು.

ಸಂಕ್ಷಿಪ್ತ ಸ್ಕೋರ್‌: ಐರ್ಲೆಂಡ್‌-6 ವಿಕೆಟಿಗೆ 174 (ಸ್ಟರ್ಲಿಂಗ್‌ 40, ಅಡೈರ್‌ ಔಟಾಗದೆ 37, ಟ್ಯುಕರ್‌ 28, ಸೋಧಿ 27ಕ್ಕೆ 2, ಟಿಕ್ನರ್‌ 35ಕ್ಕೆ 2).

Advertisement

ನ್ಯೂಜಿಲ್ಯಾಂಡ್‌-19 ಓವರ್‌ಗಳಲ್ಲಿ 4 ವಿಕೆಟಿಗೆ 180 (ಫಿಲಿಪ್ಸ್‌ ಔಟಾಗದೆ 56, ಮಿಚೆಲ್‌ 48, ಗಪ್ಟಿಲ್‌ 25, ಲಿಟ್ಲ 33ಕ್ಕೆ 2). ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಗ್ಲೆನ್‌ ಫಿಲಿಪ್ಸ್‌.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next