Advertisement

ನ್ಯೂಯಾರ್ಕ್‌ ಓಪನ್‌: ಮೊದಲ ಸುತ್ತಲ್ಲೇ ಎಡವಿದ ರಾಮ್‌ಕುಮಾರ್‌

12:30 AM Feb 14, 2019 | Team Udayavani |

ನ್ಯೂಯಾರ್ಕ್‌: ಅರ್ಹತಾ ಸುತ್ತಿನಲ್ಲಿ ಎರಡು ಉತ್ತಮ ಜಯದೊಂದಿಗೆ “ನ್ಯೂಯಾರ್ಕ್‌ ಓಪನ್‌’ ಕೂಟದ ಪ್ರಧಾನ ಸುತ್ತು ಪ್ರವೇಶಿಸಿದ ಭಾರತದ ರಾಮ್‌ಕುಮಾರ್‌ ರಾಮನಾಥನ್‌ ಮೊದಲ ಸುತ್ತಿನಲ್ಲೇ ಸೋತು ಕೂಟದಿಂದ ನಿರ್ಗಮಿಸಿದ್ದಾರೆ.

Advertisement

ರಾಮ್‌ಕುಮಾರ್‌ 3-6, 6-3, 1-6 ಸೆಟ್‌ಗಳಿಂದ ಅಮೆರಿಕದ ಜಾಸನ್‌ ಜುಂಗ್‌ ವಿರುದ್ಧ ಸೋತರು. ಮೊದಲ ಸೆಟ್‌ನಲ್ಲಿ ಮುಗ್ಗರಿಸಿದ ರಾಮ್‌ಕುಮಾರ್‌ ದ್ವಿತೀಯ ಸುತ್ತಿನಲ್ಲಿ ಅತ್ಯುತ್ತಮ ಪ್ರದರ್ಶನವಿತ್ತರು. ಆದರೆ ಅಂತಿಮ ಸೆಟ್‌ನಲ್ಲಿ ಮತ್ತೆ ಹಿನ್ನಡೆ ಕಂಡರು.

ಸ್ಯಾಮ್‌ ಕ್ವೆರ್ರಿಗೆ ಜಯ
ಅಮೆರಿಕದ ಸ್ಯಾಮ್‌ ಕ್ವೆರ್ರಿ ದಕ್ಷಿಣ ಆಫ್ರಿಕಾದ ಲಾಯ್ಡ ಹ್ಯಾರಿಸ್‌ ವಿರುದ್ಧ 7-6 (7-2), 6-2 ನೇರ ಸೆಟ್‌ಗಳ ಗೆಲುವು ದಾಖಲಿಸಿ ದ್ವಿತೀಯ ಸುತ್ತಿಗೆ ತಲುಪಿದ್ದಾರೆ. ಮುಂದಿನ ಪಂದ್ಯದಲ್ಲಿ ಸ್ಯಾಮ್‌ ಕ್ವೆರಿ ಕ್ರೊವೇಶಿಯದ ಐವೊ ಕಾರ್ಲೊವಿಕ್‌-ಮಾಲ್ಡೋವಾದ ರಾಡು ಅಲ್ಬೊಟ್‌ ನಡುವಿನ ವಿಜೇತರನ್ನು ಎದುರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next