Advertisement

ಆರ್‌ಆರ್‌ಆರ್‌ ನಿರ್ದೇಶ ರಾಜಮೌಳಿಗೆ ಎನ್‌ವೈಎಫ್ ಸಿಸಿ ಪ್ರಶಸ್ತಿ

09:46 PM Dec 03, 2022 | Team Udayavani |

“ಆರ್‌ಆರ್‌ಆರ್‌’ ಸಿನಿಮಾ ನಿರ್ದೇಶನಕ್ಕಾಗಿ ಎಸ್‌.ಎಸ್‌.ರಾಜಮೌಳಿ ಅವರಿಗೆ ಪ್ರತಿಷ್ಠಿತ ನ್ಯೂಯಾರ್ಕ್‌ ಫಿಲ್ಮ್ ಕ್ರಿಟಿಕ್ಸ್‌ ಸರ್ಕಲ್‌(ಎನ್‌ವೈಎಫ್ ಸಿಸಿ) ವತಿಯಿಂದ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಸಾಮಾಜಿಕ ಜಾಲತಾಣದ ಮೂಲಕ ಎನ್‌ವೈಎಫ್ ಸಿಸಿ ಶುಕ್ರವಾರ ರಾತ್ರಿ ಈ ಪ್ರಶಸ್ತಿ ಘೋಷಿಸಿದೆ.

Advertisement

ಈಗಲೂ ಪಶ್ಚಿಮ ರಾಷ್ಟ್ರಗಳಲ್ಲಿ “ಆರ್‌ಆರ್‌ಆರ್‌’ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ ನಾಯಕ ನಟರಾದ ರಾಮ್‌ಚರಣ್‌ ಮತ್ತು ಜೂನಿಯರ್‌ ಎನ್‌ಟಿಆರ್‌ ನಟಿಸಿದ್ದರು.

1920ರ ದಶಕದಲ್ಲಿ ಭಾರತೀಯ ಕ್ರಾಂತಿಕಾರಿಗಳಾದ ಸೀತಾರಾಮ ರಾಜು ಮತ್ತು ಕೊಮರಂ ಭೀಮ್‌ ಅವರ ನಿಜಜೀವನವನ್ನು ಆಧರಿಸಿ ಈ ಚಿತ್ರ ಮೂಡಿಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next