Advertisement

ಹೊಸವರ್ಷದ ಸಾಧ್ಯತೆ; ನಿರೀಕ್ಷೆಗಳು

11:50 PM Jan 01, 2023 | Team Udayavani |

ಆರ್ಥಿಕ, ತಂತ್ರಜ್ಞಾನ ಕ್ಷೇತ್ರಗಳು 2023ರಲ್ಲಿ ಹೊಸತನ್ನು ನೀಡಲು ಸಜ್ಜಾಗಿವೆ. ಕಳೆದ ವರ್ಷವಿಡೀ ಸುದ್ದಿಯಲ್ಲಿದ್ದ  ಟ್ವಿಟರ್‌ನ ಮುಖ್ಯಸ್ಥ ಎಲಾನ್‌ ಮಸ್ಕ್ ಈ ಬಾರಿಯೂ ಸುದ್ದಿಯಾಗಲು ತಯಾರಾಗಿದ್ದಾರೆ. ಇನ್ನು ಭಾರತದಲ್ಲಿ ಯುವ ಹೂಡಿಕೆದಾರರ ಸಂಖ್ಯೆಯಲ್ಲಿ ಏರಿಕೆಯ ನಿರೀಕ್ಷೆಯಿದೆ. ಕಾರು, ಮೊಬೈಲ್‌ ಕಂಪೆನಿಗಳು ಹೊಸ ಮಾಡೆಲ್‌ಗ‌ಳೊಂದಿಗೆ ಟ್ರೆಂಡ್‌ ಸೆಟ್‌ ಮಾಡಲು ಸನ್ನದ್ಧವಾಗಿವೆ.

Advertisement

ಮತ್ತಷ್ಟು ಬ್ಯಾಂಕ್‌ಗಳ ವಿಲೀನ
ಅಗ್ರ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾದ ಎಚ್‌ಡಿಎಫ್ಸಿ ತನ್ನ ಇನ್ನೊಂದು ಎಚ್‌ಡಿಎಫ್ಸಿ ಜತೆ ವಿಲೀನವಾಗುವ ಸಾಧ್ಯತೆ ಇದೆ. ಈ ಮೂಲಕ ಮಾರುಕಟ್ಟೆಯಲ್ಲಿನ ತನ್ನ ಸ್ಥಾನವನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲಿದೆ. ಉಳಿದಂತೆ ಯೆಸ್‌ ಬ್ಯಾಂಕ್‌ ಮತ್ತು ಐಡಿಬಿಐ ಅನ್ನು ಬೇರೆಯವರು ಖರೀದಿ ಮಾಡುವ ಸಾಧ್ಯತೆಗಳಿವೆ.

ರಿಯಲ್‌ ಎಸ್ಟೇಟ್‌
ಹಣದುಬ್ಬರದ ಕಾರಣದಿಂದಾಗಿ ಆರ್‌ಬಿಐ ರೆಪೋ ದರವನ್ನು ಹೆಚ್ಚಿಸಿಕೊಂಡು ಹೋಗುತ್ತಿರುವುದರಿಂದ ಗೃಹ ಸಾಲದ ಮೇಲಿನ ಬಡ್ಡಿ ದರ ಹೆಚ್ಚಳವಾಗುತ್ತಲೇ ಇದೆ. ಇದೇ ಲೆಕ್ಕಾಚಾರ 2023ರಲ್ಲೂ ಮುಂದುವರಿಯುವ ಸಾಧ್ಯತೆಗಳಿವೆ. ಯುವ ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಬರುವ ಸಾಧ್ಯತೆ ಇದೆ. ಅಲ್ಲದೆ ಸರಕಾರಗಳ ಗೃಹ ಯೋಜನೆಗಳನ್ನು ಬಳಕೆ ಮಾಡಿಕೊಂಡು, ಮತ್ತಷ್ಟು ಮನೆಗಳು ಖರೀದಿಯಾಗುವ ಸಾಧ್ಯತೆಗಳಿವೆ.

ಎಲಾನ್‌ ಮಸ್ಕ್  ಅಮೆರಿಕ ಅಧ್ಯಕ್ಷರಾಗ್ತಾರಾ?
ಡೊನಾಲ್ಡ್‌ ಟ್ರಂಪ್‌ ಅಮೆರಿಕ ಅಧ್ಯಕ್ಷರಾದ ಮೇಲೆ, ಎಲಾನ್‌ ಮಸ್ಕ್ ಏಕೆ ಅತ್ಯುನ್ನತ ಹುದ್ದೆಗೇರಬಾರದು? ಇಂಥದ್ದೊಂದು ಚರ್ಚೆ ಈಗಾಗಲೇ ಶುರುವಾಗಿದೆ. ಅಮೆರಿಕ ಪಾಲಿಗೆ 2023 ಅತ್ಯಂತ ಪ್ರಮುಖವಾದ ವರ್ಷ. ಈ ವರ್ಷದಲ್ಲಿ ರಿಪಬ್ಲಿಕನ್‌ ಮತ್ತು ಡೆಮಾಕ್ರಾಟ್‌ ಪಕ್ಷಗಳು ತಮ್ಮ ನಾಯಕನನ್ನು ಆಯ್ಕೆ ಮಾಡಿ, ವರ್ಷಾಂತ್ಯದ ವೇಳೆ ಹೊಸ ಅಧ್ಯಕ್ಷರೂ ಆಯ್ಕೆಯಾಗುತ್ತಾರೆ. ಒಂದು ವೇಳೆ ಮಸ್ಕ್ ಅಧ್ಯಕ್ಷರಾದರೆ ಟ್ವಿಟರ್‌ನ ರೀತಿಯಲ್ಲೇ ಶ್ವೇತಭವನದ ಸಿಬಂದಿಯನ್ನೆಲ್ಲ ಕೆಲಸದಿಂದ ತೆಗೆದು ಹಾಕುತ್ತಾರಾ?

ಫೋಲ್ಡೇಬಲ್ ಜಮಾನ
ಸದ್ಯ ಕೆಲವೇ ಕೆಲವು ಕಂಪೆನಿಗಳು ಮಾತ್ರ ಫೋಲ್ಡೇಬಲ್ ಸ್ಮಾರ್ಟ್‌ಫೋನ್‌ ಗಳನ್ನು ಬಿಡುಗಡೆ ಮಾಡಿವೆ. ಆದರೆ 2023ರಲ್ಲಿ ಇನ್ನೂ ಹಲವಾರು ಕಂಪೆನಿಗಳು ಈ ಟ್ರೆಂಡ್‌ಗೆ ಹೊಂದಿಕೊಳ್ಳುವ ಸಾಧ್ಯತೆ ಇದೆ. ಅಂದರೆ ಹಾನರ್‌, ಮೋಟಾರೋಲಾ, ಕ್ಸಿಯಾಮಿ ಕಂಪೆನಿಗಳೂ ಈ ಫೋಲ್ಡೇಬಲ್ ಜಮಾನಕ್ಕೆ ಬರುವ ಸಾಧ್ಯತೆ ಇದೆ. ಜತೆಗೆ ಹುವಾಯಿ, ಒಪ್ಪೋ, ವಿವೋ ಕೂಡ 2023ರಲ್ಲಿ ಫೋಲ್ಡೇಬಲ್ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡಲಿವೆ. ಆದರೂ ಮುಂದಿನ ವರ್ಷ ಸ್ಯಾಮ್‌ಸಂಗ್‌ ಕಂಪೆನಿಯೇ ಫೋಲ್ಡೇಬಲ್ ಸ್ಮಾರ್ಟ್‌ಫೋನ್‌ ರೇಸಿನಲ್ಲಿ ಮುನ್ನಡೆ ಕಾಯ್ದುಕೊಳ್ಳಲಿದೆ.

Advertisement

ನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳು
-ಆ್ಯಪಲ್‌ ಐಫೋನ್‌15
-ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌23 ಸರಣಿ
-ಗೂಗಲ್‌ ಪಿಕ್ಸಲ್‌ 7ಎ
-ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ54 5ಜಿ
-ಒನ್‌ಪ್ಲಸ್‌ 11

ನಿರೀಕ್ಷಿತ ಕಾರುಗಳು
-ಹುಂಡೈ ಐವೋನಿಕ್‌ 5
-ಸಿಟ್ರಾನ್‌ ಇಸಿ3 ಎಲೆಕ್ಟ್ರಿಕ್‌
-ಬಲೆನೋ ಕ್ರಾಸ್‌ ಎಸ್‌ಯುವಿ
-ಟಾಟಾ ಪಂಚ್‌ ಇವಿ
-ಮಹೀಂದ್ರಾ  ಎಕ್ಸ್‌ಯುವಿ400 ಎಲೆಕ್ಟ್ರಿಕ್‌

Advertisement

Udayavani is now on Telegram. Click here to join our channel and stay updated with the latest news.

Next