Advertisement

ಉದ್ಯಾನಗಳಲ್ಲಿ ಹೊಸ ವರ್ಷ ಆಚರಣೆ ನಿಷೇಧ

10:31 AM Dec 14, 2019 | Suhan S |

ಬೆಂಗಳೂರು: ಉದ್ಯಾನಗಳಲ್ಲಿ ಕ್ರಿಸ್‌ಮಸ್‌, ಹೊಸವರ್ಷ ಆಚರಿಸುವುದನ್ನು ಬಿಬಿಎಂಪಿ ನಿಷೇಧಿಸಿದೆ. ಕಳೆದ ಹಲವು ವರ್ಷಗಳಿಂದ ಸಾರ್ವಜನಿಕರು ಹುಟ್ಟಿದ ದಿನ, ಕ್ರಿಸ್‌ ಮಸ್‌ ಹಾಗೂ ಹೊಸ ವರ್ಷಾಚರಣೆ ಮಾಡುತ್ತಾ ಉದ್ಯಾನಗಳನ್ನು ಹಾಳು ಮಾಡುತ್ತಿದ್ದಾರೆ. ಮಧ್ಯಪಾನ ಮತ್ತು ಧೂಮಪಾನ ಸೇವನೆ ಮಾಡುವುದು, ಗಿಡ ಮರಗಳಿಗೆ ಹಾನಿ ಮಾಡುವುದು, ಕುಳಿತುಕೊಳ್ಳುವ ಬೆಂಚುಗಳು ಹಾಗೂ ಇತರೆ ಉಪಕರಣಗಳನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ.

Advertisement

ಪ್ರಮುಖ ಉದ್ಯಾನಗಳಲ್ಲಿ ಮಾತ್ರ ಇದಕ್ಕೆ ಕಡಿವಾಣ ಬಿದ್ದಿದ್ದು, ಉಳಿದ ಅನೇಕ ಉದ್ಯಾನಗಳು ಅಕ್ರಮ ಚಟುವಟಿಕೆ ತಾಣಗಳಾಗಿ ಮಾರ್ಪಟ್ಟಿವೆ. ಆದ್ದರಿಂದ ಪಾಲಿಕೆ ಪ್ರಸಕ್ತ ವರ್ಷದಿಂದ ಸಂಭ್ರಮಾಚರಣೆಗಳನ್ನು ನಿಷೇಧಿಸಲಾಗಿದ್ದು, ಈ ಕುರಿತು ಕೂಡಲೇ ನೋಟಿಸ್‌ ಸಿದ್ಧಪಡಿಸಿ ಎಲ್ಲ ವಿಭಾಗಕ್ಕೆ ಕಳುಹಿಸಲು ಆಯುಕ್ತರು ಅಧಿಕಾರಿಗಳಿಗೆ ಶುಕ್ರವಾರ ಸೂಚನೆ ನೀಡಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ 1,200ಕ್ಕೂ ಹೆಚ್ಚು ಉದ್ಯಾನಗಳದ್ದು, ಉದ್ಯಾನಗಳಿಗೆ ರಕ್ಷಣೆ ಕೊರತೆ ಎದುರಾಗಿದೆ. ಕೆಲವು ವಾರ್ಡ್‌ಗಳಲ್ಲಿ ಉದ್ಯಾನಗಳನ್ನು ರಕ್ಷಣೆ ಮಾಡಬೇಕಾದ ಭದ್ರತಾ ಸಿಬ್ಬಂದಿಗಳು ಹಣದಾಸೆಗೆ ಉದ್ಯಾನದ ಬೀಗವನ್ನು ಬೇರೊಬ್ಬರಿಗೆ ಕೊಟ್ಟು ಅಕ್ರಮ ಚಟುವಟಿಕೆ ನಡೆಸಲು ಕಾರಣವಾಗಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆವರೆಗೂ ಬಾಗಿಲು ತೆರಯಬೇಕಾದ ಉದ್ಯಾನಗಳು ಕೆಲ ವೇಳೆ ಮಧ್ಯಾಹ್ನವೇ ಬಾಗಿಲು ಹಾಕಿರುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next