Advertisement
ಬೆಳಗಾವಿಯಲ್ಲಿ ಮಾತನಾಡಿದ ಅವರು ಇನ್ನೊಂದು ವಾರದಲ್ಲಿ ಅದು ಶುರುವಾಗಲಿದೆ. ಇಲಾಖೆಯಿಂದ ಗುತ್ತಿಗೆದಾರರು ನಡೆಸುವ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ಫೋಟೋ ಆಥವಾ ವೀಡಿಯೋ ಸಮೇತ ದೂರು ಸಲ್ಲಿಸಿದರೆ ಅವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಈಗಾಗಲೇ ಇಂತಹ ಮೂರು ದೂರುಗಳು ಬಂದಿದ್ದು ಅದರ ತನಿಖೆ ನಡೆದಿದೆ. ಯಾವುದೇ ಬಿಲ್ ಪಾವತಿ ಮಾಡುವ ಮುನ್ನ ಕಾಮಗಾರಿಗಳನ್ನು ಪರಿಶೀಲಿಸಲಾಗುವುದು ಎಂದರು.
ಹಿಂದಿನ ಬಿಜೆಪಿ ಸರಕಾರದ ನೀತಿ ಗಳಿಂದ ರಾಜ್ಯದಲ್ಲಿ ಗುತ್ತಿಗೆದಾರರ ಸಾವಿರಾರು ಕೋಟಿ ರೂ. ಬಿಲ್ ಬಾಕಿ ಉಳಿದಿದೆ. ಲೋಕೋಪಯೋಗಿ ಇಲಾಖೆಯೊಂದರಲ್ಲೇ 6,000 ಕೋಟಿ ಬಾಕಿ ಇದೆ. ಇಲಾಖೆಗೆ ಇರುವ ಮೊತ್ತ 1,500 ಕೋಟಿ ರೂ. ಟೆಂಡರ್ ನಿಯಮಗಳ ಪ್ರಕಾರ ಒಂದು ಬಾರಿಗೆ ಮೂರನೇ ಒಂದು ಭಾಗದಷ್ಟು (ಶೇ. 33) ಬಿಲ್ ಕೊಡಬೇಕಾಗಿದೆ. ಇದನ್ನು ನೋಡಿದರೆ ಗುತ್ತಿಗೆದಾರರ ಬಾಕಿ ಪಾವತಿಗೆ ಎರಡರಿಂದ ಮೂರು ವರ್ಷ ಬೇಕಾಗುತ್ತದೆ. ಈ ಬಿಲ್‌ಗಳು ಬಾಕಿ ಉಳಿಯಲು ಕಾಂಗ್ರೆಸ್ ಸರಕಾರ ಕಾರಣ ಅಲ್ಲ. ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಕಾರಣ ಎಂದರು ಸತೀಶ್. ಬೊಮ್ಮಾಯಿ ಸರಕಾರ ಮಂಡಿಸಿದ್ದ ಬಜೆಟ್‌ನ ಹಣವನ್ನು ನಮ್ಮ ಸರಕಾರ ಬೇರೆ ಕಡೆ ತಿರುಗಿಸಿಲ್ಲ. ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ವಿವಿಧ ಸಂಪನ್ಮೂಲಗಳಿಂದ 40 ಸಾವಿರ ಕೋಟಿ ರೂ.ಗಳನ್ನು ಐದು ಗ್ಯಾರಂಟಿ ಯೋಜನೆಗಳಿಗೆ ಒದಗಿಸಿದ್ದಾರೆ ಎಂದರು.