Advertisement

ಆನ್‌ಲೈನ್‌ ಶಿಕ್ಷಣ ಶಿಕ್ಷಣಾಸಕ್ತರಿಗೆ ಹೊಸ ದಾರಿ

11:14 PM Sep 10, 2019 | mahesh |

21ನೇ ಶತಮಾನದಲ್ಲಿ ಎಲ್ಲವೂ ಆನ್‌ಲೈನ್‌. ವಿದ್ಯುತ್‌ ಬಿಲ್ನಿಂದ ಹಿಡಿದು ತಿನ್ನುವ ಆಹಾರಗಳನ್ನು ಕೂಡ ಇಂಟರ್ನೆಟ್ ಮುಖೇನ ಆರ್ಡರ್‌ ಮಾಡುತ್ತೇವೆ. ಶಿಕ್ಷಣ ಕ್ಷೇತ್ರದಲ್ಲೂ ಬದಲಾವಣೆಯ ಗಾಳಿ ಬೀಸಿದೆ. ಶಾಲೆಗೆ ಹೋಗಿ ಶಿಕ್ಷಣ ಪಡೆಯುತ್ತಿದ್ದ ಕಾಲದಿಂದ, ದೂರ ಶಿಕ್ಷಣ ವ್ಯವಸ್ಥೆ ಬಂತು. ಇದೀಗ ಗುರುವಿನ ಸಹಾಯವಿಲ್ಲದೇ ಇಂಟರ್ನೆಟ್ ಮೂಲಕ ಜ್ಞಾನಿಗಳಾಗುವ ಕಾಲ ಬಂದಿದೆ. ಇಲ್ಲಿ ಇಂರ್ಟನೆಟ್ ನಮ್ಮ ಗುರುವಾಗಿ ಬದಲಾಗಿದೆ. ಅಲ್ಲದೆ ಸ್ವಯಂ ಕಲಿಕೆಗೆ ಇಂದೊಂದು ಉತ್ತಮ ದಾರಿ.

Advertisement

ಇಂಟರ್ನೆಟ್ ಯುಗ ಬಲಶಾಲಿಯಾಗಿ ಬೆಳೆಯುತ್ತಿದ್ದಂತೆ ಎಲ್ಲ ವ್ಯವಹಾರಗಳೂ ಆನ್‌ಲೈನ್‌ ಮಯವಾಗಿವೆ. ವಿಶೇಷವೆಂದರೆ ಶಿಕ್ಷಣವನ್ನೂ ಆನ್‌ಲೈನ್‌ ಮುಖಾಂತರ ಪಡೆಯುವಂತಹ ಯುಗ ಇದಾಗಿದೆ. ಯೂಟ್ಯೂಬ್‌ ಚಾನೆಲ್ಗಳ ಮುಖಾಂತರ, ವಿವಿಧ ಶಿಕ್ಷಣ ಸಂಸ್ಥೆಗಳ ವೆಬ್‌ಸೈಟ್‌ಗಳ ಮುಖಾಂತರ ಆನ್‌ಲೈನ್‌ ಶಿಕ್ಷಣ ಪಡೆದು ಪಳಗಲು ಸಾಧ್ಯವಾಗುತ್ತಿದೆ. ಇದು 21ನೇ ಶತಮಾನದ ಬಹುದೊಡ್ಡ ಕೊಡುಗೆಯೂ ಆಗಿದೆ.

ದೂರ ಶಿಕ್ಷಣದ ಮಾದರಿಯಲ್ಲೇ ಹಲವು ಕೋರ್ಸ್‌ಗಳನ್ನು ಆನ್‌ಲೈನ್‌ ಮೂಲಕ ಕಲಿಯುವುದು ಮತ್ತು ಕ್ಷೇತ್ರವೊಂದರ ಬೇಸಿಕ್‌ ಜ್ಞಾನ ಪಡೆಯುವುದು ಇದರ ಉದ್ದೇಶ. ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಅಲ್ಪಾವಧಿ ಕೋರ್ಸ್‌ಗಳನ್ನು ಆನ್‌ಲೈನ್‌ ಮೂಲಕ ನೀಡುತ್ತಿವೆ. ಆದರೆ ಇದಕ್ಕೆ ಯಾವುದೇ ಮಾನ್ಯತೆಗಳಿರುವುದಿಲ್ಲ. ಆದರೆ ಕೆಲವು ವಿವಿಗಳೂ ಕೂಡಾ ಆನ್‌ಲೈನ್‌ ಕೋರ್ಸ್‌ಗಳಿಗೆ ಅವಕಾಶ ಕಲ್ಪಿಸಿರುವುದು ಕಲಿಕಾ ಹಸಿವಿನಿಂದ ಬಳಲುವವರಿಗೆ ಚೇತೋಹಾರಿ ಆಹಾರವಾಗಿ ಪರಿಣಮಿಸಿದೆ.

ಆನ್‌ಲೈನ್‌ನಲ್ಲಿ ಕನ್ನಡ ಕಲಿಕೆ
ಆನ್‌ಲೈನ್‌ ಮೂಲಕವೇ ಕನ್ನಡ ಕಲಿಸುವ ಪರಿಪಾಠವೂ ಪ್ರಸ್ತುತ ನಡೆಯುತ್ತಿದೆ. ಮೈಸೂರಿನ ಭಾರತೀಯ ಭಾಷಾ ಸಂಸ್ಥಾನವು ಈ ಕಲಿಕೆಯ ಹಾದಿ ಯನ್ನು ತೋರಿಸಿಕೊಟ್ಟಿದೆ. ವೆಬ್‌ಸೈಟ್ವೊಂದರ ಮೂಲಕ ಕನ್ನಡ ಕಲಿಕೆ ಕೋರ್ಸ್‌ನ್ನು ಈ ಸಂಸ್ಥೆ ನೀಡುತ್ತಿದ್ದು, ಕನ್ನಡ ಕಲಿಕಾಸಕ್ತ ಕನ್ನಡೇತರ ರಿಂದ ಉತ್ತಮ ಪ್ರತಿಕ್ರಿಯೆಯೂ ಈ ಕೋರ್ಸ್‌ಗಿದೆ.

ಕಲಿಯುವ ಮುನ್ನ..
ಆನ್‌ಲೈನ್‌ ಶಿಕ್ಷಣ ಜನಪ್ರಿಯವಾಗುತ್ತಿದ್ದರೂ, ಸಾಂಪ್ರದಾಯಿಕ ಶಿಕ್ಷಣದ ಮಹತ್ವ ಅದಕ್ಕಿಲ್ಲ. ಆದ್ದರಿಂದ ವೃತ್ತಿ ಬದುಕಿಗೆ ಆಸರೆಯಾಗಿ ಆನ್‌ಲೈನ್‌ ಶಿಕ್ಷಣ ಪಡೆಯದಿರುವುದು ಒಳಿತು. ಕೇವಲ ಕಲಿಕಾಸಕ್ತಿ ಅಥವಾ ಸಮಯದ ಅಭಾವವಿದ್ದಲ್ಲಿ ಮಾತ್ರ ಆನ್‌ಲೈನ್‌ ಶಿಕ್ಷಣಕ್ಕೆ ಮುಂದಾಗುವುದು ಉತ್ತಮ. ಕೆಲವೊಂದು ಶಿಕ್ಷಣ ಸಂಸ್ಥೆಗಳೂ ಕೂಡ ಆನ್‌ಲೈನ್‌ ಶಿಕ್ಷಣಕ್ಕೆ ಮೊರೆ ಹೋಗಿವೆ. ಕಾಲೇಜಿಗೆ ಬರಲು ಸಾಧ್ಯವಾಗದವರಿಗೆ ನೆರವಾಗಲು ಶಿಕ್ಷಣ ಸಂಸ್ಥೆಗಳು ಈ ವ್ಯವಸ್ಥೆಯನ್ನು ಪರಿಚಯಿಸಿದೆ. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌, ವೈದ್ಯಕೀಯ, ದಂತ ವೈದ್ಯಕೀಯ, ನರ್ಸಿಂಗ್‌, ವಾಸ್ತುಶಿಲ್ಪ, ಫಿಸಿಯೋಥೆರಪಿ ಕೋರ್ಸ್‌ ಗಳನ್ನು ಆನ್‌ಲೈನ್‌ನಲ್ಲಿ ಕಲಿಯುವ ಬದಲು ಸಾಂಪ್ರದಾಯಿಕ ತರಗತಿ ಶಿಕ್ಷಣ ಮತ್ತು ಪ್ರಾಯೋಗಿಕ ಶಿಕ್ಷಣದ ಮೂಲಕವೇ ಗಳಿಸಿಕೊಳ್ಳಬೇಕು.

ತಾಂತ್ರಿಕ ಶಿಕ್ಷಣವೂ ಆನ್‌ಲೈನ್‌ನಲ್ಲಿ
ತಾಂತ್ರಿಕ ಶಿಕ್ಷಣವನ್ನು ಆನ್‌ಲೈನ್‌ನಲ್ಲಿ ಪಡೆದುಕೊಳ್ಳಲೂ ಇಂದು ಸಾಧ್ಯವಾಗುತ್ತಿದೆ. ಕೋಟ್ ಅಕಾಡೆಮಿ ಉಚಿತ ಕೋಡಿಂಗ್‌ ತರಗತಿಗಳನ್ನು 12 ಪ್ರೋಗ್ರಾಮಿಂಗ್‌ ಮತ್ತು ಮಾರ್ಕ್‌ ಅಪ್‌ ಭಾಷೆಗಳಲ್ಲಿ ಪಡೆಯುವ ಅವಕಾಶವಿದೆ. ಪೈಥಾನ್‌, ರುಬಿ, ಜಾವಾ ಸ್ಕ್ರಿಪ್ಟ್, ಎಚ್ಟಿಎಂಎಲ್ ಸೇರಿದಂತೆ ನಾನಾ ತಾಂತ್ರಿಕ ಕೌಶಲಗಳನ್ನು ಇದರಿಂದ ಗಳಿಸಬಹುದು. ವೆಬ್‌ ಡೆವಲಪ್‌ಮೆಂಟ್ ಬೇಸಿಕ್‌ ವಿಷಯಗಳ ಬಗ್ಗೆ ಡ್ಯಾಶ್‌ ಜನರಲ್ ಎಸೆಂಬ್ಲಿಯಲ್ಲಿ ಕಲಿಯುವ ಅವಕಾಶವಿದೆ.

ಪದವಿ, ಸ್ನಾತಕೋತ್ತರ ಪದವಿ…
ದೇಶದ ಅತ್ಯಂತ ಹಳೆಯ ವಿವಿಗಳಲ್ಲಿ ಒಂದಾದ ಮೈಸೂರು ವಿವಿಯು ಮ್ಯಾಸಿವ್‌ ಓಪನ್‌ ಆನ್‌ಲೈನ್‌ ಕೋರ್ಸ್‌ ಗಳಿಗೆ ‘ಸ್ವಯಂ’ ವೇದಿಕೆಯ ಮೂಲಕ ಅವಕಾಶ ಕಲ್ಪಿಸಿದೆ. ಡಿಜಿಟಲ್ ಇಂಡಿಯಾ ಅಭಿಯಾನದಲ್ಲಿ ಸ್ವಯಂ ಆನ್‌ಲೈನ್‌ ಶಿಕ್ಷಣ ಮೂಲಕ ಯಾರು ಬೇಕಾದರೂ, ದೇಶದ ಯಾವ ಮೂಲೆಯಿಂದಲೂ ಆನ್‌ಲೈನ್‌ ಮೂಲಕ ಅಲ್ಪ ಖರ್ಚಿನಲ್ಲಿ ಕೋರ್ಸ್‌ಗಳನ್ನು ಕಲಿಯಲು ಅವಕಾಶ ಕಲ್ಪಿಸಲಾಗಿದೆ. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಆಧಾರದಲ್ಲಿ ಈ ಆನ್‌ಲೈನ್‌ ಕೋರ್ಸ್‌ಗಳು ರೂಪಿತವಾಗಿವೆ. ಪದವಿ, ಸ್ನಾತಕೋತ್ತರ, ಡಿಪ್ಲೊಮಾ, ಪಿಜಿ ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್‌ನ 55 ವಿವಿಧ ಕೋರ್ಸ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಿವೆ.
Advertisement

ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next