Advertisement

ಜಯರಾಮ್ ಜನ ಸೇವಾ ಸಂಘದಿಂದ 5 ಲಕ್ಷ ರೂ ವೆಚ್ಚದ ಮುಕ್ತಿ ವಾಹನ ಉಚಿತವಾಗಿ ಸಮರ್ಪಣೆ

12:38 PM Dec 02, 2021 | Team Udayavani |

ಚಿಕ್ಕಜಾಜೂರು : ಮಳೆಗಾಲದಲ್ಲಿ ಮರಣ ಹೊಂದಿದದವರ ಶವಸಂಸ್ಕಾರ ಮಾಡಲು ಚಿಕ್ಕಜಾಜೂರು ಗ್ರಾಮ ಹಾಗೂ ಈ ಭಾಗದ ಸುತ್ತಮುತ್ತಲ ಗ್ರಾಮಗಳ ಸಾರ್ವಜನಿಕರು ಅನುಭವಿಸುವ ಸಮಸ್ಯೆಗಳನ್ನು ಕಂಡು ಮರಣ ಹೊಂದಿದ ತನ್ನ ಸ್ನೇಹಿತನ ನೆನಪಿಗಾಗಿ ಗ್ರಾಮದ ಹಿತಕೋಸ್ಕರ ಜಯರಾಮ್ ಜನ ಸೇವಾ ಸಂಘ ವನ್ನು ರಚಿಸಿ ಕೋವಿಡ್ ಸಮಯದಲ್ಲಿ ಜನ ಸಾಮಾನ್ಯರಿಗೆ ಆಹಾರದ ಕಿಟ್ ಗಳನ್ನು ನೀಡಿ ಜನರ ಪ್ರಶಂಸೆಗೆ ಪಾತ್ರರಾದ ಜಯರಾಮ್ ಜನ ಸೇವಾ ಸಂಘ ದವರು ಗ್ರಾಮಸ್ಥರ ಸಹಕಾರದೊಂದಿಗೆ ಇಂದು ಇನ್ನೊಂದು ಹೆಜ್ಜೆ ಮುಂದೆ ಇಟ್ಟು ಸುಮಾರು 5 ಲಕ್ಷ ಮೌಲ್ಯದ ಮುಕ್ತಿ ವಾಹನವನ್ನು ಗ್ರಾಮದ ಜನರಿಗೆ ಅನುಕೂಲವಾಗುವಂತೆ ಉಚಿತವಾಗಿ ಸಮರ್ಪಿಸಿದ್ದಾರೆ,

Advertisement

ಯಾವುದೇ ಜಾತಿ ಭೇದವಿಲ್ಲದೆ ಚಿಕ್ಕಜಾಜೂರು ಹಾಗೂ ಸುತ್ತಮುತ್ತಲ ಗ್ರಾಮದ ಜನ ತನ್ನ ಕುಟುಂಬದ ಸದಸ್ಯರು ಮರಣದ ನಂತರ ಶವಸಂಸ್ಕಾರ ಸ್ಥಳಕ್ಕೆ ಮೃತದೇಹ ಸಾಗಿಸಲು ಮುಕ್ತಿ ವಾಹನದ ಅವಶ್ಯಕತೆ ಇದ್ದರೆ ವಾಹನ ಚಾಲನೆಯಲ್ಲಿ ಅನುಭವವುಳ್ಳ ಚಾಲಕನನ್ನು ಕರೆತಂದು ಮುಕ್ತಿವಾಹನಕ್ಕೆ ಡೀಸೆಲ್ ಹಾಕಿಸಿಕೊಂಡು ಬಳಸಬಹುದು, ಶವಸಂಸ್ಕಾರದ ನಂತರ ವಾಹನವನ್ನು ಶುಭ್ರವಾಗಿ ಸ್ವಶ್ಚಗೊಳಿಸಿ ಯಥಾಸ್ಥಿತಿ ವಾಹನ ನಿಲುಗಡೆ ಸ್ಥಳಕ್ಕೆ ನಿಲ್ಲಿಸಿದರೆ ಸಾಕು. ಇದಕ್ಕೆ ಯಾವುದೇ ಬಾಡಿಗೆ ವಗೈರೆ ಇರುವುದಿಲ್ಲ ಎಂದು ಜಯರಾಮ್ ಜನ ಸೇವಾ ಸಂಘದವರು ತಿಳಿಸಿದ್ದಾರೆ.

ಇದನ್ನೂ ಓದಿ:- ಉತ್ತರದ ಮದುವೆಗೆ ದಕ್ಷಿಣದ ಸವಿರುಚಿ : ಸಹೋದರರ ತಂಡದಿಂದ ನವ ಖಾದ್ಯೋದ್ಯಮ
ಇಂದು ಬೆಳಿಗ್ಗೆ ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದ ಆವರಣದಲ್ಲಿ ಮುಕ್ತಿವಾಹನವನ್ನು ಉದ್ಘಾಟಿಸಿ ಚಾಲನೆ ನೀಡಿದರು.

ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ,ಎಂ,ಶಿವಕುಮಾರ್, ಕುಮಾರ್ ಆರಾಧ್ಯ, ಗ್ರಾ,ಪಂ ಉಪಾಧ್ಯಕ್ಷ ಪಿ,ಎಸ್,ಮೂರ್ತಿ, ಬಿ,ಪುಟ್ಟಸ್ವಾಮಿ, ಮಠದ ಬಸವರಾಜಯ್ಯ, ಗರಗಜ್ಜರ ಸಿದ್ದಪ್ಪ, ಸೀನಪ್ಪ, ಜ,ಜ,ಸೇ,ಸಂಘದ ಸಿ, ಸೋಮಶೇಖರ್, ಕೆ,ಎಂ,ಬಸವರಾಜ್, ಕೆ,ಎಸ್,ಸಿದ್ಧೇಶ್, ಬಿ,ವಿ,ರಾಜು, ಬಿ,ಪಿ,ಗಿರೀಶ್, ಹಗೇದ್ ಹಾಲೇಶ್, ಪವನ್, ಗ್ರಾಪಂ ಸದಸ್ಯ ಚಂದ್ರು, ಜಮೀರ್ ಪಾಷ, ಬಾಬು, ಗಂಗಾಧರ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು,

Advertisement

Udayavani is now on Telegram. Click here to join our channel and stay updated with the latest news.

Next