ನವದೆಹಲಿ: ಕೋವಿಡ್ 19 ಲಸಿಕೆಯನ್ನು ಕೇಂದ್ರ ಸರ್ಕಾರವೇ ನೇರವಾಗಿ ಖರೀದಿಸಿ ರಾಜ್ಯ ಸರ್ಕಾರಗಳಿಗೆ ಸರಬರಾಜು ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ಬೆನ್ನಲ್ಲೇ ಈ ಯೋಜನೆಗೆ ಸುಮಾರು 50,000 ಸಾವಿರ ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಇದನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದು ವಿತ್ತ ಸಚಿವಾಲಯ ಮಂಗಳವಾರ(ಜೂನ್ 08) ತಿಳಿಸಿದೆ.
ಇದನ್ನೂ ಓದಿ:ಬಿಜೆಪಿಯಲ್ಲಿ ಶೇ.90 ರಷ್ಟು ಮಂದಿ ಬೇರೆ ಪಕ್ಷಗಳಿಂದ ಬಂದವರೇ ಇರುವುದು: ಸಚಿವ ಬಿ.ಸಿ.ಪಾಟೀಲ್
“ನಮ್ಮಲ್ಲಿ ಫಂಡ್ಸ್ ಇರುವುದರಿಂದ ನಮಗೆ ತಕ್ಷಣವೇ ಹೆಚ್ಚುವರಿ ಅನುದಾನದ ಮೊರೆ ಹೋಗಬೇಕಾದ ಅಗತ್ಯವಿಲ್ಲ. ಸಂಸತ್ತಿನ ಚಳಿಗಾಲದ ಅಧಿವೇಶನ ಸಮೀಪಿಸುವ ವೇಳೆ ನಾವು ಎರಡನೇ ಸುತ್ತಿನ ಲಸಿಕೆ ಅಭಿಯಾನದ ಹಂತದಲ್ಲಿ ಇರುತ್ತೇವೆ. ಪ್ರಸ್ತುತ ನಮ್ಮಲ್ಲಿ ಲಸಿಕೆಗೆ ಅಗತ್ಯವಿರುವ ಹಣಕಾಸು ಇದ್ದಿರುವುದಾಗಿ ಸಚಿವಾಲಯದ ಮೂಲಗಳು ವಿವರಿಸಿದೆ.
ಭಾರತಕ್ಕೆ ಅಗತ್ಯವಿರುವ ಲಸಿಕೆಗಾಗಿ ಇನ್ನು ಮುಂದೆ ವಿದೇಶಿ ಲಸಿಕೆಗಳನ್ನು ಹೆಚ್ಚು ಅವಲಂಬಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಲಸಿಕೆ ಯೋಜನೆಯಲ್ಲಿ ಭಾರತ್ ಬಯೋಟೆಕ್, ಸೀರಮ್ ಇನ್ಸ್ ಟಿಟ್ಯೂಟ್ ಮತ್ತು ನೂತನ ಬಯೋ ಇ ನಮ್ಮ ಜನಸಂಖ್ಯೆಗೆ ಅಗತ್ಯವಿರುವಷ್ಟು ಲಸಿಕೆಯನ್ನು ಸರಬರಾಜು ಮಾಡಲಿದೆ ಎಂದು ಮೂಲಗಳು ಹೇಳಿವೆ.
ಮುಂದಿನ ವರ್ಷದ ಜನವರಿವರೆಗೂ ಮೋಡೆರ್ನಾ ಲಸಿಕೆ ಭಾರತದಲ್ಲಿ ಲಭ್ಯವಾಗುವ ಸಾಧ್ಯತೆ ಇಲ್ಲ. ಇದರ ಹೊರತಾಗಿಯೂ ಭಾರತದಲ್ಲಿ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್, ಸೀರಂ ಇನ್ಸ್ ಟಿಟ್ಯೂಟ್ ನ ಕೋವಿಶೀಲ್ಡ್ ಮತ್ತು ರಷ್ಯಾದ ಸ್ಫುಟ್ನಿಕ್ v ಬಳಸಲು ಅನುಮತಿ ನೀಡಲಾಗಿದೆ.