Advertisement

ಸೂಕ್ಷ್ಮ ಪ್ರದೇಶಗಳಿಗೆ ಹೊಸ ಮಾದರಿಯ ಬ್ಯಾರಿಕೇಡ್‌ಗಳು

03:45 AM Jul 10, 2017 | Team Udayavani |

ಬಜಪೆ: ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆಯ ಅನುಕೂಲಕ್ಕಾಗಿ ಈಗ ಪೊಲೀಸರಿಗೆ ಹೊಸ ವಿಸ್ತರಣ ಬ್ಯಾರಿಕೇಡ್‌ಗಳ ಸಹಾಯ ಸಿಕ್ಕಿವೆ. ಬಜಪೆ ಪೊಲೀಸ್‌ ಠಾಣೆಗೆ ಇಂತಹ ಮೂರು ಬ್ಯಾರಿಕೇಡ್‌ಗಳು ತಲುಪಿದ್ದು, ವಾಹನ ತಪಾಸಣೆಗೆ ತುಂಬಾ ಅನುಕೂಲವಾಗಿದೆ.

Advertisement

ಈಗಾಗಲೇ ರಾಜ್ಯ ಹೆದ್ದಾರಿ 67ರ ಬಜಪೆ ಚೆಕ್‌ ಪೋಸ್ಟ್‌ನಲ್ಲಿ ಎರಡು ಹಾಗೂ ಭಟ್ರಕರೆಯಲ್ಲಿ ಈ ವಿಸ್ತರಣಾ ಬ್ಯಾರಿಕೇಡ್‌ಗಳನ್ನು ಇಡಲಾಗಿದೆ. 

ಬಜಪೆ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ 10 ಕಡೆ ಚೆಕ್‌ಪೋಸ್ಟ್‌ ಗಳಲ್ಲಿ ಬ್ಯಾರಿಕೇಡ್‌ಗಳನ್ನು ಇಟ್ಟು ವಾಹನಗಳ ತಪಾಸಣೆ ನಡೆಯುತ್ತಿದೆ.

ಇದನ್ನು ಸುಮಾರು 5 ಮೀಟರ್‌ನಷ್ಟು ಎಳೆಯಬಹುದು. ಜತೆಗೆ ಒಂದು ಕಡೆ ಯಿಂದ ಇನ್ನೊಂದು ಕಡೆಗೆ ಕೊಂಡೊಯ್ಯಲು ಕೂಡ ಅನುಕೂಲಕರವಾಗಿದೆ. ಇದರಲ್ಲಿ ರಿಫ್ಲೆಕ್ಟರ್‌ ವ್ಯವಸ್ಥೆಯೂ ಇದ್ದು, ರಾತ್ರಿ ವೇಳೆಯಲ್ಲಿ ಇದನನ್ನು ದೂರದಿಂದಲೇ ಗಮನಿಸಲು ಸಾಧ್ಯವಾಗುತ್ತದೆ.  

ಜಿಲ್ಲೆಯಲ್ಲಿ ಉಂಟಾಗಿರುವ ಗಲಭೆ ಹಿನ್ನೆಲೆಯಲ್ಲಿ ಬಜಪೆಗೆ ಶಿವಮೊಗ್ಗ, ತುಮಕೂರಿನಿಂದ ಪೊಲೀಸರು ಆಗಮಿಸಿದ್ದಾರೆ. ಡಿವೈಎಸ್‌ಪಿ, ಇನ್‌ಸ್ಪೆಕ್ಟರ್‌ಗಳು ಆಗಮಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಗಸ್ತು ತಿರುಗುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next