Advertisement
ಆಗಾಗ ಟ್ರೆಂಡ್ ಬದಲಿಸುವ, ಹೊಸ ಟ್ರೆಂಡ್‌ಗೆ ಒಗ್ಗಿಕೊಳ್ಳುವ ಕ್ಷೇತ್ರವೆಂದರೆ ಅದು ಸಿನಿಮಾ ಕ್ಷೇತ್ರ.ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಆಗುತ್ತಾ, ಪ್ರೇಕ್ಷಕರಿಗೆ ಹೊಸತನ ನೀಡುತ್ತಾ ಬರುವ ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ಹೊಸ ಟ್ರೆಂಡ್ ಒಂದು ನಡೆಯುತ್ತಿದೆ. ಅದುಕ್ಯಾರೆಕ್ಟರ್ ಟೈಟಲ್ ಟ್ರೆಂಡ್. ಏನಿದುಕ್ಯಾರೆಕ್ಟರ್ ಟೈಟಲ್ ಟ್ರೆಂಡ್ ಎಂದು ನೀವುಕೇಳಬಹುದು. ನೀವು ಸೂಕ್ಷ್ಮ ವಾಗಿ ಗಮನಿಸಿದರೆ ನಿಮಗೆ ಈ ಟ್ರೆಂಡ್ಗೊತ್ತಾಗುತ್ತದೆ. ಸಿನಿಮಾದ ಹೀರೋಕ್ಯಾರೆಕ್ಟರ್ ಹೆಸರನ್ನೇ ಈಗ ಚಿತ್ರದ ಟೈಟಲ್‌ನ್ನಾಗಿಸುವ ಟ್ರೆಂಡ್ ನಡೆಯುತ್ತಿದೆ. ಅದರಲ್ಲೂ ಸ್ಟಾರ್ ಸಿನಿಮಾಗಳು ಈ ತರಹದ ಪ್ರಯೋಗಕ್ಕೆ ಸ್ವಲ್ಪ ಹೆಚ್ಚೇ ಒಳಗಾಗುತ್ತಿವೆ. ಇತ್ತೀಚಿನ ಸಿನಿಮಾಗಳನ್ನು ಗಮನಿಸೋದಾದರೆ, ಆ
ತರಹದ ಒಂದಷ್ಟು ಸಿನಿಮಾಗಳು ಸಿಗುತ್ತವೆ.
ಗೌಡ’, “ರಿಚರ್ಡ್ ಆ್ಯಂಟನಿ’, “ರಿಚ್ಚಿ’ … ಹೀಗೆ ಲೆಕ್ಕ ಹಾಕುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದನ್ನೂ ಓದಿ:ಅಂಜನ್ ಚಿತ್ರದ ಟ್ರೇಲರ್ ಬಂತು
Related Articles
ಮುಖ್ಯವಾಗಿ ಪ್ರೇಕ್ಷಕರನ್ನು ಬೇಗನೇ ಸೆಳೆಯುವುದು ಇದರ ಪ್ರಮುಖ ಉದ್ದೇಶ. ಯಾವುದೇ ಒಂದು ಪಾತ್ರದ ಹೆಸರು ಸಿನಿಪ್ರೇಮಿಗಳಿಗೆ ಬೇಗನೇ ನೆನಪಲ್ಲಿ ಉಳಿಯುತ್ತದೆ ಮತ್ತು ಅಷ್ಟೇ ಕ್ಯಾಚಿಯಾಗಿರುತ್ತದೆ. ಜನ ಪಾತ್ರದ ಹೆಸರನ್ನ ಬೇಗನೇ ನೆನಪಿನಲ್ಲಿಟ್ಟುಕೊಳ್ಳುವಷ್ಟು ಇತರ ಹೆಸರುಗಳನ್ನು ಗಮನದಲ್ಲಿಡುವುದಿಲ್ಲ ಎಂಬುದು ಸಿನಿ ಮಂದಿಯ ಲೆಕ್ಕಾಚಾರ.
Advertisement
ಸ್ಟಾರ್‌ಗಳಿಗೂ ಇಷ್ಟ: ಸಿನಿಮಾದಲ್ಲಿನ ತಮ್ಮ ಪಾತ್ರದ ಹೆಸರನ್ನೇ ಚಿತ್ರದ ಟೈಟಲ್‌ನ್ನಾಗಿಸೋದು ಸ್ಟಾರ್‌ಗಳಿಗೂ ಖುಷಿಕೊಡುತ್ತಿದೆ. ಅದೇ ಕಾರಣದಿಂದ ಈಗ ನಿರ್ದೇಶಕರುಕೂಡಾ ಅಂತಹ ಟೈಟಲ್ ಬಗ್ಗೆಯೇ ಹೆಚ್ಚು ಗಮನಹರಿಸುತ್ತಿದ್ದಾರೆ. ಅದೇ ಕಾರಣದಿಂದ ದರ್ಶನ್, ಸುದೀಪ್, ಶಿವರಾಜ್‌ಕುಮಾರ್, ಪುನೀತ್, ಧ್ರುವ, ರಕ್ಷಿತ್ ಶೆಟ್ಟಿ, ಪ್ರಜ್ವಲ್ ದೇವರಾಜ್, ಧನಂಜಯ್, ವಿಜಯ್ … ಹೀಗೆ ಬಹುತೇಕ ನಟರ ಸಿನಿಮಾಗಳ ಕ್ಯಾರೆಕ್ಟರ್ ಈಗ ಟೈಟಲ್ ಆಗಿದೆ. ಇದು ಸಿನಿಮಾದ ಪ್ರಮೋಶನ್ ಹಾಗೂ ಮಾರ್ಕೇಟಿಂಗ್ ದೃಷ್ಟಿಯಿಂದಲೂ ಈ ತರಹದ ಟೈಟಲ್‌ಗಳು ಹೆಚ್ಚು ವರ್ಕ್ ಆಗುತ್ತವೆ ಎನ್ನುವುದು ಸಿನಿಪಂಡಿತರ ಲೆಕ್ಕಾಚಾರ.
ಇನ್ನು, ಮೊದಲೇ ಹೇಳಿದಂತೆಕನ್ನಡ ಚಿತ್ರರಂಗದಲ್ಲಿ ಆಗಾಗ ಹೊಸ ಟ್ರೆಂಡ್‌ಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಒಂದೆರಡು ವರ್ಷಗಳ ಹಿಂದೆ ಪ್ಯಾನ್ ಇಂಡಿಯಾ ಟ್ರೆಂಡ್ ಹುಟ್ಟಿಕೊಂಡಿದ್ದು ನಿಮಗೆ ಗೊತ್ತೇ ಇದೆ. ಸ್ಟಾರ್‌ಗಳ ಸಿನಿಮಾದಿಂದ ಆರಂಭವಾದ ಈ ಪ್ಯಾನ್ ಇಂಡಿಯಾ ಕ್ರೇಜ್ ಈಗ ಬಹುತೇಕ ಹೊಸಬರವರೆಗೂ ಬಂದು ನಿಂತಿದೆ. ಇದು ಒಂದಾದರೆ, ಪಾರ್ಟ್ -2ಕ್ರೇಜ್‌ಕೂಡಾ ಸದ್ಯ ಚಾಲ್ತಿಯಲ್ಲಿದೆ. ಹಿಟ್ ಆದ ಸಿನಿಮಾಗಳ ಮುಂದುವರೆದ ಭಾಗ ಬರುತ್ತಿದ್ದು, ಈಗಾಗಲೇ ಅನೇಕ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ.
ಕ್ಯಾರೆಕ್ಟರ್ ಟೈಟಲ್ಟ್ರೆಂಡ್ನಕೆಲವು
ಸಿನಿಮಾಗಳು
– ರಾಬರ್ಟ್
– ವಿಕ್ರಾಂತ್ ರೋಣ
– ಜೇಮ್ಸ್
– ಮಾರ್ಟಿನ್
– ವೇದ
– ರಾಣ
– ಸಲಗ
– ಅಂಬುಜಾ
– ಅರ್ಜುನ್ ಗೌಡ
– ರಿಚರ್ಡ್ ಆ್ಯಂಟನಿ
– ರಿಚ್ಚಿ -ರವಿಪ್ರಕಾಶ್ ರೈ