Advertisement

ಕ್ಯಾನ್ಸರ್‌ ಪತ್ತೆಗೆ ಹೊಸ ತಂತ್ರಜ್ಞಾನ

06:00 AM Apr 10, 2018 | |

ನವದೆಹಲಿ: ಸ್ತನ ಕಾನ್ಸರ್‌ ಪತ್ತೆಗೆ ಹಾಲಿ ಇರುವ ಮ್ಯಾಮೋಗ್ರಫಿಗಿಂತ ಅತ್ಯಂತ ಪರಿಣಾಮಕಾರಿಯಾದ ಇನಾರೆಡ್‌ ಥರ್ಮೋಗ್ರಫಿ (ಐಆರ್‌ಟಿ) ಎಂಬ ತಂತ್ರಜ್ಞಾನವನ್ನು ರೋಪರ್‌ ಐಐಟಿಯಲ್ಲಿನ ವಿಜ್ಞಾನಿಗಳ ತಂಡ ಸಂಶೋಧಿಸಿದೆ. ದೇಶೀಯವಾಗಿ ರೂಪು ಗೊಂಡಿರುವ ಈ ತಂತ್ರಜ್ಞಾನದಿಂದ  ನಿಗದಿತ ದೂರದಿಂದಲೇ ಕ್ಯಾನ್ಸರ್‌ ಕೋಶಗಳನ್ನು ಪತ್ತೆ ಹಚ್ಚಲು, ಯಾವುದೇ ನೋವಿಲ್ಲದೆ, ತ್ವರಿತ ಫ‌ಲಿತಾಂಶ ಪಡೆಯಲು ಸಾಧ್ಯವಿದ್ದು, ಹಾಲಿ ಚಾಲ್ತಿಯಲ್ಲಿರುವ ಮ್ಯಮೋಗ್ರಫಿಗಿಂತಲೂ ಪರಿಣಾಮಕಾರಿಯಾಗಿ, ಜನರ ಕೈಗೆಟಕುವ ಬೆಲೆಯಲ್ಲಿ ಕ್ಯಾನ್ಸರ್‌ ಪತ್ತೆ ಸಾಧ್ಯವಿದೆ ಎಂದು ಸಂಶೋಧಕರಲ್ಲೊಬ್ಬರಾದ ರವಿಬಾಬು ಮುಲವೀಸಲ ತಿಳಿಸಿದ್ದಾರೆ. 

Advertisement

ತಪಾಸಣೆ ಹೇಗೆ?: ಬಾಧಿತ ಅಂಗದ ಮೇಓಲೆ ಥರ್ಮಲ್‌ ಸ್ಟಿಮುಲಸ್‌ ಎಂಬ ಲೇಪನ ಹಚ್ಚಲಾಗುತ್ತದೆ. ನಂತರ, ಬಾಧಿತ ಪ್ರದೇಶವನ್ನು ಐಆರ್‌ಟಿ ಯಂತ್ರದ ಮೂಲಕ ಪರಿಶೀಲಿಸಲಾಗುತ್ತದೆ. ಇನಾರೆಡ್‌ ಕಿರಣಗಳು ವನ್ನು ಮುಟ್ಟಿದ ಕೂಡಲೇ ಆ ಜಾಗದಲ್ಲಿ 2ರಿಂದ 3 ಡಿಗ್ರಿ ಉಷ್ಣಾಂಶ ಉತ್ಪತ್ತಿ ಯಾಗುತ್ತದೆ. ಇದರಿಂದ, ಕಿರಣಗಳು ಬಾಧಿತ ಪ್ರದೇಶದಲ್ಲಿನ ಮಾಹಿತಿಯನ್ನು ಹೊತ್ತು ತಂದು ಯಂತ್ರದಲ್ಲಿ ದಾಖಲಿಸುತ್ತವೆ. 

ಪ್ರಯೋಜನ: ಸದ್ಯ ದೇಹದಲ್ಲಿ ಸಾಮಾನ್ಯ ಜೀವಕೋಶಗಳಂತಿದ್ದು, ಮುಂದೆ ಕ್ಯಾನ್ಸರ್‌ ಆಗಿ ಪರಿವರ್ತನೆಗೊಳ್ಳುವ ಜೀವಕೋಶಗಳನ್ನು ಬೇಗನೇ ಪತ್ತೆ ಹಚ್ಚುತ್ತದೆ. ಇಂಥ ಕೋಶಗಳನ್ನು ಪತ್ತೆ ಹಚ್ಚುವುದು ಮ್ಯಾಮೋ ಗ್ರಫಿಯಲ್ಲಿ ಸಾಧ್ಯವಿಲ್ಲ. ಮ್ಯಾಮೊಗ್ರಫಿ ಪರೀಕ್ಷೆಯಲ್ಲಿರುವ ಅಪಾಯಕಾರಿ ಅಯೋ ನೈಸಿಂಗ್‌ ವಿಕಿರಣ ಇದರಲ್ಲಿಲ್ಲ.  ಐಆರ್‌ಟಿ ಪರೀಕ್ಷೆ ಒಂದಕ್ಕಿಂತ ಹೆಚ್ಚು ಬಾರಿ ಮಾಡಬಹುದು. 
 

Advertisement

Udayavani is now on Telegram. Click here to join our channel and stay updated with the latest news.

Next