Advertisement
ಇದು ಗ್ರಾಹಕರು ಹಾಗೂ ಮದ್ಯ ಮಾರಾಟಗಾರರ ನಡುವಿನ ಸಂಘರ್ಷಕ್ಕೂ ಕಾರಣವಾಗುತ್ತಿದೆ. ಪ್ರಸ್ತುತ 2020-21ನೇ ಸಾಲಿನಿಂದ ಜಾರಿಗೆ ಬರುವಂತೆ ಭಾರತೀಯ ತಯಾರಿಕಾ ಮದ್ಯ (ಐಎಂಎ)ದ ದರದಲ್ಲಿ ಶೇ. 6ರಷ್ಟು ಅಬಕಾರಿ ಸುಂಕ ಹೆಚ್ಚಳವನ್ನು ಸರ್ಕಾರ ಬಜೆಟ್‌ನಲ್ಲೇ ಘೋಷಿಸಿತ್ತು. ದಿಢೀರ್ ಲಾಕ್‌ಡೌನ್ ಜಾರಿಯಿಂದ ಮದ್ಯ ಮಾರಾಟ ಸ್ಥಗಿತಗೊಂಡಿತ್ತು. ಲಾಕ್‌ಡೌನ್ ಸಡಿಲಿಕೆ ಬಳಿಕ ಮೇ 4ರಿಂದ ವೈನ್‌ಶಾಪ್, ಎಂಆರ್‌ಪಿ ಮಳಿಗೆ ಗಳು (ಸಿಎಲ್- 2) ಹಾಗೂ ಎಂಎಸ್ ಐಎಲ್ ಮದ್ಯದಂಗಡಿಗಳಲ್ಲಿ (ಸಿಎಲ್- 11ಸಿ) ಪಾರ್ಸೆಲ್ ಸೇವೆಗೆ ಅವಕಾಶ ನೀಡಲಾಗಿತ್ತು.
Related Articles
Advertisement
ಪರಿಷ್ಕೃತ ಎಂಆರ್‌ಪಿಗೆ ಕ್ರಮ: ದಿಢೀರ್ ಲಾಕ್‌ಡೌನ್‌ನಿಂದ ಮದ್ಯ ಮಾರಾಟ 42 ದಿನ ಸ್ಥಗಿತಗೊಂಡಿದ್ದರಿಂದ ಹಳೆಯ ಮದ್ಯದ ದಾಸ್ತಾನಿನ ಮೇಲೆ ಹಿಂದಿನ ಎಂಆರ್‌ಪಿ ದರವೇ ಇದೆ. ಆದರೆ ಎರಡು ಬಾರಿ ಅಬಕಾರಿ ಸುಂಕ ಹೆಚ್ಚಳವಾಗಿದೆ. ಹಳೆಯ ದಾಸ್ತಾನು ಬಹುತೇಕ ಮಾರಾಟವಾಗುತ್ತಿದ್ದು, ಹೊಸದಾಗಿ ತಯಾರಾಗುತ್ತಿರುವ ಮದ್ಯಕ್ಕೆ ಪರಿಷ್ಕೃತ ಎಂಆರ್‌ಪಿ ದರವನ್ನೇ ಮುದ್ರಿಸಿ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ.
ವಾರದಲ್ಲಿ ಪರಿಷ್ಕೃತ ಎಂಆರ್‌ಪಿ ಭರವಸೆ: ಮದ್ಯದ ಬಾಟಲಿ ಮೇಲೆ ಹಳೆಯ ಎಂಆರ್‌ಪಿ ದರವೇ ಇರುವುದರಿಂದ ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸುವುದೇ ಕಷ್ಟವಾಗಿದೆ. ಎಂಆರ್‌ಪಿ ದರ ಕ್ಕಿಂತಲೂ ಹೆಚ್ಚಿನ ದರ ಸಂಗ್ರಹಿಸುತ್ತಿರುವ ಆರೋಪಕ್ಕೆ ಮದ್ಯ ಮಾರಾಟಗಾರರು ಗುರಿಯಾಗುವಂತಾಗಿದೆ. ಈ ಬಗ್ಗೆ ಇಲಾಖೆ ಅಧಿಕಾರಿಗಳ ಬಳಿ ಪ್ರಸ್ತಾಪಿಸಿದ್ದು, ವಾರದಲ್ಲಿ ಪರಿಷ್ಕೃತ ಎಂಆರ್‌ಪಿ ದರಪಟ್ಟಿ ಇರುವಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಕರ್ನಾಟಕ ವೈನ್ ಮಾರಾಟ ಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಹೊನ್ನಗಿರಿಗೌಡ ತಿಳಿಸಿದರು.
* ಎಂ. ಕೀರ್ತಿಪ್ರಸಾದ್