Advertisement

ಜಿಎಸ್‌ಟಿ ರಿಟರ್ನ್ಸ್ ಸಲ್ಲಿಕೆಗೆ ಹೊಸ ವ್ಯವಸ್ಥೆ

06:40 AM Jul 01, 2019 | Team Udayavani |

ಹೊಸದಿಲ್ಲಿ: ಸರಕು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾಗಿ ಸೋಮವಾರಕ್ಕೆ ಎರಡು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಈ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಕೇಂದ್ರ ಸರಕಾರ ನಿರ್ಧರಿಸಿದೆ. ಸೋಮವಾರ ಹೊಸ ಕ್ರಮಗಳನ್ನು ಘೋಷಿಸಲು ನಿರ್ಧರಿಸಲಾಗಿದ್ದು, ಜಿಎಸ್‌ಟಿ ರಿಟರ್ನ್ಸ್ ಸಲ್ಲಿಕೆಗೆ ವ್ಯವಸ್ಥೆಯನ್ನು ಪರಿಚಯಿಸುವ ಸಾಧ್ಯತೆಯಿದೆ.

Advertisement

2017ರ ಜು. 1ರಂದು ಜಿಎಸ್‌ಟಿ ಜಾರಿಗೆ ಬಂದಿತ್ತು. ಹಲವು ಹಂತದ ಹಲವು ವಿಧದ ತೆರಿಗೆಗಳನ್ನು ರದ್ದುಗೊಳಿಸಿ ದೇಶಾದ್ಯಂತ ಏಕರೂಪದ ತೆರಿಗೆಯನ್ನು ಜಾರಿಗೊಳಿಸಿರುವುದು ದೇಶದ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ್ದಾಗಿದೆ. ಜಾರಿ ವ್ಯತ್ಯಯದ ಬಗ್ಗೆ ವಿಪಕ್ಷಗಳು ತೀವ್ರ ಟೀಕೆ ವ್ಯಕ್ತಪಡಿಸಿದ್ದವಾದರೂ ಮುಂದೆ ದಿನಗಳಲ್ಲಿ ತೆರಿಗೆ ಪದ್ಧತಿಯಲ್ಲಿ ಸುಧಾರಣೆ ಕಂಡುಬಂದಿತ್ತು.

ಹೊಸ ರಿಟರ್ನ್ಸ್ ವ್ಯವಸ್ಥೆ, ಕ್ಯಾಶ್‌ ಲೆಡ್ಜರ್‌ ವ್ಯವಸ್ಥೆ ಮತ್ತು ಏಕ ರಿಫ‌ಂಡ್‌ ಬಟವಾಡೆ ವ್ಯವಸ್ಥೆಯನ್ನು ಕೂಡ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಸೋಮವಾರದಿಂದ ಹೊಸ ರಿಟರ್ನ್ಸ್ ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿಗೆ ಬರಲಿದ್ದು, ಅಕ್ಟೋಬರ್‌ನಿಂದ ಇದು ಕಡ್ಡಾಯವಾಗಲಿದೆ.

ಇದಕ್ಕೆ “ಸಹಜ’ ಮತ್ತು “ಸುಗಮ’ ಎಂದು ಹೆಸರಿಡಲಾಗಿದೆ. ಸೋಮವಾರ ನಡೆಯುವ ಕಾರ್ಯಕ್ರಮದಲ್ಲಿ ವಿತ್ತ ಖಾತೆ ರಾಜ್ಯ ಸಚಿವ ಅನುರಾಗ್‌ ಠಾಕೂರ್‌, ಪ್ರಮುಖ ಕಾರ್ಯದರ್ಶಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿರಲಿ ದ್ದಾರೆ. “ಜಿಎಸ್‌ಟಿ ಫಾರ್‌ ಎಂಎಸ್‌ಎಂಇ’ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆ) ಪುಸ್ತಕ ಬಿಡುಗಡೆ ಮಾಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next