Advertisement

ಜನರ ಓಡಾಟ ನಿಯಂತ್ರಿಸಲು ಹೊಸ ತಂತ್ರ

01:25 PM Jun 05, 2021 | Team Udayavani |

ಚಳ್ಳಕೆರೆ: ಸೆಮಿಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುವ ವಾಹನಗಳು ಮತ್ತು ವಾಹನ ಸವಾರರ ಮೇಲೆ ಬಿಗಿಕ್ರಮ ಕೈಗೊಂಡಿದ್ದರೂ ಪೊಲೀಸ್‌ರ ಕಣ್ಣು ತಪ್ಪಿಸಿ ಓಡಾಟ ನಡೆಸುವ ವಾಹನ, ಜನರಸಂಖ್ಯೆ ಹೆಚ್ಚಾಗುತ್ತಿದ್ದು,ಇದನ್ನು ನಿಯಂತ್ರಿಸಲು ಠಾಣಾ ಇನ್ಸ್‌ಪೆಕ್ಟರ್‌ ಜೆ.ಎಸ್‌ .ತಿಪ್ಪೇಸ್ವಾಮಿ ನೆಹರೂ ವೃತ್ತದಲ್ಲಿ ಕೊರೊನಾ ಟೆಸ್ಟ್‌ ನಡೆಸುವ ಮೂಲಕ ಬಿಸಿಮುಟ್ಟಿಸಿದ್ದಾರೆ.

Advertisement

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಆರೋಗ್ಯ ಇಲಾಖೆ ಸಿಬ್ಬಂದಿ ಕೊರೊನಾ ಟೆಸ್ಟ್‌ ನಡೆಸುತ್ತಿದ್ದು, ರಸ್ತೆಯಲ್ಲಿ ಸುಖಸುಮ್ಮನೆ ಓಡಾಡುವ ಜನರನ್ನು ತಡೆದು ಕೊರೊನಾ ಪರೀಕ್ಷೆಗೆಒಳಪಡಿಸಲಾಯಿತು. ಈ ಸಂದರ್ಭದಲ್ಲಿ ಸಿಕ್ಕಿ ಬಿದ್ದ ಮಹಿಳೆಯರೂ ಸಹ ಕೊರೊನಾ ಟೆಸ್ಟ್‌ಗೆಒಳಪಡಬೇಕಾಯಿತು. ಹಲವಾರು ಕಾರಣಗಳು ಹೇಳಿ ರಸ್ತೆ ಇಳಿಯುವ ಬೈಕ್‌ ಸವಾರರಿಗೆ ಈಗಾಗಲೇ ಕೇಸು, ದಂಡ ಪ್ರಯೋಗ ಮಾಡಲಾಗಿದೆ. ಇನ್ನು ಮುಂದೆ ಅನಗತ್ಯ ಓಡಾಟ ನಡೆಸುವವರಿಗೆ ಕೊರೊನಾ ಟೆಸ್ಟ್‌ ಮಾಡಿಸಲಾಗುವುದು ಎಂದರು.

ಪಾಸಿಟಿವ್‌ ಕಂಡುಬಂದಲ್ಲಿ ಕೂಡಲೇ ಪೊಲೀಸ್‌ ಇಲಾಖೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ,ಪಾಸಿಟಿವ್‌ ದೃಢಪಟ್ಟವರನ್ನು ಪತ್ತೆಹಚ್ಚಿ ಇಲ್ಲಿನ ಕೋವಿಡ್‌ ಸೆಂಟರ್‌ಗೆ ದಾಖಲಿಸಲಾಗುವುದು. ಈಗಾಗಲೇ ಸುಮಾರು 50ಕ್ಕೂ ಹೆಚ್ಚು ಜನರನ್ನು ಕೊರೊನಾ ಟೆಸ್ಟ್‌ಗೆ ಒಳಪಡಿಸಲಾಗಿದೆ. ಕೋವಿಡ್‌ ನಿಯಮ ಉಲ್ಲಂಘಿಸಿ ತಿರುಗಾಡುತ್ತಿದ್ದ ಸುಮಾರು 40ಕ್ಕೂ ಹೆಚ್ಚು ಬೈಕ್‌ಗಳನ್ನು ವಶಕ್ಕೆ ಪಡೆದು ಸವಾರರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದರು.

ಸಾರ್ವಜನಿಕರು ಓಡಾಟ ನಡೆಸದೆ ಪೊಲೀಸ್‌ ಇಲಾಖೆಗೆ ಸಹಕಾರ ನೀಡಬೇಕು. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿದಲ್ಲಿ ಮಾತ್ರಕೊರೊನಾದಿಂದ ರಕ್ಷಣೆ ಪಡೆಯಲು ಸಾಧ್ಯ. ಪೊಲೀಸ್‌ ಮುಖ್ಯ ಪೇದೆಗಳಾದ ವಸಂತಕುಮಾರ್‌, ಮಂಜಣ್ಣ,ಚಾಲಕ ಶ್ರೀನಿವಾಸ್‌, ಪೇದೆಗಳಾದ ಪುರುಷೋತ್ತಮ, ಪವನ್‌ಕುಮಾರ್‌, ಮಹಾಂತೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next