ನವದೆಹಲಿ:ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶೀಘ್ರದಲ್ಲಿಯೇ ಹೊಸ 100 ರೂಪಾಯಿ ನೋಟನ್ನು ಬಿಡುಗಡೆ ಮಾಡುವುದಾಗಿ ಗುರುವಾರ ತಿಳಿಸಿದೆ. ಮಹಾತ್ಮ ಗಾಂಧಿ ಸರಣಿಯ ನೂತನ 100 ರೂಪಾಯಿ ನೋಟುಗಳು ಶೀಘ್ರವೇ ಜನರಿಗೆ ಲಭ್ಯವಾಗಲಿದೆ ಎಂದು ಹೇಳಿದೆ.
ಈ ನೋಟು ಹೇಗಿದೆ ಗೊತ್ತಾ?
ಆರ್ ಬಿಐ ಹೊಸದಾಗಿ ಬಿಡುಗಡೆ ಮಾಡುವ 100 ರೂಪಾಯಿ ನೋಟು ನಸು ನೀಲಿ ಬಣ್ಣ ಹೊಂದಿದೆ. ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ಸಹಿಯನ್ನೊಳಗೊಂಡಿದೆ. ಅಲ್ಲದೇ ದೇಶದ ಸಾಂಸ್ಕೃತಿಕ ಪಾರಂಪರಿಕ ಸ್ಥಳವಾದ ಗುಜರಾತಿನ ರಾಣಿ ಕಿ ವಾವ್ (ರಾಣಿಯ ಮೆಟ್ಟಿಲುಗಳ ಬಾವಿ) ಚಿತ್ರ ನೋಟಿನ ಹಿಂಬದಿಯಲ್ಲಿದೆ.
ಹಳೇ ನೂರು ರೂಪಾಯಿ ನೋಟಿಗೆ ಹೋಲುವ ವಿನ್ಯಾಸದಲ್ಲಿಯೇ ಹೊಸ 100 ರೂ. ನೋಟು ಇರಲಿದ್ದು,ನೋಟಿನ ಸುತ್ತಳತೆ 66 ಎಂಎಂ ಹಿ144 ಎಂಎಂ ನಲ್ಲಿ ಮುದ್ರಣವಾಗಲಿದೆ.
ಈಗ ಚಾಲ್ತಿಯಲ್ಲಿರುವ ನೂರು ರೂಪಾಯಿ ನೋಟುಗಳ ಜೊತೆಯೇ ಹೊಸ ನೋಟುಗಳು ಕೂಡಾ ಚಾಲ್ತಿಯಲ್ಲಿರಲಿದೆ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ.