Advertisement
ಈ ಗ್ರಾಮಗಳು ಅಸ್ತಿತ್ವದಲ್ಲಿದ್ದರೂ ಅವು ಕಂದಾಯ ಗ್ರಾಮಗಳಾಗಿರಲಿಲ್ಲ. ಪಕ್ಕದ ಊರಿನ ದಾಖಲೆಯಲ್ಲೇ ಇದ್ದವು. ಹೀಗಾಗಿ ಗ್ರಾಮದ ಹೆಸರು ಇದ್ದರೂ, ಜಮೀನು, ಮನೆ ಇತ್ಯಾದಿ ದಾಖಲೆಗಳು ಪಕ್ಕದ ಗ್ರಾಮದ ಹೆಸರಿನಲ್ಲೇ ಇದ್ದವು. ಅಂಥ ಗ್ರಾಮ ಗಳನ್ನು ಗುರುತಿಸಿ, ಪ್ರತ್ಯೇಕ ಕಂದಾಯ ಗ್ರಾಮಗಳನ್ನಾಗಿ ರಚಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಸರ್ಕಾರಕ್ಕೆ ಪಟ್ಟಿ ಕಳಿಸ ಲಾಗಿದೆ: ಜಿಲ್ಲೆಯಲ್ಲಿ ಒಟ್ಟು 67 ಹೊಸ ಕಂದಾಯ ಗ್ರಾಮ ಗಳನ್ನು ರಚಿಸಲು ಗುರುತಿಸಲಾಗಿದ್ದು, ಈ ಪೈಕಿ 61 ಗ್ರಾಮಗಳನ್ನು ಅಂತಿಮಗೊಳಿಸಿ, ಅವು ಗಳಿಗೆ ದಾಖಲೆಗಳನ್ನು ಒದಗಿ ಸುವ ನಿಟ್ಟಿನಲ್ಲಿ ಪ್ರಕ್ರಿಯೆ ನಡೆದಿದೆ. ಈ ಪೈಕಿ ಅಂತಿಮ ಅಧಿಸೂಚನೆ ಹಾಗೂ ಪ್ರಾಥಮಿಕ ಅಧಿ ಸೂಚನೆ ಹೊರಡಿಸಲು ಗ್ರಾಮಗಳ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸ ಲಾಗಿದೆ.
Related Articles
Advertisement
ಜಿಲ್ಲೆಯ ಹೊಸ 67 ಕಂದಾಯ ಗ್ರಾಮಗಳು ಜಿಲ್ಲೆಯಲ್ಲಿ ಹೊಸ ಕಂದಾಯ ಗ್ರಾಮಗಳಾಗಿ ಘೋಷಣೆ ಆಗಲು ಸರ್ಕಾರಕ್ಕೆ ಕಳುಹಿಸಲಾಗಿರುವ ಗ್ರಾಮಗಳು. ಚಾ.ನಗರ ತಾಲೂಕಿನ ಗೊದ್ದಲೇಹುಂಡಿ, ಹಳ್ಳಿಕೆರೆಹುಂಡಿ, ಸೊತ್ತನ ಗುಂಡಿ, ಹೊಸೂರು (ಜನ್ನೂರು ಸಮೀಪ), ಬೂದಂಬಳ್ಳಿಮೋಳೆ, ಗುಂಡ್ಲುಪೇಟೆ ತಾಲೂಕಿ ನಲ್ಲಿ ಮುಕ್ತಿ ಕಾಲೋನಿ, ಮುಂಟೀಪುರ. ಕೊಳ್ಳೇ ಗಾಲ ತಾಲೂಕಿನಲ್ಲಿ ಕುಂತೂರು ಮೋಳೆ, ಗೊಬ್ಬಳಿ ಪುರ, ಕಜ್ಜಿಹುಂಡಿ, ಸಿಲ್‌ಕಲ್‌ಪುರ, ಚೆಲುವನ ಹಳ್ಳಿ, ಬಾಳಗುಣಸೆ, ಸುಂಡರಹಳ್ಳಿ, ಕೊತ್ತನೂರು, ಪ್ರಕಾಶ್ ಪಾಳ್ಯ, ಮರಿಯಾಪುರ. ಹನೂರು ತಾಲೂಕಿನಲ್ಲಿ ವೆಂಕಟಶೆಟ್ಟಿದೊಡ್ಡಿ, ಚೊರೆದೊಡ್ಡಿ, ಕೂಡ್ಲೂರು, ನಲ್ಲೂರು, ಯರಂಬಾಡಿ, ಮಲ್ಲ ಯ್ಯನಪುರ, ವಡ್ಡರದೊಡ್ಡಿ, ನಾಲ್‌ರೋಡ್, ಪೂಜಾರಿ ಬೋವಿದೊಡ್ಡಿ, ದೊಮ್ಮನಗದ್ದೆ ಹಾಗೂ ನಾಗಣ್ಣನಗರ ಯಳಂದೂರು ತಾಲೂಕಿನಲ್ಲಿ ಕೆ. ಹೊಸೂರು.
ಪ್ರಾಥಮಿಕ ಮತ್ತು ಅಂತಿಮ ಅಧಿಸೂಚನೆ ಬಾಕಿಯಿರುವ ಗ್ರಾಮಗಳು: ಕೊಳ್ಳೇಗಾಲ ತಾಲೂಕಿನ ಗೊಬ್ಬಳಿಪುರ, ಹನೂರು ತಾಲೂಕಿನ ಚಿಕ್ಕ ಆಲತ್ತೂರು, ಮಲ್ಲಯ್ಯನಪುರ, ಪುದುನಗರ, ಹಂಡೆಕುರುಬರ ದೊಡ್ಡಿ, ಮಾರಹಳ್ಳಿ.
ಕನಿಷ್ಠ 50 ಕುಟುಂಬಗಳಿದ್ದರೆ ಅರ್ಹತೆ : ಹೊಸ ಕಂದಾಯ ಗ್ರಾಮಗಳನ್ನಾಗಿ ಘೋಷಿಸಬೇಕಾದರೆ ಆ ಊರಿನಲ್ಲಿ ಕನಿಷ್ಠ ಕುಟುಂಬಗಳ ಸಂಖ್ಯೆ 50 ಇರಬೇಕು ಅಥವಾ ಜನಸಂಖ್ಯೆ 250 ಹೊಂದಿರಬೇಕು. ಸುಮಾರು 100 ಎಕರೆ ಜಮೀನು ಒಟ್ಟಾರೆಯಾಗಿರಬೇಕು. ಅಲ್ಲದೇ ಮೂಲ ಗ್ರಾಮ ಠಾಣಾಗೆ ಹೊಂದಿಕೊಂಡಿರದೇ ಕನಿಷ್ಠ 1 ಕಿ.ಮೀ. ಅಂತರವನ್ನು ಹೊಂದಿರ ಬೇಕು ಎಂಬ ಮಾನದಂಡವನ್ನು ನಿಗದಿ ಮಾಡಲಾಗಿದೆ.
ಈಗಾಗಲೇ 6 ಗ್ರಾಮಗಳನ್ನು ಹೊರತುಪಡಿಸಿ ಹೊಸ ಕಂದಾಯ ಗ್ರಾಮಗಳಿಗೆ ಪ್ರಾಥಮಿಕ ಮತ್ತು ಅಂತಿಮ ಅಧಿ ಸೂಚನೆ ಹೊರಡಿಸ ಲಾಗಿದೆ. ಈ ಗ್ರಾಮ ಗಳ ಪಟ್ಟಿಯನ್ನೂ ಸರ್ಕಾರಕ್ಕೆ ಕಳುಹಿಸಲಾಗಿದೆ. ಈ ಗ್ರಾಮಗಳ ಸಂಬಂಧ ಜನವರಿಯಲ್ಲಿ ಹಕ್ಕುಪತ್ರಗಳನ್ನು ವಿತರಿಸಲಾಗುವುದು. ● ಶಿಲ್ಪಾನಾಗ್, ಜಿಲ್ಲಾಧಿಕಾರಿ
– ಕೆ.ಎಸ್.ಬನಶಂಕರ ಆರಾಧ್ಯ