Advertisement

ಟಿಪ್ಪು ಸುಲ್ತಾನ್ ಜನ್ಮದಿನಾಂಕ ಕುರಿತು ಹೊಸ ಸಂಶೋಧನೆ

04:09 PM Jul 17, 2021 | keerthan |

ಶಿವಮೊಗ್ಗ: ಟಿಪ್ಪುಸುಲ್ತಾನ್ ಜನ್ಮ ದಿನಾಂಕಕ್ಕೆ ಸಂಬಂಧಿಸಿದಂತೆ ಹೊಸ ಸಂಶೋಧನೆಯೊಂದು ಹೊರಬಂದಿದ್ದು, ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಖ್ಯಾತ ನಾಣ್ಯ ಸಂಗ್ರಹಕಾರ ಹಾಗೂ ಇತಿಹಾಸಕಾರ ಖಂಡೋಬರಾವ್ ಹೇಳಿದರು.

Advertisement

ಇತಿಹಾಸ ತಜ್ಞ, ಸಂಶೋಧಕಾ ನಿಧಿನ್ ಓಲಿಕೆರ ಅವರು ಈ ಬಗ್ಗೆ ಸಂಶೋಧನೆಯ ಮೂಲಕ ಟಿಪ್ಪುಸುಲ್ತಾನ್ ಜನ್ಮ ದಿನಾಂಕಕ್ಕೆ ಸಂಬಂಧಿಸಿದಂತೆ ಹೊಸ ಸಂಶೋಧನೆಯನ್ನು ನಡಸಿದ್ದಾರೆ. ಇದುವರೆಗೂ ಟಿಪ್ಪು ಜನ್ಮ ದಿನಾಂಕ ನವೆಂಬರ್ 20 1750 ಎಂದು ವಿಶ್ವದ್ಯಂತ ಒಪ್ಪಿಕೊಂಡಿದ್ದಾರೆ. ಆದರೆ ನಿಧಿನ್ ಅವರ ಹೊಸ ಸಂಶೋಧನೆ ಪ್ರಕಾರ ಅದು 1ನೇ ಡಿಸೆಂಬರ್ 1751 ಆಗಿದೆ. ಈ ಬಗ್ಗೆ ಅವರು 3 ವರ್ಷಗಳ ಕಾಲ ಸಂಶೋಧನೆ ನಡೆಸಿ ಇದಕ್ಕಾಗಿ ಲಂಡನ್‌ನಲ್ಲಿ ಇರುವ ಮ್ಯೂಸಿಯಂನಲ್ಲಿ ಟಿಪ್ಪುಗೆ ಸಂಬಂಧಿಸಿದ ಅಧಿಕೃತ ಪತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿ ಅಧ್ಯಯನ ನಡೆಸಿ ಈ ತೀರ್ಮಾನಕ್ಕೆ ಬಂದಿದ್ದಾರೆ ಎಂದರು.

ನಿಧಿನ್ ಅವರು ಲಂಡನ್‌ಗೆ ತೆರಳಿದಾಗ ಅಲ್ಲಿನ ಬ್ರಿಟಿಷ್ ಗ್ರಂಥಾಲಯದಲ್ಲಿ ಟಿಪ್ಪುಗೆ ಸಂಬಂಧಿಸಿದಂತೆ ಪರ್ಶಿಯನ್ ಭಾಷೆಯಲ್ಲಿರುವ ಹಸ್ತ ಪ್ರತಿಯೊಂದು ಕಾಣ ಸಿಗುತ್ತದೆ. ಅದರ ಹೆಸರು “ಫತೇ ಉಲ್ ಮುಜಾಹಿದ್ದೀನ್” ಆಗಿರುತ್ತದೆ. ಇದನ್ನು ಟಿಪ್ಪು ತಾನೇ ಬರೆಸಿದ ಕೈಪಿಡಿಯಾಗಿರುತ್ತದೆ. ಆ ಕೈಪಿಡಿಯಲ್ಲಿ ಜಕ್ರಿಮಾಸದ 14ನೇ ದಿನ 1165 ಇಜ್ರಿ ದಿನದಂದು ಸುರ್ಯೋದಯವಾದ 10 ಗಂಟೆಗಳ ನಂತರ ನನ್ನ ಜನ್ಮದಿನವನ್ನು ಆಚರಿಸಬೇಕು ಮತ್ತು ಮೈಸೂರು ಸಂಸ್ಥಾನದ ಸಮಸ್ತ ಪ್ರಜೆಗಳು ಇದರಲ್ಲಿ ಪಾಲ್ಗೊಳ್ಳಬೇಕು ಎಂದಿತ್ತು.

ಇದರ ಆಧಾರವನ್ನು ಬೆನ್ನೆತಿಕೊಂಡು ಹೋದ ಓಲಿಕೆರ ಅವರು ಇದನ್ನು ಆಂಗ್ಲ ಕ್ಯಾಲೆಂಡರ್‌ಗೆ ಬದಲಾಯಿಸಿಕೊಂಡು ಈ ಹೊಸ ದಿನಾಂಕವನ್ನು ಕಂಡು ಹಿಡಿದಿದ್ದಾರೆ. ಇದಕ್ಕೆ ಪೂರಕವಾಗಿ ಅವರಿಗೆ ಇನ್ನೂ ಕೆಲವು ಹಸ್ತ ಪ್ರತಿಗಳು ಸಿಕ್ಕಿವೆ ಇವೆಲ್ಲವನ್ನೂ ಒಟ್ಟುಕೊಂಡು ಅವರು ಟಿಪ್ಪು ಜನ್ಮ ರಹಸ್ಯವನ್ನು ಬೇಧಿಸಿದ್ದಾರೆ ಎಂದರು.

ಇತಿಹಾಸ ತಜ್ಞ ಮತ್ತು ಸಂಶೋಧಕಾ ನಿಧಿನ್ ಓಲಿಕೆರ ಮಾತನಾಡಿ, ಟಿಪ್ಪು ಜನ್ಮ ದಿನಾಂಕವನ್ನು ನಿಖರವಾಗಿ ತಿಳಿಸಲು ನಾನು ಹಲವು ವರ್ಷಗಳ ಕಾಲ ಸಂಶೋಧನೆ ಮಾಡಿದ್ದೇನೆ. ಪ್ರಮುಖವಾಗಿ 3 ದಾಖಲೆಗಳನ್ನು ನೀಡಿದ್ದೇನೆ. ಈ ಬಗ್ಗೆ ಈಗಾಗಲೇ ಮಂಗಳೂರು ಮತ್ತು ಗೋವಾ ವಿವಿಯ ಮಾಜಿ ಕುಲಪತಿಗಳು ಮತ್ತು ಪ್ರಸಿದ್ಧ ಇತಿಹಾಸಕಾರರಾಗಿರುವ ಪ್ರೋ.ಶೇಖ್ ಹಾಲಿ ಅವರು ಅವಲೋಕಿಸಿ ಅನುಮೋಧನೆ ನೀಡಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರಕ್ಕೆ ನನ್ನ ಸಂಪೂರ್ಣ ಅಧ್ಯಾಯನದ ವಿವರಗಳನ್ನು ತಿಳಿಸಿದ್ದೇನೆ. ಮುಂದಿನ ದಿನಗಳಲ್ಲಿ ಟಿಪ್ಪು ಜನ್ಮ ದಿನಾಂಕ 1ನೇ ಡಿಸೆಂಬರ್ 1751 (1-12-1751) ಆಗಬೇಕೆಂದು ಮನವಿ ಮಾಡಿಕೊಳ್ಳುತ್ತಿರುವೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next