Advertisement

H-1B ವೀಸಾ ನೋಂದಣಿಗೆ ಇನ್ನು ಹೊಸ ಕ್ರಮ ಜಾರಿ?

08:22 PM Apr 29, 2023 | Pranav MS |

ವಾಷಿಂಗ್ಟನ್‌: ಅಮೆರಿಕದ ಮಾಹಿತಿ ತಂತ್ರಜ್ಞಾನ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಇರುವ ಎಚ್‌-1ಬಿ ವೀಸಾ ನೋಂದಣಿಗೆ ಇರುವ ವ್ಯವಸ್ಥೆ ಆಧುನೀಕರಣಗೊಳಿಸಲು ಚಿಂತನೆ ನಡೆಸಲಾಗಿದೆ. ಸದ್ಯ ಇರುವ ಕಂಪ್ಯೂಟರೀಕೃತ ವ್ಯವಸ್ಥೆಯಲ್ಲಿ ಕೆಲವೊಂದು ಲೋಪ-ದೋಷಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ (ಯುಎಸ್‌ಸಿಐಎಸ್‌) ಈ ನಿರ್ಧಾರ ಕೈಗೊಂಡಿದೆ. 2023 ಮತ್ತು 2024ನೇ ಸಾಲಿನ ವಿತ್ತೀಯ ವರ್ಷದಲ್ಲಿ ಎಚ್‌1ಬಿ ವೀಸಾ ನೀಡುವ ಸಂದರ್ಭದಲ್ಲಿ ಕೆಲವೊಂದು ವಂಚನೆಯ ಪ್ರಕರಣಗಳು ಬಹಿರಂಗವಾಗಿದೆ. ಅಂಥವುಗಳನ್ನು ಪತ್ತೆ ಹಚ್ಚಿ ಆ ಅರ್ಜಿಗಳಿಗೆ ನಿಷೇಧ ಹೇರಲಾಗಿದೆ ಎಂದು ಶುಕ್ರವಾರ ಬಿಡುಗಡೆ ಮಾಡಲಾಗಿರುವ ವಾರ್ಷಿಕ ವರದಿಯಲ್ಲಿ ಉಲ್ಲೇಖೀಸಲಾಗಿದೆ.

Advertisement

ಕೆಲವೊಂದು ಸಣ್ಣ ಕಂಪನಿಗಳು ಪದೇ ಪದೆ ಒಂದೇ ಹೆಸರುಗಳನ್ನು ಅರ್ಜಿಗಳನ್ನು ಹಾಕಿರುತ್ತವೆ. ಹೀಗಾಗಿ, ಲಾಟರಿ ಪ್ರಕ್ರಿಯೆಯಲ್ಲಿ ಹಲವು ಬಾರಿ ಅವುಗಳು ಆಯ್ಕೆಯಾಗುತ್ತವೆ. ಈ ಮೂಲಕ ಕೃತಕವಾಗಿ ವೀಸಾ ಪಡೆಯಲು ಬೇಕಾಗುವ ಅರ್ಹತೆಯನ್ನು ಹೆಚ್ಚಿಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ಪ್ರಸಕ್ತ ವರ್ಷ 7,80,884 ಅರ್ಜಿಗಳು ಸಲ್ಲಿಕೆಯಾಗಿದ್ದವು. 2023ರಲ್ಲಿ 4,83,927, 2022ರಲ್ಲಿ 3,01,447, 2021ರಲ್ಲಿ 2,74,237 ಅರ್ಜಿಗಳು ಸಲ್ಲಿಕೆಯಾಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next