ತಿ.ನರಸೀಪುರ: ತಾಲೂಕಿನ ಸೋಮ ನಾಥ ಪುರ ಗ್ರಾಪಂ ನೂತನ ಅಧ್ಯಕ್ಷೆ ಯಾಗಿ ಅರ್ಚನಾ ಸಂದೀಪ್, ಉಪಾಧ್ಯಕ್ಷರಾಗಿ ಎಸ್.ಸಿದ್ದಪ್ಪ ಅವಿರೋ ಧವಾಗಿ ಆಯ್ಕೆಯಾದರು.
ಗ್ರಾಪಂ ಹಿಂದಿನ ಅಧ್ಯಕ್ಷೆ ಗೌರಮ್ಮ, ಉಪಾಧ್ಯಕ್ಷ ಎಸ್.ಕಾಂತರಾಜು ಅವರಿಬ್ಬರೂ ರಾಜೀನಾಮೆ ನೀಡಿದ್ದ ಹಿನ್ನೆಲೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಿಗದಿ ಯಾಗಿತ್ತು. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಗ್ಗಲೀಪುರ ಬ್ಲಾಕ್‌ನ ಸದಸ್ಯೆ ಅರ್ಚನಾ, ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಜಗ ಜೀವನಗ್ರಾಮ ಬ್ಲಾಕ್‌ನ ಸದಸ್ಯ ಎಸ್.ಸಿದ್ದಪ್ಪ ಇಬ್ಬರೇ ನಾಮಪತ್ರ ಸಲ್ಲಿಸಿ ದ್ದರಿಂದ ಅವಿರೋಧವಾಗಿ ಆಯ್ಕೆಗೊಂಡರು.
ಚುನಾವಣಾ ಅಧಿಕಾರಿಯಾಗಿ ಕಾವೇರಿ ನೀರಾವರಿ ನಿಗಮದ ಎಇಇ ಅನಿಲ್ ಕುಮಾರ್ ಕಾರ್ಯನಿರ್ವಹಿಸಿ ದರು. ಪಕ್ಷಾತೀತವಾಗಿ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಸದಸ್ಯರೆಲ್ಲರೂ ಅವಿರೋಧವಾಗಿಯೇ ಮಾಡಿದ ಹಿನ್ನೆಲೆಯಲ್ಲಿ ಎಲ್ಲಾ ಸದಸ್ಯರಿಗೆ ಸಿಹಿ ವಿತರಿಸಿ, ಮಾಲಾರ್ಪಣೆ ಮಾಡಲಾಯಿತು. ಹಿರಿಯ ಮುಖಂಡ, ಪಿಕಾರ್ಡ್ ಬ್ಯಾಂಕ್ ನ ಮಾಜಿ ಅಧ್ಯಕ್ಷ ಕೆ.ವಜ್ರೆàಗೌಡ ಮಾತನಾಡಿ, ಪ್ರವಾಸೋದ್ಯಮ ಕೇಂದ್ರ ಹಾಗೂ ಹಿಂದುಳಿದ ಗ್ರಾಮಗಳನ್ನು ಹೊಂದಿರುವ ಸೋಮನಾಥಪುರ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿಗೆ ಹಾಗೂ ಜನರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇ ಕೆಂದು ಕರೆ ನೀಡಿದರು.
ತಾಪಂ ಮಾಜಿ ಉಪಾಧ್ಯಕ್ಷ ಬಿ. ಮರಯ್ಯ, ಬಿಎಸ್‌ಎನ್‌ಎಲ್‌ನ ನಿವೃತ್ತ ಅಧಿಕಾರಿ ಎಂ. ಜಯರಾಂ, ಜಿಪಂ ಮಾಜಿ ಸದಸ್ಯ ಎಸ್.ವಿ. ಜಯಪಾಲ ಭರಣಿ, ತಾ.ಪಂ ಮಾಜಿ ಸದಸ್ಯ ರಾಮಲಿಂಗಯ್ಯ, ಎಪಿಎಂಸಿ ಮಾಜಿ ಅಧ್ಯಕ್ಷ ಕಗ್ಗಲೀಪುರ ಎಂ.ರಾಜು, ಗ್ರಾಪಂ ಮಾಜಿ ಅಧ್ಯಕ್ಷರಾದ ಅಶೋಕ, ಮಹೇಶ್, ಕೃಷ್ಣಮೂರ್ತಿ, ಅಭಿವೃದ್ಧಿ ಅಧಿಕಾರಿ ಸಂತೋಷ್ ಕುರ್ಮಾ, ಸದಸ್ಯರಾದ ಗೀತಾ, ಗಿರೀಶ್, ಹೇಮಾವತಿ, ಪಿ.ಮಂಜೇಶ್ ಗೌಡ, ನಾಗರತ್ನಮ್ಮ, ಪುಟ್ಟಮಾದಯ್ಯ, ಕೆ.ಪಿ. ಪುಟ್ಟಸ್ವಾಮಿ, ಸುಂದರಮ್ಮ, ಸುವರ್ಣ, ಮುಖಂಡರಾದ ಕೆ.ನಾಗೇಂದ್ರ, ಎನ್.ಸಂದೀಪ್, ಎಸ್.ವಿ.ದಿನೇಶ್ ಕುಮಾರ್, ಮಂಜು, ಪುನೀತ್, ಸಿದ್ದನಹುಂಡಿ ನಟರಾಜು, ಸುರೇಶ್ ಇತರರು ಉಪಸ್ಥಿತರಿದ್ದರು.