Advertisement

ಗ್ರಾಪಂ ಅಧ್ಯಕ್ಷೆಯಾಗಿ ಸಾಕಮ್ಮ ಆಯ್ಕೆ

03:05 PM Jun 18, 2022 | Team Udayavani |

ಯಳಂದೂರು: ತಾಲೂಕಿನ ಬಿಳಿಗಿರಿ ರಂಗನಬೆಟ್ಟದ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಶುಕ್ರ ವಾರ ನಡೆದ ಚುನಾವಣೆಯಲ್ಲಿ ಸಾಕಮ್ಮ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.

Advertisement

ಜಿಲ್ಲೆಯ ಅತ್ಯಂತ ಚಿಕ್ಕ ಗ್ರಾಪಂ ಆಗಿರುವ ಬಿಳಿಗಿರಿ ರಂಗನಬೆಟ್ಟದಲ್ಲಿ ಒಟ್ಟು 7 ಜನ ಸದಸ್ಯರಿದ್ದಾರೆ. ಪರಿಶಿಷ್ಟ ಪಂಗಡ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲಾಗಿತ್ತು. ಈ ಹಿಂದೆ ಅಧ್ಯಕ್ಷೆಯಾಗಿದ್ದ ರಂಗಮ್ಮ ರಾಜೀನಾಮೆ ಕೊಟ್ಟ ಹಿನ್ನೆಲೆಯಲ್ಲಿ ಈ ಸ್ಥಾನ ತೆರವುಗೊಂಡಿತ್ತು.

ಚುನಾವಣಾಧಿಕಾರಿಯಾಗಿದ್ದ ಕೃಷಿ ಇಲಾಖೆಯ ಕೃಷಿ ಅಧಿಕಾರಿ ವೆಂಕಟರಂಗಶೆಟ್ಟಿ ನೇತೃತ್ವದಲ್ಲಿ ಚುನಾವಣೆ ನಡೆದು ಸಾಕಮ್ಮಗೆ 4 ಮತಗಳು ಹಾಗೂ ಮಾದಮ್ಮಗೆ 3 ಮತಗಳು ಬಂದ ಹಿನ್ನೆಲೆಯಲ್ಲಿ ಚುನಾವಣಾಧಿ ಕಾರಿ ಅಧ್ಯಕ್ಷ ಸ್ಥಾನಕ್ಕೆ ಸಾಕಮ್ಮ ಆಯ್ಕೆಯಾಗಿರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷೆ ಸಾಕಮ್ಮ ಮಾತನಾಡಿ, ಇಲ್ಲಿನ ಜನರು ಹಾಗೂ ಗ್ರಾಪಂ ಸದಸ್ಯರು ನನ್ನ ಮೇಲೆ ನಂಬಿಕೆ ಇಟ್ಟು ಗೆಲ್ಲಿಸಿ ಅಧ್ಯಕ್ಷರಾಗಿ ಮಾಡಿ ದ್ದಾರೆ. ಬೆಟ್ಟದಲ್ಲಿ ಗಿರಿಜನರು ಅಧಿಕ ಸಂಖ್ಯೆ ಯಲ್ಲಿ ವಾಸವಾಗಿದ್ದಾರೆ. ಇತರೆ ಸಮು ದಾಯದವರೂ ಇದ್ದು ಇಲ್ಲಿ ಅನೇಕ ಸಮಸ್ಯೆಗಳಿವೆ. ಇದನ್ನು ನಿವಾರಿಸುವ ನಿಟ್ಟಿ ನಲ್ಲಿ ಕ್ರಮ ವಹಿಸಲಾಗುವುದು. ಕುಡಿಯುವ ನೀರು, ಸ್ವತ್ಛತೆ, ರಸ್ತೆ, ಚರಂಡಿ ಬುಡಕಟ್ಟು ಜನಾಂಗಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯ ಕೊಡಿಸಲು ಪ್ರಮಾಣಿಕವಾಗಿ ಪ್ರಯತ್ನ ಮಾಡಲಾಗುವುದು ಎಂದರು.

ಗ್ರಾಪಂ ಉಪಾಧ್ಯಕ್ಷ ಪ್ರತೀಪ್‌ಕುಮಾರ್‌, ಸದಸ್ಯರಾದ ಬೇದೇಗೌಡ, ಸಿಡಿ ಮಾದೇವ, ಮಾದಮ್ಮ, ಕಮಲಮ್ಮ, ರಂಗಮ್ಮ ಪಿಡಿಒ ಸ್ವಾಮಿ, ನಾಗೇಂದ್ರ, ಕೇತಮ್ಮ, ಮುಖಂಡರಾದ ಮಹದೇವಸ್ವಾಮಿ, ರಾಮು, ಜಕಾವುಲ್ಲಾ, ಸಂತೋಷ್‌ ಇತರರು ಇದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next