Advertisement

ಹೊಸ ವರ್ಷಕ್ಕೆ ಮಾರುಕಟ್ಟೆಯಲ್ಲಿ ಹೊಸ ಫೋನ್‌

09:56 PM Feb 06, 2020 | mahesh |

ಈ ವರ್ಷ ಯಾವೆಲ್ಲ ಹೊಸ ರೀತಿಯ ಫೋನ್‌ಗಳು ಮಾರುಕಟ್ಟೆಗೆ ಕಾಲಿಡಲಿವೆ ಎಂಬ ಕುತೂಹಲ
ಎಲ್ಲರಲ್ಲಿರುವುದು ಸಾಮಾನ್ಯ. ಅದಕ್ಕೆ ತಕ್ಕಂತೆ ಗ್ರಾಹಕರ ಮನಸ್ಸಿಗೊಪ್ಪುವಂಥ ಸ್ಮಾರ್ಟ್‌ಫೋನ್‌ಗಳನ್ನು ಕಂಪೆನಿಗಳು ಬಿಡುಗಡೆ ಮಾಡಿದ್ದು , ಎಲ್ಲರ ಮನಸೆಳೆಯುತ್ತಿವೆ. ಅಂತಹ ಫೋನ್‌ಗಳಲ್ಲಿ ಕೆಲವು ಗ್ರಾಹಕರ ಮೆಚ್ಚುಗೆ ಪಡೆದಿದ್ದು, ಅಧಿಕ ಮಾರಾಟವಾದ ಫೋನ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ.

Advertisement

ವರ್ಷದಿಂದ ವರ್ಷಕ್ಕೆ ಸ್ಮಾರ್ಟ್‌ಫೋನ್‌ಗಳಲ್ಲಿ ವೈವಿಧ್ಯತೆ ಬರುತ್ತಿದೆ. ಈ ವರ್ಷ ಯಾವೆಲ್ಲ ಹೊಸ ರೀತಿಯ ಫೋನ್‌ಗಳು ಮಾರುಕಟ್ಟೆಗೆ ಕಾಲಿಡಲಿವೆ ಎಂಬ ಕುತೂಹಲ ಅನೇಕರಲ್ಲಿದೆ. ಪ್ರತಿಷ್ಠಿತ ಐಫೋನ್‌ ಸಂಸ್ಥೆಯು ಈ ವರ್ಷ ಗ್ರಾಹಕರಿಗೆ ಅಗ್ಗದ ಸ್ಮಾರ್ಟ್‌ಫೋನ್‌ ನೀಡಲು ತಯಾರಾಗಿದೆ. ಕಡಿಮೆ ಬೆಲೆಗೆ ಐಫೋನ್‌ 9 ಅನ್ನು ಈ ವರ್ಷ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಅದೇ ರೀತಿ ಸ್ಯಾಮ್‌ಸಂಗ್‌, ಹುವಾಯ್‌ ಸಂಸ್ಥೆ ಕೂಡ ಕಡಿಮೆ ಬೆಲೆ ಮತ್ತು ಅಗಲ ಡಿಸ್ಪೇಯ ಸ್ಮಾರ್ಟ್‌ ಫೋನ್‌ಗಳನ್ನು ಉತ್ಪಾದಿಸಿ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಕಸರತ್ತು ನಡೆಸುತ್ತಿದೆ.

ಪ್ರಮುಖ ಸ್ಮಾರ್ಟ್‌ಫೋನ್‌ ಉತ್ಪಾದನಾ ಸಂಸ್ಥೆಯಾದ ಒಪ್ಪೋ ಈ ವರ್ಷ ಎಫ್‌-15 ಎಂಬ ನಾಲ್ಕು ಕ್ಯಾಮಾರವುಳ್ಳ ಸ್ಮಾರ್ಟ್‌ ಫೋನ್‌ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಿತ್ತು. ಈ ಸ್ಮಾರ್ಟ್‌ ಫೋನ್‌ 6.6 ಇಂಚಿನ ಫುಲ್‌ ಎಚ್‌ಡಿ-ಅಮಾಯ್ಡ ಡಿಸ್‌ ಪ್ಲೇ ಜತೆಗೆ ಗೊರಿಲ್ಲಾ ಗ್ಲಾಸ್‌ ರಕ್ಷಣೆಯನ್ನು ಹೊಂದಿದೆ. ಮಿಡಿಯಾ ಟೆಕ್‌ ಪಿ 70 ಪ್ರೊಸೇಸರ್‌ ಅನ್ನು 8ಜಿಬಿ ರ್ಯಾಮ್‌ ಮತ್ತು 128 ಜಿಬಿ ಸ್ಟೊರೇಜ್‌ ಒಳಗೊಂಡಿದೆ. ಮಾತ್ರವಲ್ಲದೆ ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 256 ಜಿಬಿ ವರೆಗೂ ಸ್ಟೋರೇಜ್‌ ಅನ್ನು ವಿಸ್ತರಿಸಬಹುದಾದ ಸೌಲಭ್ಯವನ್ನು ಹೊಂದಿದೆ.

ಒಪ್ಪೋ ಎಫ್‌-15 ಕ್ಯಾಡ್‌ ರಿಯರ್‌ ಕೆಮರಾ ಸೆಟಪ್‌ ಹೊಂದಿದ್ದು ಪ್ರಾಥಮಿಕ ಕೆಮರ ಸಾಮಾರ್ಥಯ 48 ಮೆಗಾ ಫಿಕ್ಸೆಲ್‌, 8 ಎಂ.ಪಿ. ಅಲ್ಟ್ರಾ ವೈಡ್‌ ಆ್ಯಂಗಲ್‌ ಮೈಕ್ರೋ ಲೆನ್ಸ್‌, 2 ಎಂಪಿ ಮೋನೋ ಲೆನ್ಸ್‌ ಮತ್ತು 2 ಎಂಪಿ ಪೋಟ್ರೈಟ್‌ ಲೆನ್ಸ್‌ ಅನ್ನು ಒಳಗೊಂಡಿದೆ. ಮಾತ್ರವಲ್ಲದೆ 16 ಎಂಪಿ ಸೆಲ್ಫಿ ಕೆಮರಾವನ್ನು ಹೊಂದಿದೆ.

32 ಮೆಗಾ ಫಿಕ್ಸೆಲ್‌ ಸೆಲ್ಫಿ ಕೆಮರಾ ಒಳಗೊಂಡ ಸ್ಮಾರ್ಟ್‌ ಫೋನ್‌ ಅನ್ನು ವಿವೋ ಸಂಸ್ಥೆಯು ಬಿಡುಗಡೆ ಮಾಡಲು ತಯಾರಾಗಿದೆ. ಎಸ್‌-1 ಶ್ರೇಣಿಯಲ್ಲಿ ಬಿಡುಗಡೆಯಾಗುತ್ತಿರುವ ಈ ಸ್ಮಾರ್ಟ್‌ಫೋನ್‌ ಪೂರ್ಣ ಪ್ರಮಾಣದ ಎಚ್‌ಡಿ ರೆಸಲ್ಯೂಷನ್‌ ಹೊಂದಿದ್ದು, 6.38 ಇಂಚಿನ ಸೂಪರ್‌ ಅಮೋಲೆಡ್‌ ಡಿಸ್‌ಪ್ಲೇ ಒಳಗೊಂಡಿದೆ. 8 ಜಿಬಿ ರ್ಯಾಮ್‌ ಮತ್ತು 128 ಜಿಬಿ ಇಂಟರ್ನಲ್‌ ಮೆಮೊರಿ ಹೊಂದಿರಲಿದೆ.
ಮಡಚುವ ಫೋನ್‌ ಕೂಡ ಸದ್ಯದಲ್ಲಿಯೇ ಭಾರತೀಯ ಮಾರುಕಟ್ಟೆಗೆ ಕಾಲಿಡಲಿದೆ. ಸ್ಮಾಮ್‌ಸಂಗ್‌ ಸಮಸ್ಥೆಯು ಕೆಲವೇ ತಿಂಗಳಿನಲ್ಲಿ ಮಡಚುವ ಫೋನ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಮೊಟೊರೋಲಾ ಮತ್ತು ಹುವೇ ಅನಂತರ ಇದೀಗ ಸ್ಯಾಮ್‌ಸಂಗ್‌ ಸಂಸ್ಥೆಯು ಬಿಡುಗಡೆ ಮಾಡಲು ತಯಾರಾಗಿದೆ.

Advertisement

108 ಮೆಗಾ ಪಿಕ್ಸೆಲ್‌ ಫೋನ್‌ !
ಚೀನಾದ ಸ್ಮಾರ್ಟ್‌ ಫೋನ್‌ ಕಂಪೆನಿಯಾದ ಕ್ಸಿಯೋಮಿಯ 108 ಮೆಗಾಪಿಕ್ಸೆಲ್‌ ಹೊಂದಿರುವ ಪೆಂಟಾ ಕೆಮರಾ ಇರುವ ಡ್ಯುಯಲ್‌ ನ್ಯಾನೋ ಸಿಮ್‌ ಫೋನ್‌ ಶೀಘ್ರವೇ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಈ ಫೋನ್‌ ಬಿಡುಗಡೆ ಮಾಡುವ ಮೂಲಕ ಆ್ಯಪಲ್‌, ಸ್ಯಾಮ್‌ಸಂಗ್‌, ಒನ್‌ ಪ್ಲಸ್‌ ಕಂಪೆನಿಗಳಿಗೆ ಸ್ಪರ್ಧೆ ನೀಡಲು ಮುಂದಾಗಿದೆ. ನೋಟ್‌ 10 ಫೋನ್‌ನಲ್ಲಿ ಒಟ್ಟು 5 ಕೆಮರಾ ಇದೆ. 108 ಮೆಗಾಪಿಕ್ಸೆಲ್‌ ಸೆನ್ಸರ್‌ ಹೊಂದಿರುವ ಕೆಮರಾ, 5 ಎಂಪಿ ಕೆಮರಾ (50 ಎಕ್ಸ್‌ ಝೂಮ್‌), ಸ್ಪಷ್ಟವಾದ ಭಾವಚಿತ್ರ ತೆಗೆಯಲು 12 ಎಂಪಿ ಪೊಟ್ರೈಟ್‌ ಕೆಮರಾ, 20 ಎಂಪಿ ಆಲ್ಟ್ರಾ ವೈಡ್‌ ಆ್ಯಂಗಲ್‌, ಮ್ಯಾಕ್ರೋ ಫೋಟೋಗಳಿಗಾಗಿ 2 ಎಂಪಿ ಕೆಮರಾ ನೀಡಲಾಗಿದೆ. ಮುಂದುಗಡೆ ಸೆಲ್ಫಿà ಕ್ಲಿಕ್ಕಿಸಲು 32 ಎಂಪಿ ಕೆಮರಾವನ್ನು ನೀಡಲಾಗಿದೆ. ಮುಂದುಗಡೆ ಕೆಮರಾದ ಜತೆ ವಾಟರ್‌ ಪ್ರೂಫ್‌ ನಾಚ್‌ ಇದೆ. ಪ್ರಮುಖ ಫೋನ್‌ ಉತ್ಪಾದನಾ ಸಂಸ್ಥೆಯಾದ ನೋಕಿಯಾ ಈ ವರ್ಷ 5ಜಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲಿದೆ.

ನ್ಯೂಫೋನ್‌
ಹೊಸ ಹೊಸ ಮಾದರಿಯ ಫೋನ್‌ಗಳು ಮಾರುಕಟ್ಟೆಗೆ ಕಾಲಿಡಲಿದ್ದು ಇನ್ನು ಸ್ವಲ್ಪ ದಿನದಲ್ಲಿ ಸ್ಮಾರ್ಟ್‌ ಫೋನ್‌ಗಳಲ್ಲಿ ಅನೇಕ ಆಯ್ಕೆಯ ಮತ್ತು ಹೊಸ ಲಕ್ಷಣಗಳನ್ನು ಹೊಂದಿದ ಫೋನ್‌ ಬರಲಿದೆ. ಕೆಲವು ಫೋನ್‌ಗಳಿಗೆ ಈಗಲೇ ಬುಕ್ಕಿಂಗ್‌ ಆಗಿದ್ದು, ಯಾವ ಯಾವ ಫೋನ್‌ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

– ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next