Advertisement

ಜೆಡಿಎಸ್‌ ತ್ಯಜಿಸಿ ಕಾಂಗ್ರೆಸ್‌ ಸೇರ್ಪಡೆ

01:26 PM Dec 22, 2020 | Suhan S |

ವಿಜಯಪುರ: ಕಾಂಗ್ರೆಸ್‌ನಲ್ಲಿ ಎಲ್ಲರಿಗೂ ಸಮಾನ ಸ್ಥಾನಮಾನ ಸಿಗುತ್ತದೆ. ಪಕ್ಷದ ಸಿದ್ಧಾಂತ ಮೆಚ್ಚಿ ಕಾಂಗ್ರೆಸ್‌ ಸೇರ್ಪಡೆಯಾದವರಿಗೆ ಅಭಿನಂದನೆ ಎಂದು ಜಿಪಂ ಸದಸ್ಯ ಲಕ್ಷ್ಮೀ ನಾರಾಯಣ್‌ ಹೇಳಿದರು.

Advertisement

ಚನ್ನರಾಯಪಟ್ಟಣ ಹೋಬಳಿ ಬಾಲೇಪುರ ಗ್ರಾಮದಲ್ಲಿ ವರದೇನಹಳ್ಳಿ ಗ್ರಾಪಂ ಮಾಜಿಸದಸ್ಯ ಕೆಂಪೇಗೌಡ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಮುಖಂಡರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಹಿಂದಿನಿಂದಲೂ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದಾಗ ಜನಪರ ಯೋಜನೆಗಳನ್ನು ಜಾರಿ ಮಾಡಿದ್ದು, ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಿ ಆಡಳಿತ ನಡೆಸಬೇಕು.ಇದರಿಂದಮುಂದಿನಚುನಾವಣೆಗಳಲ್ಲಿಹೆಚ್ಚಿನಬಲಬರುತ್ತದೆ.ಬೂತ್‌ಮಟ್ಟದಿಂದಲೂಸಂಘಟನೆಯಾಗುತ್ತಿದೆ ಎಂದು ತಿಳಿಸಿದರು.

ತಾಪಂ ಸದಸ್ಯ ವೆಂಕಟೇಶ್‌, ಚನ್ನರಾಯಪಟ್ಟಣ ಗ್ರಾಪಂ ಮಾಜಿ ಅಧ್ಯಕ್ಷ ಮುನಿಕೃಷ್ಣಪ್ಪ,ಕಾಂಗ್ರೆಸ್‌ಮುಖಂಡ ಹನುಮೇಗೌಡ, ವರದೇನಹಳ್ಳಿ ಗ್ರಾಮದ ಮುಖಂಡರಾದ ಅಂಬರೀಶ್‌,ಮುನಿನರಸಿಂಹಯ್ಯ, ಮೂರ್ತಿ, ಇನ್ನೂ ಮುಂತಾದವರು ಹಾಜರಿದ್ದರು.

ಬೆಸ್ಕಾಂ ಕುಂದು-ಕೊರತೆ ಸಭೆ :

Advertisement

ದೊಡ್ಡಬಳ್ಳಾಪುರ: ನಗರದ ಟಿಬಿ ವೃತ್ತದ ಬಳಿಯಲ್ಲಿನ ದೊಡ್ಡಬಳ್ಳಾಪುರ ನಗರ ಬೆಸ್ಕಾಂಕಚೇರಿಯಲ್ಲಿ ಗ್ರಾಹಕರಕುಂದು – ಕೊರತೆ ಸಭೆ ನಡೆಯಿತು.

ಸಭೆಯಲ್ಲಿ ಬೆರಳೆಣಿಕೆ ಗ್ರಾಹಕರು ಮಾತ್ರ ಭಾಗವಹಿಸಿದ್ದರು. ಸಹಾಯಕಕಾರ್ಯಪಾಲಕ ಅಭಿಯಂತರ ರೋಹಿತ್‌ ಮಾತನಾಡಿ, ನಗರ ಉಪವಿಭಾಗದ ವ್ಯಾಪ್ತಿಯಲ್ಲಿನ ಗ್ರಾಹಕರ ಕುಂದು – ಕೊರತೆ ಚರ್ಚಿಸಿ ಬಗೆಹರಿಸಿಕೊಳ್ಳಲು ಪ್ರತಿ ತಿಂಗಳ3ನೇ ಶನಿವಾರ ಸಭೆ ನಡೆಸಲಾಗುತ್ತಿದ್ದು, ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕಿದೆ. ಸಭೆಯಲ್ಲಿ ಭಾಗವಹಿಸಿ ಸಮಸ್ಯೆಗಮನಕ್ಕೆ ತಂದಾಗ ಮಾಹಿತಿ ಇರದಂತಹ ಸಮಸ್ಯೆ ಬಗೆಹರಿಸಲು ಅನುಕೂಲ ಎಂದರು.

ಗ್ರಾಹಕರ ಬಿಲ್‌ ಮೊತ್ತ ಹೆಚ್ಚಾಗಿರುವುದು, ಲೈನ್‌ ಮೆನ್‌ಗಳು ವಿಳಂಬ ಮಾಡುವುದು ಮೊದಲಾದ ಸಮಸ್ಯೆಗಳನ್ನು ಗಮನಕ್ಕೆ ತರಲಾಯಿತು. ಸ್ಪಷ್ಟನೆ ನೀಡಿದ ಹೆಚ್ಚು ನಮೂದಿಗೆಕಾರಣ ವಿವರಿಸಿದರು. ಸಭೆಯಲ್ಲಿ ಶಾಖಾಧಿಕಾರಿಗಳಾದ ರಾಜಪ್ಪ, ಹನುಮಂತೇಗೌಡ, ಮೋಹನ್‌ಕುಮಾರ್‌, ಲಕ್ಷ್ಮಣ್‌, ಲಿಂಗೇಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next