ಮಲೆನಾಡಿನ ಬಹುಮುಖ್ಯ ಬೆಳೆಯಾದ ಅಡಕೆಯಿಂದ ಚಹಾಪುಡಿ ಸೇರಿ ಹಲವು ಹೊಸ ವಸ್ತುಗಳನ್ನು ಕಂಡುಹಿಡಿದು ಸಫಲರಾಗಿರುವ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ನಿವೇದನ್ ನೆಂಪೆ ಈಗ ಮಂಗನಕಾಯಿಲೆ ತಡೆಗೆ ಔಷಧ ಕಂಡುಹಿಡಿದಿದ್ದಾರೆ.
Advertisement
ಉಣ್ಣೆ ಕಡಿತಕ್ಕೆ ತಡೆ: ಈ ಕಾಯಿಲೆ ಉಣ್ಣೆ (ಉಣುಗು) ಕಚ್ಚುವುದರಿಂದ ಹರಡಲಿದ್ದು, ಮನುಷ್ಯನಿಗೆ ಉಣ್ಣೆ ಕಚ್ಚುವುದನ್ನು ತಡೆದರೆ ರೋಗ ಹರಡಲು ಸಾಧ್ಯವೇ ಇಲ್ಲ. ಉಣ್ಣೆ ಕಚ್ಚದಂತೆ ತಡೆಯಲು ಈಗಾಗಲೇ ಆರೋಗ್ಯ ಇಲಾಖೆಯಿಂದ ಡಿಎಂಪಿ ಎಣ್ಣೆ ಕೊಡಲಾಗುತ್ತಿದೆ. ಆದರೆ ಇದರ ಲಭ್ಯತೆ ಹಾಗೂ ಪರಿಣಾಮಗಳು ವ್ಯತಿರಿಕ್ತವಾಗಿರುವುದರಿಂದ ಬಳಕೆ ಪ್ರಮಾಣ ಕಡಿಮೆ. ಅನಿವಾರ್ಯವಾಗಿ ಬಳಸಿದರೂ ಚರ್ಮದ ಸಮಸ್ಯೆ, ಇತರೆ ವ್ಯಾಧಿಗಳು ಕಾಣಿಸಿಕೊಳ್ಳುವುದರಿಂದ ಜನ ಭಯದಿಂದಲೇ ಬಳಸುತ್ತಾರೆ. ಇದನ್ನು ಅರಿತ ಯುವಕ ಗಿಡಮೂಲಿಕೆಗಳಿಂದ ಔಷಧ (ಆಯಿಂಟ್‌ಮೆಂಟ್) ತಯಾರಿಸಿ ಅದನ್ನು ಬಳಸಿ ಯಶಸ್ವಿಯಾಗಿದ್ದಾನೆ.
ದಿನಗಳಲ್ಲೇ ಸಂಶೋಧನೆ ನಡೆಸಿದ್ದ ನಿವೇದನ್ ಈಬಾರಿ ಮಹಾಮಾರಿ ಮಂಗನಕಾಯಿಲೆ ಆರ್ಭಟ ಹೆಚ್ಚಾಗುತ್ತಿದ್ದಂತೆ ಮತ್ತೆ ಪರೀಕ್ಷೆಗಿಳಿದು ಪ್ರಾಥಮಿಕ ಹಂತದಲ್ಲಿ ಪಾಸಾಗಿದ್ದಾನೆ. ಕಪ್ಪು ಜೀರಿಗೆ citronella (ಥೈಮೋಕ್ವಿನನ್) ಜತೆ ಮಾಮೂಲಿ ಜೀರಿಗೆಯನ್ನು
ಸಂಸ್ಕರಿಸಿ ಇದಕ್ಕೆ ಬಳಸಲಾಗುತ್ತಿದೆ. ಜೆಲ್ ರೂಪದಲ್ಲಿ ಇರುವ ಅದನ್ನು ಮೈ, ಕೈಗೆ ಸವರಿಕೊಳ್ಳಬಹುದಾಗಿದೆ. ಸೊಳ್ಳೆಗೂ ಮದ್ದು: ಸರಕಾರಿ ಆಸ್ಪತ್ರೆಯಲ್ಲಿ ಕೊಡುತ್ತಿರುವ ಡಿಎಂಪಿ ಆಯಿಲ್ ಮೂಲತಃ ಸೊಳ್ಳೆಗಳಿಂದ ಮುಕ್ತಿ ಪಡೆಯಲು ಬಳಕೆಯಾಗುತ್ತಿತ್ತು. ಇದನ್ನು ಉಣ್ಣೆಗಳ ನಿಯಂತ್ರಣಕ್ಕೂ ಬಳಸಲಾಗುತ್ತಿದೆ. ಇದರಿಂದ ಉತ್ತೇಜನಗೊಂಡ ಯುವಕ ಉಣ್ಣೆ ಜತೆ
ಸೊಳ್ಳೆಗಳನ್ನೂ ನಿಯಂತ್ರಿಸಲು ಅದಕ್ಕೆ ಸಿಟ್ರೋನೆಲ್ಲ (ಸೊಳ್ಳೆಗಳನ್ನು ದೂರವಿಡುವ ಎಣ್ಣೆ) ಮಿಕ್ಸ್ ಮಾಡಿದ್ದಾನೆ. ಸಿಟ್ರೋನೆಲ್ಲ ಎಣ್ಣೆಯು ನೈಸರ್ಗಿಕವಾಗಿ ಸಿಗುವ ಹುಲ್ಲೆಣ್ಣೆಯಿಂದ ಸಂಸ್ಕರಿತವಾದದ್ದು.
Related Articles
Advertisement
ಮಲೆನಾಡಿನ ಕೆಲ ಪ್ರದೇಶಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ಮಂಗನ ಕಾಯಿಲೆ ಬಗ್ಗೆ ಹೆಚ್ಚಿನ ಸಂಶೋಧನೆಗಳಾಗಿಲ್ಲ. ವೈರಸ್ ವಿರುದಟಛಿ ಔಷಧಿ ಕಂಡುಹಿಡಿಯುವಷ್ಟು ನಮ್ಮಲ್ಲಿ ಪರಿಕರಗಳಿಲ್ಲ. ಉಣ್ಣೆ ಮೂಲಕ ಹರಡುವ ಕಾಯಿಲೆ ಆಗಿರುವುದರಿಂದ ಅದು ಕಡಿಯದಂತೆ ಮಾಡಲು ಔಷಧ ಕಂಡುಹಿಡಿಯಲಾಗಿದೆ. ಆಯುಷ್ ಇಲಾಖೆ ಅನುಮತಿ ಕೊಟ್ಟರೆ ಉಚಿತವಾಗಿ ವಿತರಿಸಲಾಗುವುದು.● ನಿವೇದನ್ ನೆಂಪೆ, ಯುವ ವಿಜ್ಞಾನಿ ● ಶರತ್ ಭದ್ರಾವತಿ