ನವದೆಹಲಿ: ಕೆಲ ವರ್ಷಗಳ ಹಿಂದೆ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ್ದ ಮಾರುತಿ ಸುಜುಕಿ 800 ಸಿಸಿ ಕಾರು ಮತ್ತೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ. ಹೌದು ! 2021ರಲ್ಲಿ 800 ಸಿಸಿ ಕಾರನ್ನು ವಿನ್ಯಾಸಗೊಳಿಸಿ ನೂತನವಾಗಿ ಪರಿಚಯಿಸಲಾಗುತ್ತಿದೆ.
ಈ ಹಿಂದೆ ಮಾರುತಿ ಸುಜುಕಿ ಕಂಪನಿಯ 800 ಕಾರು ಭಾರೀ ಜನಪ್ರಿಯತೆ ಪಡೆದಿತ್ತು. ಮಾತ್ರವಲ್ಲದೆ, ದೇಶದಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಮಾರಾಟವಾಗುವ ಮೂಲಕ ದಾಖಲೆ ಬರೆದಿತ್ತು. ಆದರೇ ನಂತರದಲ್ಲಿ ಕಾರು ಉತ್ಪಾದನಾ ಕ್ಷೇತ್ರದಲ್ಲಿ ಪೈಪೋಟಿಗಳು ಹೆಚ್ಚಿದ್ದರಿಂದ ಮಾರುತಿ 800 ತೆರೆಮರೆಗೆ ಸರಿದಿತ್ತು.
ಇದೀಗ ಹೊಸ ಮಾರುತಿ 800 ಸಿಸಿ ಕಾರು ಬಿಡುಗಡೆಗೆ ಸಿದ್ದವಾಗಿದ್ದು, ಪೆಟ್ರೋಲ್ ಎಂಜಿನ್ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗುತ್ತಿದೆ. ಈ ಕಾರು 796ಸಿಸಿ ಎಂಜಿನ್ ಹೊಂದಿದ್ದು, 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಪರಿಚಯಿಸಲಿದೆ. 48 ಪಿಎಸ್ ಅಧಿಕ ಪವರ್ ಮತ್ತು 69 ಎನ್ಎಮ್ ಪೀಕ್ ಟಾರ್ಕ್ ಉತ್ಪಾದಿಸಲಿದೆ. 5 ಸ್ಪೀಡ್ ಮ್ಯಾನುಯೆಲ್ ಟ್ರಾನ್ಸ್ ಮಿಷನ್ ಜೊತೆಗೆ ಎಎಂಟಿ ಗೇರ್ ಬಾಕ್ಸ್ ಆಯ್ಕೆಯನ್ನೂ ಪರಿಚಯಿಸಲಿದೆ ಎನ್ನಲಾಗುತ್ತಿದೆ. ಇನ್ನು ಕಾರಿನಲ್ಲಿ ಆ್ಯಪಲ್ ಕಾರ್ ಪ್ಲೇ, ಆ್ಯಂಡ್ರಾಯ್ಡ್ ಅಟೋ ಕನೆಕ್ಟಿವಿಟಿ, ಪವರ್ ವಿಂಡೋ, ಎಲ್ಇಡಿ ಡಿಆರ್ ಎಲ್ಎಸ್, ವೀಲ್ ಕ್ಯಾಪ್, ಡುಯೆಲ್ ಏರ್ ಬ್ಯಾಗ್ ಎಬಿಎಸ್ , ರಿವರ್ಡ್ ಪಾರ್ಕಿಂಗ್ ಸೆನ್ಸಾರ್ ಅಳವಡಿಕೆಯಾಗಿದೆ ಎಂದು ಹೇಳಲಾಗುತ್ತಿದೆ.
ನೂತನ 800ಸಿಸಿ ಕಾರಿನ ಬೆಲೆ 3.5 ಲಕ್ಷವರೆಗೆ ಇರಲಿವೆ ಎಂದು ಅಂದಾಜಿಸಲಾಗಿದ್ದು, 2021ನೇ ವರ್ಷದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡುತ್ತದೆ ಎಂದು ವರದಿಯಾಗಿದೆ.