Advertisement

ಹೇರ್‌ಸ್ಟೈಲ್‌ಗೆ ಹೊಸ ಲುಕ್‌

09:31 PM Dec 12, 2019 | mahesh |

ಹಿಂದೊಂದು ಕಾಲವಿತ್ತು. ಮಹಿಳೆಯರು ತಲೆತುಂಬಾ ಎಣ್ಣೆಹಾಕಿ ಜಡೆಹೆಣೆದು ಬಾಚಿಕೊಳ್ಳುವುದೇ ಒಂದು ಫ್ಯಾಶನ್‌ ಆಗಿತ್ತು. ಆದರೆ ಇಂದು ಈ ರೀತಿ ತಲೆಕಟ್ಟಿಕೊಳ್ಳಲು ಬಹುತೇಕರು ಹಿಂದೇಟು ಹಾಕುತ್ತಾರೆ. ಇನ್ನೂ ಕೆಲವರಿಗೆ ಕಾಲಕ್ಕೆ ತಕ್ಕಂತೆ ಫ್ಯಾಷನ್‌ ಆಳವಡಿಸುವುದೆಂದರೆ ಬಲು ಇಷ್ಟ. ಹಾಗಾದರೆ ಚಳಿಗಾಲಕ್ಕೆ ಯಾವ ಫ್ಯಾಷನ್‌ ಸೂಕ್ತ? ಇಂದಿನ ಜನರ ಆದ್ಯತೆಗಳು ಯಾವುದಕ್ಕೆ ಎನ್ನುವುದನ್ನು ವಿವರಿಸಲಾಗಿದೆ.

Advertisement

ಹೇರ್‌ ಕಲರ್‌
ಹೇರ್‌ ಕಲರಿಂಗ್‌ ಮಾಡುವಾಗ ನಮ್ಮ ತ್ವಚೆಗೆ ಹೊಂದುವ ಬಣ್ಣವನ್ನೇ ಆಯ್ಕೆ ಮಾಡಬೇಕು. ಚಾಕಲೇಟ್‌ ಕಲರ್‌, ಕೆಂಪು ಮತ್ತು ಹಳದಿ ಬಣ್ಣವನ್ನು ದೇಶೀಯ ಫ್ಯಾಷನ್‌ನಲ್ಲಿ ಅಧಿಕವಾಗಿ ಬಳಸುತ್ತಿದ್ದಾರೆ. ಕಲರ್‌ ಮಾಡಿಸಿದ ಕೂದಲನ್ನು ಸ್ಟ್ರೈಟಲಿಂಗ್ ಅಥವಾ ರಿಂಗ್‌ ಹೇರ್‌ ಸ್ಟೈಲ್‌ ಮಾಡಿಸುವುದರಿಂದ ಕೂದಲ ಹೊಳಪು ಹೆಚ್ಚುತ್ತದೆ. ಸಾಮಾನ್ಯವಾಗಿ ಮದುವೆ, ಮೆಹಂದಿ, ಕಾಲೇಜ್‌ ಡೇ ಪಾರ್ಟಿಗೆ ಕಲರ್‌ ಮಾಡಿಸುವಾಗ ಡ್ರೆಸ್‌ ಆಯ್ಕೆಗೆ ತಕ್ಕಂತೆ ಹೇರ್‌ ಕಲರ್‌ ಮಾಡಿಸುವುದರಿಂದ ಹೆಚ್ಚು ಕಲರ್‌ಫ‌ುಲ್‌ ಲುಕ್‌ ನಿಮ್ಮದಾಗುತ್ತದೆ.

ಬಳಸಿ ಹೇರ್‌ಪಿನ್‌
ಸೊಟ್ಟಗಿದ್ದ ಕೂದಲನ್ನು ಸರಿಪಡಿಸಲು ಅಥವಾ ಹೂ ಮುಡಿಯಲು ಮಾತ್ರ ಹೇರ್‌ ಪಿನ್‌ ಬಳಸದೇ ಹೊಸ ಹೇರ್‌ ಸ್ಟೈಲ್‌ಗ‌ೂ ಬಳಕೆ ಮಾಡಬಹುದು. ಹೆಚ್ಚಿನ ಬ್ಯುಟಿಷೀಯನ್‌ ಉದ್ದದ ಹೇರ್‌ ಪಿನ್‌ ಬಳಸುವಂತೆ ಸಲಹೆ ನೀಡುತ್ತಾರೆ. ಯಾಕೆಂದರೆ ಚಿಕ್ಕ ಹೇರ್‌ ಪಿನ್‌ಗಳು ಕೂದಲನ್ನು ಸುಕ್ಕುಗಟ್ಟುವಂತೆ ಮಾಡುತ್ತವೆ. ಮತ್ತು ಗ್ರಿಪ್‌ ಕೂಡಾ ಸಿಗಲಾರದು. ಆದರೆ ಉದ್ದಗಿನ ಹೇರ್‌ ಪಿನ್‌ ಬಳಸಿ ಕೂದಲು ಸಿಕ್ಕಾಗುವುದನ್ನು ತಡೆಯುವುದರೊಂದಿಗೆ ಪಫೆìಕ್ಟ್ ಲುಕ್‌ ನೀಡಲು ಉಪಯುಕ್ತ. ಯುವ ಜನತೆ ಹೆಚ್ಚಾಗಿ ಹೇರ್‌ ಪಿನ್‌ ಲುಕ್‌ ಎನ್ನುವ ನೂತನ ಟ್ರೆಂಡ್‌ಗೆ ಮೊರೆಹೊಗಿದೆ.

ಫ್ರೀ ಕರ್ಲಿ ಹೇರ್‌ ಲುಕ್‌
ನಮ್ಮಲ್ಲಿ ಗುಂಗುರು ಕೂದಲನ್ನು ಇಷ್ಟಪಡುವವರು ಬಹುತೇಕರಿದ್ದಾರೆ. ಅವರು ಈ ಫ್ರೀ ಕರ್ಲಿ ಹೇರ್‌ ಲುಕ್‌ ಅನ್ನು ಒಮ್ಮೆ ಟ್ರೈ ಮಾಡಿದರೆ ಡಿಫ‌ರೆಂಟ್‌ ಲುಕ್‌ ನಿಮ್ಮದಾಗಿಸಬಹುದು. ಬಾಬ್‌ ಕಟ್‌ ಇರುವವರು ಒದ್ದೆ ಕೂದಲನ್ನು ಸುರುಳಿ ಆಕೃತಿಗೆ ಸುತ್ತಿಸಿ ಪಿನ್‌ ಹಾಕಬೇಕು. ಬಳಿಕ ಹೇರ್‌ ಡ್ರೈಯರ್‌ ಬಳಸಿ ಒಣಗಿಸಿಕೊಳ್ಳಿ. ಹೀಗೆ ಮಾಡುವುದರಿಂದ ಕೂದಲು ರಿಂಗ್‌ ಆಕೃತಿ ಪಡೆಯುವುದಲ್ಲದೆ ಹೊಳಪಿನ ಲುಕ್‌ ನಿಮ್ಮದಾಗುತ್ತದೆ.

ಶೈನಿ ಕೂದಲು
ಇಂದು ಬಹುತೇಕರು ಫ್ರೀ ಹೇರ್‌ ಬಳಸುವುದನ್ನು ಇಷ್ಟಪಡುತ್ತಾರೆ. ಕೂದಲು ಗಿಡ್ಡವಿರಲಿ ಅಥವಾ ಉದ್ದವಿರಲಿ ಹೊಳಪಿನಿಂದ ಮಜೂತಾಗಿದ್ದರೆ ಏನೋ ಖುಷಿ. ಹೆಚ್ಚಿನವರು ಕೆರಾಟಿನ್‌ ಮತ್ತು ಸೆರಮ್‌ ಅನ್ನು ಬಳಸುತ್ತಾರೆ. ಇದಕ್ಕೂ ಮಿಗಿಲಾಗಿ ದಾಸವಾಳದ ಎಲೆಯ ಪೇಸ್ಟ್‌ನಿಂದ ಮತ್ತು ತೆಂಗಿನ ಎಣ್ಣೆಯನ್ನು ಮಸಾಜ್‌ ಮಾಡುವುದರಿಂದಲೂ ನೈಸರ್ಗಿಕ ಪೋಷಣೆಯ ಹೊಳಪಿನ ಕೂದಲನ್ನು ನಿಮ್ಮದಾಗಿಸಬಹುದು.

Advertisement

ಬೋಲ್ಡ್‌ ಲುಕ್‌
ಹಿಂದೆ ತುರುಬು ಕಟ್ಟುವುದು ಮತ್ತು ಏರು ಜುಟ್ಟು ಫ್ಯಾಷನ್‌ ಆಗಿತ್ತು. ಆದರೆ ಇಂದು ಮತ್ತೆ ಅದೇ ಫ್ಯಾಷನ್‌ ಮರುಕಳಿಸಿದೆ. ಹೆಚ್ಚಿನ ಮದುವೆ, ಆರತಕ್ಷತೆಯಲ್ಲಿ ಮದುಮಗಳಿಂದ ಹಿಡಿದು ಸಾಮಾನ್ಯ ಕಾಲೇಜಿನ ಕಾರ್ಯಕ್ರಮದಲ್ಲಿಯೂ ಈ ಫ್ಯಾಷನ್‌ ಅಳವಡಿಕೆಯನ್ನು ನೀವು ಗಮನಿಸಿರಬಹುದು. ಆದರೆ ಎಲ್ಲರಿಗೂ ಈ ಲುಕ್‌ ಪರ್ಪೆಕ್ಟ್ ಆಗದೆ ನಿಮಗೆ ಹೊಂದಿಕೊಳ್ಳುವ ಫ್ಯಾಷನ್‌ಗೆ ಆದ್ಯತೆಯನ್ನು ನೀಡಬೇಕಾಗಿದೆ.

- ರಾಧಿಕಾ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next