Advertisement

ಅಪೆಕ್ಸ್ ಒಪ್ಪಿಗೆ ಸಿಕ್ಕ ಕೂಡಲೇ ಹೊಸ ಸಾಲ ವಿತರಣೆ

09:27 AM Sep 25, 2019 | Team Udayavani |

ಧಾರವಾಡ: ಗ್ರಾಹಕರ ಬೇಡಿಕೆಯಂತೆ ಹೊಸ ಮತ್ತು ಹೆಚ್ಚುವರಿ ಸಾಲ ನೀಡುವ ಸಲುವಾಗಿ ಅಪೆಕ್ಸ್‌ ಬ್ಯಾಂಕ್‌ ಗೆ ಈಗಾಗಲೇ ಪ್ರಸ್ತಾವನೆ ಕಳಿಸಲಾಗಿದ್ದು, ಒಪ್ಪಿಗೆ ಸಿಕ್ಕ ಕೂಡಲೇ ಸಾಲ ವಿತರಣೆ ಮಾಡಲಾಗುವುದು ಎಂದು ಕೆಸಿಸಿ ಬ್ಯಾಂಕ್‌ ಅಧ್ಯಕ್ಷ ಬಾಪುಗೌಡ ಪಾಟೀಲ ಹೇಳಿದರು.

Advertisement

ಸಪ್ತಾಪುರ ಬಾವಿ ಹತ್ತಿರದ ಭಗವಾನ ಶ್ರೀ ಸತ್ಯಸಾಯಿ ಶಿಕ್ಷಣ ಸಂಸ್ಥೆಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜರುಗಿದ ಬ್ಯಾಂಕ್‌ನ 103ನೇ ವಾರ್ಷಿಕ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬ್ಯಾಂಕ್‌ ಕಾರ್ಯವ್ಯಾಪ್ತಿಯ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಅಪೆಕ್ಸ್‌ ಬ್ಯಾಂಕ್‌ ಸಹಭಾಗಿತ್ವದಲ್ಲಿ ಗಣಕೀಕೃತಗೊಳಿಸುವ ಉದ್ದೇಶವಿದೆ. ಈ ಸಂಬಂಧ ಸದ್ಯದಲ್ಲಿಯೇ ಕಾರ್ಯಾರಂಭ ಮಾಡಲಾಗುವುದು ಎಂದರು.

ಮುದ್ದತ ಮೀರಿದ ಕೃಷಿಯೇತರ ಸಾಲಗಳ ವಸೂಲಾತಿಗೆ ಆಡಳಿತ ಮಂಡಳಿ ನಿರಂತರವಾಗಿ ಪ್ರಯತ್ನಿಸುತ್ತಿದೆ. ಮುದ್ದತ ಮೀರಿದ ಕೃಷಿಯೇತರ ಸಾಲಗಳ ವಸೂಲಾತಿಗಾಗಿ ಕೈಕೊಂಡ ಪರಿಣಾಮಕಾರಿ ಕ್ರಮಗಳಿಂದ ಬಹುತೇಕ ಸಾಲಗಳನ್ನು ವಸೂಲಾತಿ ಮಾಡಲಾಗಿದೆ. ಇದರಿಂದ ಬ್ಯಾಂಕ್‌ಗೆ ಬರಬೇಕಿದ್ದ ಮೊತ್ತ ಜಮೆಯಾಗಿದೆ. ಇನ್ನೂ ಕೆಲವು ಸಾಲಗಳು ಬಾಕಿಯಿದ್ದು, ಅವುಗಳ ವಸೂಲಾತಿಗೆ ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು. ಮುದ್ದತ ಮೀರಿದ ಸಾಲಗಳ ವಸೂಲಾತಿ, ಹೊಸ ಮತ್ತು ಹೆಚ್ಚುವರಿ ಸಾಲ ನೀಡಲು ತೀರ್ಮಾನಿಸಿದ ಬ್ಯಾಂಕ್‌ನ ಆಡಳಿತ ಮಂಡಳಿ ಕಾರ್ಯಕ್ಕೆ ಸದಸ್ಯರು ಒಕ್ಕೊರಲಿನಿಂದ ಬೆಂಬಲ ವ್ಯಕ್ತಪಡಿಸಿದರು.

ಉಪಾಧ್ಯಕ್ಷ ಎಸ್‌.ವೈ. ಪಾಟೀಲ ಮತ್ತು ನಿರ್ದೇಶಕರು ಇದ್ದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಮುನಿಯಪ್ಪ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ವ್ಯವಸ್ಥಾಪಕ ಎ.ಡಿ. ಮದ್ದೂರ ಸ್ವಾಗತಿಸಿದರು. ಸಾಲ ವಿಭಾಗದ ವ್ಯವಸ್ಥಾಪಕ ಎಸ್‌.ವಿ. ಹೂಗಾರ ನಿರೂಪಿಸಿದರು. ಕೆ.ಎಸ್‌. ಕಡಕೋಳ ವಂದಿಸಿದರು. ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ವಿವಿಧ ಸಹಕಾರ ಸಂಘ-ಸಂಸ್ಥೆಗಳ ಸದಸ್ಯ ಪ್ರತಿನಿಧಿಗಳು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next