Advertisement

ಸೌರವ್‌ ಗಂಗೂಲಿ ನಟನೆಯ ಹೊಸ ಇನ್ನಿಂಗ್ಸ್‌

12:35 AM Aug 19, 2019 | Sriram |

ಕೋಲ್ಕತಾ: ಸೌರವ್‌ ಗಂಗೂಲಿ ಕ್ರಿಕೆಟಿನಿಂದ ನಿವೃತ್ತಿಯಾಗಿ 10 ವರ್ಷಗಳೇ ಆಗಿದ್ದರೂ ಈಗಲೂ ಅವರು ಪರಿಚಿತ ಮುಖವಾಗಿಯೇ ಉಳಿದಿದ್ದಾರೆ. ಇದಕ್ಕೆ ಕಾರಣ, ಅವರು ಕಿರುತೆರೆ ಪ್ರಸ್ತುತಿ. ವೀಕ್ಷಕ ವಿವರಣಕಾರನಾಗಿ ಆಗಾಗ ಕಾಣಿಸಿಕೊಳ್ಳುವ ಗಂಗೂಲಿ ಇದೀಗ ಅಭಿನಯಕ್ಕೂ ಇಳಿದಿದ್ದಾರೆ.

Advertisement

“ಝೀ ಬಾಂಗ್ಲಾ’ ಚಾನೆಲ್‌ನಲ್ಲಿ ಪ್ರಸಾರ ವಾಗುತ್ತಿರುವ “ಬೊಕುಲ್‌ ಕೊಥಾ’ ಎನ್ನುವ ಬಂಗಾಲಿ ಭಾಷೆಯ ಧಾರಾವಾಹಿಯಲ್ಲಿ ನಟನಾಗಿ ಹೊಸ ಇನ್ನಿಂಗ್ಸ್‌ ಶುರು ಮಾಡಿದ್ದಾರೆ ಕ್ರಿಕೆಟ್‌ ಅಭಿಮಾನಿಗಳ ನೆಚ್ಚಿನ ದಾದಾ.

ಹಾಗೆಂದು ಗಂಗೂಲಿ ಟಿವಿಯಲ್ಲಿ ಕಾಣಿಸಿ ಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. “ದಾದಾಗಿರಿ ಅನ್‌ಲಿಮಿಟೆಡ್‌’ ಎಂಬ ಕ್ವಿಜ್‌ ಕಾರ್ಯಕ್ರಮವನ್ನು ಅವರು ನಡೆಸಿಕೊಡುತ್ತಿದ್ದಾರೆ. ಇದರಲ್ಲಿ ಸಚಿನ್‌ ತೆಂಡುಲ್ಕರ್‌, ಶಾರುಕ್‌ ಖಾನ್‌, ವಿದ್ಯಾ ಬಾಲನ್‌, ಮಿಥುನ್‌ ಚಕ್ರವರ್ತಿ ಮುಂತಾದ ದಿಗ್ಗಜರು ಭಾಗವಹಿಸಿದ್ದಾರೆ.

ಆದರೆ ಗಂಗೂಲಿ ಅಭಿನಯಕ್ಕಿಳಿದಿರು ವುದು ಮಾತ್ರ ಇದೇ ಮೊದಲು. ಈ ಕಾರಣಕ್ಕೆ ಬಂಗಾಲದ ಜನರು ಮಾತ್ರವಲ್ಲ, ಧಾರಾ ವಾಹಿಯ ನಾಯಕಿ ಉಷಾಸಿ ರಾಯ್‌ ಸೇರಿದಂತೆ ತಂಡದವರೆಲ್ಲ ಪುಳಕಿತರಾಗಿ ದ್ದಾರೆ. ಜನಪ್ರಿಯ ನಟಿ ಉಷಾಸಿ ಅವರಂತೂ ದಾದಾ ಜತೆಗೆ ನಟಿಸಲು ಅವಕಾಶ ಸಿಕ್ಕಿರುವುದು ತನ್ನ ಮಹಾ ಭಾಗ್ಯ ಎಂದು ಸಂಭ್ರಮಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next