Advertisement

ವಾಟ್ಸ್‌ಆ್ಯಪ್‌ನ ಗ್ರೂಪ್‌ ಚಾಟ್‌ಗೆ ಹೊಸ ಫೀಚರ್ಸ್‌

07:11 PM Aug 07, 2022 | Team Udayavani |

ವಾಷಿಂಗ್ಟನ್‌: ಜನಪ್ರಿಯ ಸಾಮಾಜಿಕ ಜಾಲತಾಣವಾದ ವಾಟ್ಸ್‌ಆ್ಯಪ್‌ನ ಗ್ರೂಪ್‌ ಚಾಟಿಂಗ್‌ ಹೊಸ ಫೀಚರ್‌ಗಳನ್ನು ಸೇರಿಸಲು ನಿರ್ಧರಿಸಲಾಗಿದೆ.

Advertisement

ಗ್ರೂಪ್‌ನ ಸದಸ್ಯರ ಸಂಖ್ಯೆಯನ್ನು 100ರಿಂದ 512ಕ್ಕೆ ಏರಿಕೆ ಮಾಡಲು ನಿರ್ಧರಿಸಲಾಗಿದೆ. ಗ್ರೂಪ್‌ ಗಳಿಂದ ಬ್ಯಾನ್‌ ಮಾಡಿದವರ ಪಟ್ಟಿಯನ್ನು ಪತ್ತೆ ಮಾಡಲು, ಪ್ರತ್ಯೇಕ ಸರ್ಚ್‌ ಸೌಲಭ್ಯ ಸಿಗಲಿದೆ.

ಗ್ರೂಪ್‌ನ ಸದಸ್ಯರ ಪಟ್ಟಿಯನ್ನು ಗಮನಿಸುವಾಗ ಅಲ್ಲಿ “See Past Participants’ ಎಂಬ ಫೀಚರ್‌ ಇರಲಿದ್ದು, ಅದರಲ್ಲಿ ಗ್ರೂಪ್‌ನಲ್ಲಿ ಈ ಹಿಂದಿದ್ದವರ ವಿವರ ಪಡೆಯಬಹುದಾಗಿದೆ.

ಗ್ರೂಪ್‌ನಿಂದ ಹೊರನಡೆದವರ ಬಗ್ಗೆ ಗ್ರೂಪ್‌ ನಿರ್ವಾಹಕರಿಗೆ ಶೀಘ್ರವೇ ಗೊತ್ತಾಗುವಂಥ ವ್ಯವಸ್ಥೆ ಮಾಡಲಾಗುತ್ತದೆ. ಸದ್ಯಕ್ಕೆ ಈ ಫೀಚರ್‌ಗಳನ್ನು ಐಫೋನ್‌ ಬಿಟಾ ವರ್ಷನ್‌ನಲ್ಲಿ ಪ್ರಯೋಗದ ಹಂತದಲ್ಲಿವೆ. ಅದು ಯಶಸ್ವಿಯಾದ ನಂತರ, ಆ್ಯಂಡ್ರಾಯ್ಡ್ ವರ್ಷನ್‌ಗೂ ಇದನ್ನು ಅಳವಡಿಸಲಾಗುತ್ತದೆ

Advertisement

Udayavani is now on Telegram. Click here to join our channel and stay updated with the latest news.

Next