Advertisement

ವಾಟ್ಸ್‌ಆ್ಯಪ್‌ನಲ್ಲಿ ಹೊಸ ಫೀಚರ್‌ ಬಿಡುಗಡೆ:  “ಅನ್‌ಡು’ಆಯ್ಕೆ

11:18 AM Aug 18, 2022 | Team Udayavani |

ವಾಷಿಂಗ್ಟನ್‌: ವಾಟ್ಸ್‌ಆ್ಯಪ್‌ ಹೊಸ ಅಪ್‌ಡೇಟ್‌ ಒಂದನ್ನು ಪರಿಚಯಿಸುವುದಕ್ಕೆ ಸಿದ್ಧವಾಗಿದೆ. ಈ ಅಪ್‌ಡೇಟ್‌ನಲ್ಲಿ ನೀವು ಡಿಲೀಟ್‌ ಮಾಡಿರುವಂತಹ ಸಂದೇಶವನ್ನು ಮತ್ತೆ ವಾಪಸು ಪಡೆಯಬಹುದು.

Advertisement

ಯಾರಿಗಾದರೂ ಕಳುಹಿಸಿದ ಸಂದೇಶವನ್ನು ನೀವು ಡಿಲೀಟ್‌ ಮಾಡಿದ ನಂತರ, ವಾಟ್ಸ್‌ಆ್ಯಪ್‌ “ಅನ್‌ಡು’ ಎನ್ನುವ ಆಯ್ಕೆಯನ್ನು ನಿಮಗೆ ಕೊಡಲಿದೆ. ಆದರೆ ಇದು “ಡಿಲೀಟ್‌ ಫಾರ್‌ ಮಿ’ ಎಂದು ಕೊಡಲಾಗಿರುವ ಸಂದೇಶಕ್ಕೆ ಮಾತ್ರ ಅನ್ವಯ.

“ಡಿಲೀಟ್‌ ಫಾರ್‌ ಎವೆರಿಒನ್‌’ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿದ್ದರೆ ಅದಕ್ಕೆ ಈ ಅನ್‌ಡು ಅನ್ವಯವಾಗುವುದಿಲ್ಲ. ಹಾಗೆಯೇ ಈ ಅನ್‌ಡು ಆಯ್ಕೆ ಕೆಲವೇ ಸೆಕೆಂಡುಗಳಿಗೆ ಮಾತ್ರ ಕಾಣಿಸಿಕೊಳ್ಳುತ್ತದೆ. ಸದ್ಯ ಈ ಅನ್‌ಡು ಆಯ್ಕೆಯು ಬೆಟಾ ವರ್ಷನ್‌ ಇರುವ ವಾಟ್ಸ್‌ಆ್ಯಪ್‌ ಖಾತೆಗಳಲ್ಲಿ ಮಾತ್ರ ಲಭ್ಯವಿದ್ದು, ಶೀಘ್ರವೇ ಎಲ್ಲರಿಗೂ ಲಭ್ಯವಾಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next