Advertisement

ಬ್ಯಾಗ್‌ರಹಿತ ಶನಿವಾರ ಹೊಸ ಪಠ್ಯೇತರ ಚಟುವಟಿಕೆ

11:45 PM Dec 11, 2019 | Team Udayavani |

ಮಂಗಳೂರು: ಶಾಲಾ ಮಕ್ಕಳ ಬೆನ್ನಿನ ಮೇಲಿನ ಹೊರೆ ಕಡಿಮೆ ಮಾಡಲು ಸರಕಾರ ಜಾರಿಗೊಳಿಸಿದ್ದ ಪ್ರತಿ ಶನಿವಾರ ಬ್ಯಾಗ್‌ ರಹಿತ ದಿನ ನಿರಂತರ ಪಾಲನೆಯಾಗುತ್ತಿದೆ. ಈಗ ಈ ದಿನ ಹೊಸ ಪಠ್ಯೇತರ ಚಟುವಟಿಕೆಗಳನ್ನು ನಿರ್ವಹಿಸುವ ಸಂಬಂಧ ಇಲಾಖಾ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.

Advertisement

ಮಕ್ಕಳ ಬ್ಯಾಗ್‌ ಭಾರ ಇಳಿಸಬೇಕೆಂಬ ಹಲವಾರು ವರ್ಷಗಳ ಆಗ್ರಹದ ಫಲವಾಗಿ ಕಳೆದ ವರ್ಷ ಸರಕಾರವು ವಾರದಲ್ಲಿ ಒಂದು ದಿನ ವಿದ್ಯಾರ್ಥಿಗಳು ಶಾಲೆಗೆ ಬ್ಯಾಗ್‌ ಇಲ್ಲದೆ ತೆರಳಬೇಕು ಎಂದು ಆದೇಶಿಸಿತ್ತು. ಅದರಂತೆ ಪ್ರತಿ ಶನಿವಾರ ಬ್ಯಾಗ್‌ರಹಿತ ದಿನ ಎಂದು ಆಚರಿಸಲಾಗುತ್ತಿತ್ತು. ಅಂದು ವಿದ್ಯಾರ್ಥಿಗಳು ಬೆನ್ನ ಮೇಲೆ ಹೊರೆಯಿಲ್ಲದೆ ಶಾಲೆಗೆ ತೆರಳಿ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂಬುದು ಸರಕಾರದ ನಿರ್ದೇಶವಾಗಿತ್ತು.

ಒಂದು ವರ್ಷದಿಂದ ಪ್ರತಿ ಶನಿವಾರ ವಿದ್ಯಾರ್ಥಿಗಳಿಗೆ ಪಠ್ಯ ಬೋಧನೆ ಇಲ್ಲದೆ, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳ ಲಾಗುತ್ತಿದೆ. ನೃತ್ಯ, ಹಾಡುಗಾರಿಕೆ, ಕರ ಕುಶಲ ವಸ್ತುಗಳ ತಯಾರಿ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತಯಾರುಗೊಳಿಸಲಾಗುತ್ತಿದೆ. ಈಗ ಇದೇ ದಿನ ಪಠ್ಯೇತರ ಚಟುವಟಿಕೆಗಳಲ್ಲಿ ಹೊಸತನ ಅನುಸರಿಸಲು ಮುಂದಾಗಿ ರುವ ಶಿಕ್ಷಣ ಇಲಾಖೆ, ಈ ಸಂಬಂಧ ಇಲಾಖಾ ಅಧಿಕಾರಿ ಗಳೊಂದಿಗೆ ಚರ್ಚೆ ನಡೆಸುತ್ತಿದೆ. ಏನೆಲ್ಲ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿ ಕೊಳ್ಳಬಹುದು ಎಂಬ ಬಗ್ಗೆ ಮಾಹಿತಿ ಕ್ರೋಡೀಕರಣ ನಡೆಯುತ್ತಿದೆ. 2020-21ನೇ ಸಾಲಿನಲ್ಲಿ ಹೊಸ ಚಟುವಟಿಕೆಗಳ ಅನುಷ್ಠಾನ ಸಂಬಂಧ ಅಧಿಕಾರಿಗಳಿಗೆ ಕಾರ್ಯಾಗಾರಗಳನ್ನು ನಡೆಸಿ ಚರ್ಚಿಸಲಾಗಿದೆ. ಶೀಘ್ರ ಇದರ ರೂಪುರೇಷೆ ಸಿದ್ಧಗೊಳಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯೋನ್ಮುಖವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next