Advertisement

ಹೊಸ ಎಪಿಕ್‌ ಕಾರ್ಡ್‌ ವಿತರಣೆ ಆರಂಭ

12:19 PM Jul 26, 2022 | Team Udayavani |

ಉಡುಪಿ: ಆನ್‌ಲೈನ್‌ ಅಥವಾ ಬಿಎಲ್‌ಒಗಳ ಮೂಲಕ ಓಟರ್‌ ಐಡಿ(ಎಪಿಕ್‌ ಕಾರ್ಡ್‌) ತಿದ್ದುಪಡಿ ಮಾಡಿಸಿಕೊಂಡವರಿಗೆ ಹೊಸ ಕಾರ್ಡ್‌ ಸರಬರಾಜು ಮಾಡುವ ಪ್ರಕ್ರಿಯೆ ಶುರುವಾಗಿದೆ.

Advertisement

ಜಿಲ್ಲೆಯಲ್ಲಿ ಜು.25ರ ವರೆಗೆ ಹೊಸ ಸೇರ್ಪಡೆ, ತಿದ್ದುಪಡಿ, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವರೆಗೆ ವರ್ಗಾವಣೆ, ನಕಲಿ ಓಟರ್‌ ಐಟಿ ಹಾಗೂ ಇತರ ವಿಷಯಗಳ ತಿದ್ದುಪಡಿಗೆ 27,770 ಅರ್ಜಿಗಳು ಸ್ವೀಕರಿಸಲಾಗಿತ್ತು. ಅವುಗಳಲ್ಲಿ 17,444 ಅರ್ಜಿದಾರರಿಗೆ ಹೊಸ ಎಪಿಕ್‌ ಕಾರ್ಡ್‌ ತಲುಪಿಸಲಾಗಿದೆ. 12326 ಎಪಿಕ್‌ ಕಾರ್ಡ್‌ ಪ್ರಿಂಟ್‌ ಆಗಿದ್ದು, ಸ್ಪೀಡ್‌ಪೋಸ್ಟ್‌ ಮೂಲಕ ಸಂಬಂಧಪಟ್ಟವರಿಗೆ ತಲುಪಿಸಲು ಕ್ರಮ ಆಗುತ್ತಿದೆ.

ಆನ್‌ಲೈನ್‌((voter helpline) ಆ್ಯಪ್‌ ಮೂಲಕ ಅಥವಾ ಸ್ಥಳೀಯ ಬಿಎಲ್‌ ಒಗಳ ಮೂಲಕ ಸಂದಾಯವಾಗಿರುವ ಅರ್ಜಿಗಳನ್ನು ಪಾರಂಭಿಕ ಹಂತದಲ್ಲಿ ಬಿಎಲ್‌ ಒಗಳ ಮೂಲಕ ಪರಿಶೀಲಿಸಲಾಗುತ್ತದೆ. ಅನಂತರ ದಾಖಲಾತಿಗಳ ನೈಜತೆಯನ್ನು ಗಮನಿಸಲಾಗುತ್ತದೆ. ಅನಂತರ ಅರ್ಹ ಅರ್ಜಿಗಳನ್ನು ಕ್ರೋಡೀಕರಿಸಿ ವಿಧಾನಸಭಾ ಕ್ಷೇತ್ರವಾರು ವಿಂಗಡಿಸಿ, ಸರಕಾರದ ವ್ಯವಸ್ಥೆಯಡಿಲ್ಲಿ ಪ್ರಿಂಟಿಂಗ್‌ ಆಗಲಿದೆ. 2023ರಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಎಪಿಕ್‌ ಕಾರ್ಡ್‌ ತಿದ್ದುಪಡಿ ನಿರಂತರ ಪ್ರಕ್ರಿಯೆಯಾಗಿದೆ ಆನ್‌ಲೈನ್‌ ಅಥವಾ ಆಫ್ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.

ಈವರೆಗೂ ಎಪಿಕ್‌ ಕಾರ್ಡ್‌ಗೆ ಕನಿಷ್ಠ ದರ ನಿಗದಿ ಮಾಡಲಾಗಿತ್ತು. ಕೇಂದ್ರ ಚುನಾವಣೆ ಆಯೋಗದ ನಿರ್ದೇಶನದಂತೆ ಇನ್ನು ಮುಂದೆ ಉಚಿತವಾಗಿ ಎಪಿಕ್‌ ಕಾರ್ಡ್‌ ನೀಡಲಾಗುತ್ತದೆ. ಈಗಾಗಲೇ ಅಪ್‌ಡೇಟ್‌ ಮಾಡಿದ್ದು, ಹೊಸ ಕಾರ್ಡ್‌ ಗಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಇದು ಅನ್ವಯವಾಗಲಿದೆಯೇ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಇನ್ನು ಮುಂದೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಉಚಿತವಾಗಿ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.

ಫಾರಂ ನಂ.-6(ಹೊಸ ಸೇರ್ಪಡೆ) ಅಡಿ 9126, ಫಾರಂ ನಂ.-8(ತಿದ್ದುಪಡಿ) ಅಡಿ 19598, ಫಾರಂ ನಂ.-8ಎ(ವರ್ಗಾವಣೆ) ಅಡಿ 1004 ಅರ್ಜಿಗಳು ಸಲ್ಲಿಕೆಯಾಗಿದ್ದವು. ಕ್ರಮವಾಗಿ ಫಾರಂ ನಂ.-6ಅಡಿ 8643, ಫಾರಂ.-8 ಅಡಿ 7823, ಹಾಗೂ ಫಾರಂ ನಂ.-8ಎ ಅಡಿಯಲ್ಲಿ 938 ಅರ್ಜಿ ದಾರರಿಗೆ ಎಪಿಕ್‌ ಕಾರ್ಡ್‌ ಈಗಾಗಲೇ ತಲುಪಿಸಲಾಗಿದೆ.

Advertisement

ಶೇ.105.3ರಷ್ಟು ಆಧಾರ್‌ ಕಾರ್ಡ್‌ ಜಿಲ್ಲೆಯಲ್ಲಿ 2020ರ ಮೇ ಅಂತ್ಯಕ್ಕೆ 13,01,993 ಜನಸಂಖ್ಯೆ ಇದೆ ಎಂದು ಅಂದಾಜಿಸಲಾಗಿದ್ದು, ಅದರಲ್ಲಿ 13,70,857 ಮಂದಿ ಆಧಾರ್‌ ಹೊಂದಿದ್ದಾರೆ. ಅದರಂತೆ ಶೇ.105.3ರಷ್ಟು ಪ್ರಗತಿಯಾಗಿದೆ.

ಪಡೆಯುವುದು ಹೇಗೆ? ಅಪ್‌ಡೇಟ್‌ ಅಥವಾ ಹೊಸ ಕಾರ್ಡ್‌ಗಳನ್ನು ಪೋಸ್ಟ್‌ ಮೂಲಕವೂ ಪಡೆಯಲು ಅವಕಾಶವಿದೆ ಅಥವಾ ಅಭ್ಯರ್ಥಿಗಳು ತಮ್ಮ ವ್ಯಾಪ್ತಿಯ ಬಿಎಲ್‌ಒಗಳನ್ನು ಸಂಪರ್ಕಿಸಿಯೂ ಕಾರ್ಡ್‌ ಪಡೆಯಬಹುದು. ಎಲ್ಲ ಕಾರ್ಡ್‌ಗಳು ಬೆಂಗಳೂರಿನಲ್ಲಿಯೇ ಪ್ರಿಂಟಿಂಗ್‌ ಆದ ಅನಂತರ ಜಿಲ್ಲಾ ಕೇಂದ್ರಕ್ಕೆ ಬರಲಿದೆ. ಜಿಲ್ಲಾಕೇಂದ್ರದಲ್ಲಿ ಆಯಾ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಬಿಎಲ್‌ಒಗಳಿಗೆ ತಲುಪಿಸಲಾಗುತ್ತದೆ ಎಂದು ತಿಳಿಸಿದರು.

ನಿರಂತರ ಪ್ರಕ್ರಿಯೆ ಇದೊಂದು ನಿರಂತರ ಪ್ರಕ್ರಿಯೆ ಯಾಗಿದೆ. ಹೊಸ ಸೇರ್ಪಡೆ, ತಿದ್ದುಪಡಿ, ವರ್ಗಾವಣೆಗೆ ಅರ್ಜಿ ಸಲ್ಲಿಸಿದ ವರಿಗೆ ಆಗಿಂದಾಗೆ ಹೊಸ ಕಾರ್ಡ್‌ ನೀಡಲಾಗುತ್ತದೆ. ಅರ್ಹರು ಆನ್‌ ಲೈನ್‌ ಅಥವಾ ಬಿಎಲ್‌ಒಗಳ ಮೂಲಕ ಅರ್ಜಿ ಸಲ್ಲಿಸಬಹುದು. –ವೀಣಾ, ಅಪರ ಜಿಲ್ಲಾಧಿಕಾರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next