Advertisement

ಒಂದೇ ಡಿ.ಎಲ್‌.,ಆರ್‌.ಸಿ.

09:16 AM Oct 15, 2018 | |

ಹೊಸದಿಲ್ಲಿ: ಮುಂದಿನ ವರ್ಷದ ಜುಲೈನಿಂದ ದೇಶಾದ್ಯಂತ ಹೊಸದಾಗಿ ನೀಡಲಾಗುವ  ಡ್ರೈವಿಂಗ್‌ ಲೈಸನ್ಸ್‌ ಮತ್ತು ವಾಹನಗಳ ಪ್ರಮಾಣ ಪತ್ರ (ಆರ್‌ಸಿ) ಒಂದೇ ರೀತಿಯದ್ದಾಗಿರಲಿವೆ. ಒಂದೇ ಮಾದರಿ, ಬಣ್ಣ, ವಿನ್ಯಾಸ, ಭದ್ರತಾ ವ್ಯವಸ್ಥೆ ಗಳನ್ನು ಹೊಂದಿರಲಿವೆ. ಈ ಸ್ಮಾರ್ಟ್‌ ಡಿ.ಎಲ್‌. ಮತ್ತು ಆರ್‌.ಸಿ.ಗಳು ಚಿಪ್‌ ಮತ್ತು ಕ್ಯೂ.ಆರ್‌.ಕೋಡ್‌ಗಳನ್ನು ಹೊಂದಿರಲಿವೆ. ಅವುಗಳು ಎಟಿಎಂ ಕಾರ್ಡ್‌ಗಳಲ್ಲಿರುವ ನಿಯರ್‌ ಫೀಲ್ಡ್‌ ಕಮ್ಯೂನಿಕೇಷನ್‌ ಫೀಚರ್‌ ಅನ್ನು ಹೊಂದಿರಲಿವೆ. ಅದರ ಮೂಲಕ ಸಾರಿಗೆ ಇಲಾಖೆ ಅಧಿಕಾರಿಗಳು ಡಿ.ಎಲ್‌. ಅಥವಾ ಆರ್‌.ಸಿ.ಯನ್ನು ಅವರ ಬಳಿ ಇರುವ ಡಿವೈಸ್‌ಗೆ ಹಿಡಿದಾಗ ವಿವರಗಳು ಲಭ್ಯವಾಗುತ್ತವೆ. ದಿವ್ಯಾಂಗರಿಗೆ ಮೀಸಲಾಗಿ ಇರುವ ವಾಹನ ಚಾಲನೆ ಮಾಡುವ ಬಗ್ಗೆ ಮತ್ತು ಮರಣಾನಂತರ ಅಂಗಾಂಗಗಳನ್ನು ದಾನ ಮಾಡುವ ಬಗ್ಗೆ ಚಾಲಕನ ಘೋಷಣೆಯೂ ಇರಲಿದೆ. 

Advertisement

ಇದರ ಜತೆಗೆ ಆರ್‌.ಸಿ.ಯಲ್ಲಿ ವಾಹನ ಹೊರಸೂಸುವ ಮಾಲಿನ್ಯಕರ ಅಂಶಗಳ ಬಗ್ಗೆಯೂ ಮಾಹಿತಿ ಇರಲಿದೆ. ಇದರಿಂದಾಗಿ ಅದು ಪರಿಸರಕ್ಕೆ ಎಷ್ಟರ ಪ್ರಮಾಣದಲ್ಲಿ ಹಾನಿ ಉಂಟು ಮಾಡುತ್ತದೆ ಎಂಬ ವಿವರವೂ ಲಭ್ಯವಾಗಲಿದೆ ಎಂದು “ದ ಟೈಮ್ಸ್‌ ಆಫ್ ಇಂಡಿಯಾ’ ವರದಿ ಮಾಡಿದೆ. 

ಮರು ನವೀಕರಣದ ವೇಳೆ: ಈಗಾಗಲೇ ಡ್ರೈವಿಂಗ್‌ ಲೈಸನ್ಸ್‌ ಹೊಂದಿರುವರಿಗೆ ಮರು ನವೀಕರಣದ ಸಂದರ್ಭದಲ್ಲಿ ಹೊಸ ಮಾದರಿಯ ಡಿ.ಎಲ್‌.ಗಳನ್ನು ನೀಡಲಾಗುತ್ತದೆ. ಅಂದ ಹಾಗೆ ಅದಕ್ಕಾಗಿ ನೀಡಬೇಕಾದ ಶುಲ್ಕವೂ 15 ರೂ.ಗಳಿಂದ 20 ರೂ. ಮಾತ್ರ. ಹಂತ ಹಂತವಾಗಿ  ಹೊಸ ಮಾದರಿ ಆರ್‌.ಸಿ.ಗಳನ್ನು ನೀಡಲಾಗುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ. ಸಾರಿಗೆ ಇಲಾಖೆ ಅಧಿಕಾರಿಗಳು ಆರ್‌.ಸಿ. ಅಥವಾ ಡಿ.ಎಲ್‌.ನಲ್ಲಿರುವ ಕ್ಯೂ.ಆರ್‌. ಕೋಡ್‌ ಅಥವಾ ಚಿಪ್‌ ಅನ್ನು ಸ್ವೆ„ಪ್‌ ಮಾಡಿದಾಗ ಚಾಲಕನ, ವಾಹನದ ವಿವರ ಗಳು ಲಭಿಸುತ್ತವೆ ಎಂದು ರಸ್ತೆ ಸಾರಿಗೆ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ದೇಶದಲ್ಲಿ  
ಪ್ರತಿದಿನ 32 ಸಾವಿರ ಹೊಸತು ಮತ್ತು ಹಳೇ ಡಿ.ಎಲ್‌.ಗಳನ್ನು ಮರು ನವೀಕರಿಸಲಾಗುತ್ತಿದೆ. 

ಏನೇನು ಹೊಸ ಭದ್ರತಾ ವ್ಯವಸ್ಥೆ ?
*ಗಲ್ಲಿಚೋಕ್‌ ಮುದ್ರಣ
*ಮೈಕ್ರೋ ಮುದ್ರಿತ ಅಕ್ಷರ 
*ಮೈಕ್ರೋ ಲೈನ್‌
*ಅಲ್ಟ್ರಾ ಫ್ಲೋರೋಸೆಂಟ್‌ ಬಣ್ಣ
*ಹೋಲೋಗ್ರಾಂ
*ವಾಟರ್‌ ಮಾರ್ಕ್‌ ಪ್ರಮಾಣದ ಹೊಸ ಆರ್‌.ಸಿ. ಮತ್ತು ನವೀಕರಣ

ಹೊಸ ಆರ್‌.ಸಿ.ಯಲ್ಲಿನ ವ್ಯವಸ್ಥೆ
*ಕೇಂದ್ರ, ರಾಜ್ಯ ಸರಕಾರಗಳ ಚಿಹ್ನೆ, ನೀಡುವ ಪ್ರಾಧಿಕಾರದ ವಿವರ
*ಅದನ್ನು ನೀಡುವ ದಿನಾಂಕ ಮತ್ತು ಯಾವ ದಿನಾಂಕದ ವರೆಗೆ ಮಾನ್ಯತೆ
*ವಾಹನದ ವಿಧ- ವಾಣಿಜ್ಯಿಕವೋ ಅಥವಾ ವಾಣಿಜ್ಯೇತರವೋ?
*ಚಾಸಿಸ್‌ ಮತ್ತು ಎಂಜಿನ್‌ ನಂಬರ್‌, ಇಂಧನ ಬಳಕೆ ಮತ್ತು ಪರಿಸರಾತ್ಮಕ ನಿಯಮಗಳ ಅನುಸರಣೆ (ಬಿಎಸ್‌-4/ ಬಿಎಸ್‌-6)
*13 ಲಕ್ಷ- ಪ್ರತಿ ತಿಂಗಳಿಗೆ ಇಷ್ಟು ಪ್ರಮಾಣದ ಹೊಸ ಆರ್‌.ಸಿ. ಮತ್ತು ನವೀಕರಣ

Advertisement

ಹೊಸ ಡಿ.ಎಲ್‌.ನಲ್ಲಿರುವ ವ್ಯವಸ್ಥೆಗಳು
*ಕೇಂದ್ರ, ರಾಜ್ಯ ಸರಕಾರಗಳ ಚಿಹ್ನೆ, ನೀಡುವ ಪ್ರಾಧಿಕಾರದ ವಿವರ
*ಅದನ್ನು ನೀಡುವ ದಿನಾಂಕ ಮತ್ತು ಎಷ್ಟರ ವರೆಗೆ ಅದರ ಅವಧಿ ಇದೆ ಎಂಬ ಮಾಹಿತಿ
*ಹೆಸರು, ರಕ್ತದ ಗುಂಪು, ಅಂಗಾಂಗ ದಾನ ಮಾಡುವ ಘೋಷಣೆ
*ತುರ್ತು ಪರಿಸ್ಥಿತಿಯ ನಂಬರ್‌, ವಾಹನದ ಮಾದರಿ, ಕ್ಯೂ.ಆರ್‌.ಕೋಡ್‌
*9.6 ಲಕ್ಷ – ಪ್ರತಿ ತಿಂಗಳಿಗೆ ಇಷ್ಟು ಪ್ರಮಾಣದ ಹೊಸತು ಅಥವಾ ಮರು ನವೀಕರಿಸಿದ ಡಿ.ಎಲ್‌.ನೀಡಿಕೆ

Advertisement

Udayavani is now on Telegram. Click here to join our channel and stay updated with the latest news.

Next