ಸುರಪುರ: ಜಿವೈಡಿಸಿಸಿ ಬ್ಯಾಂಕ್ ನಿರ್ದೇಶಕನಾಗಬೇಕು, ಸಹಕಾರಿ ಸಂಘಗಳಿಂದ ಸಾಲ ಸೌಲಭ್ಯ ವಿತರಣೆಯಲ್ಲಿ ರೈತರಿಗಾ ಗುತ್ತಿರುವ ಅನ್ಯಾಯ ಸರಿಪಡಿಸಿ ನ್ಯಾಯ ದೊರಕಿಸಿಕೊಡಬೇಕೆಂಬ ಕನಸಿತ್ತು. ಈಗಅದು ನನಸಾಗಿದೆ. ಸಿಕ್ಕಿರುವ ಅವಕಾಶಬಳಿಸಿಕೊಂಡು ರೈತರ ಬಲವರ್ಧನೆಗೆ ಶ್ರಮಿಸುತ್ತೇನೆ ಎಂದು ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್ ನೂತನ ನಿರ್ದೇಶಕ ಡಾ| ಸುರೇಶ ಸಜ್ಜನ್ ಹೇಳಿದರು.
ನಗರದ ಬಸವೇಶ್ವರ ಪತ್ತಿನ ಸಹಕಾರ ಸಂಘದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಲ ವಿತರಣೆಯಲ್ಲಿ ಬೇರೆ ಜಿಲ್ಲೆಗೆ ಹೋಲಿಸಿದರೆ ನಮ್ಮ ಭಾಗದ ರೈತರಿಗೆ ಸಾಕಷ್ಟು ಅನ್ಯಾಯವಾಗುತ್ತಿದೆ. ಇದು ಸುಧಾರಣೆಯಾಗಿ ರೈತರಿಗೆ ಹೆಚ್ಚಿನ ಆದ್ಯತೆ ಸಿಗಬೇಕು. ಬರುವ ದಿನಗಳಲ್ಲಿ ರೈತರ ಪರ ಧ್ವನಿ ಎತ್ತಿ ಹೆಚ್ಚಿನ ಸಾಲ ಸೌಲಭ್ಯ ದೊರಕಿಸುವುದೇ ನನ್ನ ಮೊದಲ ಆದ್ಯತೆ ಎಂದರು. ಜಿಲ್ಲೆಗೆ ಪ್ರತ್ಯೇಕ ಡಿಡಿಸಿ ಬ್ಯಾಂಕ್ ಸ್ಥಾಪನೆ ಕೂಗು ಬಹು ವರ್ಷಗಳಿಂದ ಕೇಳಿ ಬರುತ್ತಿದೆ. ಬರುವ ದಿನಗಳಲ್ಲಿ ಜಿಲ್ಲೆಯ ಸಹಕಾರ ಕ್ಷೇತ್ರದ ಎಲ್ಲ ಪ್ರತಿನಿ ಧಿಗಳು, ಹಾಲಿ ಮತ್ತು ಮಾಜಿ ಶಾಸಕರ ನಿಯೋಗ ತೆರಳಿ ಸರ್ಕಾರದ ಮೇಲೆ ಒತ್ತಡ ಹಾಕಿ ಯಾದಗಿರಿಯಲ್ಲಿ ಕಾಯಾಂ ಕೇಂದ್ರ ಸ್ಥಾಪನೆ ಜೊತೆಗೆ ಹುಣಸಗಿ, ಕಕ್ಕೇರಾ, ಕೊಡೇಕಲ್ ಭಾಗದಲ್ಲಿ ಶಾಖೆ ಆರಂಭಿಸಲುಪ್ರಯತ್ನಿಸಲಾಗುವುದು ಎಂದರು.
ಕೃಷಿ ಪತ್ತಿನ ಸಹಕಾರ ಸಂಘ, ಅರ್ಬನ್ ಬ್ಯಾಂಕ್, ಇತರೆ ಪತ್ತಿನ ಸಹಕಾರ ಸಂಘಸೇರಿ ಒಟ್ಟು 800 ಪ್ರತಿನಿಧಿ ಗಳು ಬ್ಯಾಂಕ್‌ಸದಸ್ಯತ್ವ ಹೊಂದಿವೆ. ಈ ಎಲ್ಲ ಸಹಕಾರಿ ಸಂಘ-ಸಂಸ್ಥೆಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ದೊರಕಿಸಿಕೊಡಲಾಗುವುದು.
ಕೋವಿಡ್, ಆರ್ಥಿಕ ಸಂಕಷ್ಟದಿಂದ ಸಾಲ ಮರುಪಾವತಿ ಸರಿಯಾಗಿ ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ನಬಾರ್ಡ್ ಮತ್ತು ಅಪೆಕ್ಸ್ ಬ್ಯಾಂಕ್‌ನಿಂದ ಸಾಲ ಪಡೆದು ಹೆಚ್ಚಿನ ಸಾಲ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಈ ವೇಳೆ ಮನೋಹರ ಜಾಲಹಳ್ಳಿ, ಬಸವರಾಜ ಜಮದ್ರಖಾನಿ, ಸಂಗನಗೌಡ ಪಾಟೀಲ್, ಎಸ್.ಎಂ. ಕನಕರಡ್ಡಿ, ಜಯಲಲಿತಾ ಪಾಟೀಲ್, ಶಾಂತರಾಜ ಬಾರಿ, ವೀರೇಶ ನಿಷ್ಠಿ ದೇಶಮುಖ, ಮಂಜುನಾಥ ಗುಳಗಿ, ವ್ಯವಸ್ಥಾಪಕಿ ಅನಿತಾ ಇತರರಿದ್ದರು.