Advertisement

New Delhi: ಕೇಜ್ರಿವಾಲ್ ಬಂಧನ ವಿರೋಧಿಸಿ ಮಾರ್ಚ್ 31ರಂದು ವಿಪಕ್ಷಗಳ ಪ್ರತಿಭಟನೆ

03:56 PM Mar 24, 2024 | Team Udayavani |

ಹೊಸದಿಲ್ಲಿ: ದೆಹಲಿ ಅಬಕಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನವನ್ನು ವಿರೋಧಿಸಿ ಮಾರ್ಚ್ 31ರಂದು ಇಂಡಿಯಾ ಬ್ಲಾಕ್ ಪ್ರತಿಭಟನೆ ನಡೆಸಲಿದೆ.

Advertisement

ದೆಹಲಿಯ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸಲು ವಿಪಕ್ಷಗಳ ಒಕ್ಕೂಟ ತಯಾರಿ ನಡೆಸಿದೆ. ಮಾರ್ಚ್ 21ರಂದು ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದರು.

ಮದ್ಯ ಹಗರಣದಲ್ಲಿ ಆಪಾದಿತ ಅಕ್ರಮಗಳಲ್ಲಿ ಅವರ ಪಾತ್ರದ ಬಗ್ಗೆ ವಿವರವಾದ ಮತ್ತು ನಿರಂತರ ವಿಚಾರಣೆಗಾಗಿ ಅವರನ್ನು ಮಾರ್ಚ್ 28 ರವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಲಾಗಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಇಂಡಿಯಾ ಬ್ಲಾಕ್ ಮಿತ್ರಪಕ್ಷಗಳಾದ ಎಎಪಿ ಮತ್ತು ಕಾಂಗ್ರೆಸ್ ರ್ಯಾಲಿಯನ್ನು ಘೋಷಿಸಿವೆ.

“ಪ್ರಜಾಪ್ರಭುತ್ವ ಮತ್ತು ದೇಶವು ಅಪಾಯದಲ್ಲಿದೆ. ಎಲ್ಲಾ ಇಂಡಿಯಾ-ಬ್ಲಾಕ್ ಪಕ್ಷಗಳು ದೇಶದ ಹಿತಾಸಕ್ತಿ ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡಲು ಈ ಮಹಾ ರ್ಯಾಲಿ ನಡೆಸಲಿವೆ” ಎಂದು ಎಎಪಿ ನಾಯಕ ಗೋಪಾಲ್ ರಾಯ್ ಹೇಳಿದ್ದಾರೆ.

Advertisement

“ದೇಶದಲ್ಲಿ ಸರ್ವಾಧಿಕಾರವನ್ನು ಅಳವಡಿಸಿಕೊಂಡು ಪ್ರಜಾಪ್ರಭುತ್ವವನ್ನು ಕೊನೆಗಾಣಿಸುವ ಮೂಲಕ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಪ್ರೀತಿಸುವ ಮತ್ತು ಗೌರವಿಸುವ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಕೋಪವಿದೆ. ಪ್ರತಿ ವಿರೋಧ ಪಕ್ಷದ ನಾಯಕರ ವಿರುದ್ಧ ನಕಲಿ ಪ್ರಕರಣಗಳನ್ನು ದಾಖಲಿಸಲು ಪ್ರಧಾನಿ ಮೋದಿ ಒಂದೊಂದಾಗಿ ಏಜೆನ್ಸಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ” ಎಂದು ಎಎಪಿ ನಾಯಕ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next