Advertisement

ತನ್ನ ಮೇಲೆ ಅತ್ಯಾಚಾರವೆಸಗಿದ್ದ ಯುವಕನ ತಾಯಿಗೆ ಗುಂಡು ಹಾರಿಸಿದ ಸಂತ್ರಸ್ತ ಬಾಲಕಿ

05:00 PM Jan 08, 2023 | Team Udayavani |

ನವದೆಹಲಿ: 50 ವರ್ಷದ ಮಹಿಳೆ ಮೇಲೆ ಅಪ್ರಾಪ್ತ ಬಾಲಕಿಯೊಬ್ಬಳು ಗುಂಡು ಹಾರಿಸಿದ ಘಟನೆ ಈಶಾನ್ಯ ದೆಹಲಿಯ ಉತ್ತರ ಘೋಂಡಾ ಪ್ರದೇಶದಲ್ಲಿ ಶನಿವಾರ ನಡೆದಿದೆ.

Advertisement

ಗುಂಡೇಟಿನಿಂದ ಮಹಿಳೆ ಗಂಭೀರ ಗಾಯಗೊಂಡಿದ್ದಾರೆ ಎನ್ನಲಾಗಿದೆ, ಅಸಲಿಗೆ ಗಾಯಗೊಂಡ ಮಹಿಳೆಯ ಮಗ ಎರಡು ವರ್ಷಗಳ ಹಿಂದೆ ಈ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದನಂತೆ ಇದರಿಂದ ನೊಂದಿದ್ದ ಬಾಲಕಿ ಯುವಕನ ತಾಯಿಯನ್ನು ಗುಂಡಿಕ್ಕಿ ಹತ್ಯೆಗೈಯಲು ಯತ್ನಿಸಿದ್ದಾಳೆ ಎನ್ನಲಾಗಿದೆ.

ಘಟನೆ ಶನಿವಾರ ಸಂಜೆ 5.30 ರ ಸುಮಾರಿಗೆ ಉತ್ತರ ಘೋಂಡಾದ ಸುಭಾಷ್ ಮೊಹಲ್ಲಾದಲ್ಲಿ ಸಂಭವಿಸಿದ್ದು ಗಂಭೀರ ಗಾಯಗೊಂಡ ಮಹಿಳೆಯನ್ನು ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಹಿಳೆ ಸುಭಾಷ್ ಮೊಹಲ್ಲಾದಲ್ಲಿ ದಿನಸಿ ವ್ಯಾಪಾರ ಮಾಡಿಕೊಂಡಿದ್ದು ಶನಿವಾರ ಸಂಜೆ ಬಾಲಕಿ ಬಂದೂಕು ಹಿಡಿದುಕೊಂಡು ಮಹಿಳೆಯ ಅಂಗಡಿಗೆ ಬಂದಿದ್ದಾಳೆ ಈ ವೇಳೆ ಅಂಗಡಿಯಲ್ಲಿ ಅತ್ಯಾಚಾರವೆಸಗಿದ ಯುವಕನ ತಾಯಿ ಇರುವುದನ್ನು ಕಂಡ ಬಾಲಕಿ ಕೈಯಲ್ಲಿದ್ದ ಬಂದೂಕಿನಿಂದ ಗುಂಡು ಹಾರಿಸಿದ್ದಾಳೆ.

ಸದ್ಯ ಬಾಲಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ನಡೆಸುತ್ತಿದ್ದಾರೆ.

Advertisement

ಇದನ್ನೂ ಓದಿ: ದೆಹಲಿಯಲ್ಲಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ: ಸ್ಥಳಕ್ಕೆ 15 ಅಗ್ನಿಶಾಮಕ ವಾಹನ ದೌಡು

Advertisement

Udayavani is now on Telegram. Click here to join our channel and stay updated with the latest news.

Next