Advertisement

ಕೊರೊನಾ ವೈರಸ್‌ನ ಮೂಲ “ರಕೂನ್‌ ಡಾಗ್‌’? ಹೊಸ ವಾದ ಮುಂದಿಟ್ಟ ವಿಜ್ಞಾನಿಗಳು

12:16 AM Mar 18, 2023 | Team Udayavani |

ನ್ಯೂಯಾರ್ಕ್‌: ಕೊರೊನಾ ವೈರಸ್‌ನ ಮೂಲ ಚೀನ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.ವುಹಾನ್‌ ಮಾರುಕಟ್ಟೆಯಿಂದ 2020ರ ಜನವರಿಯಲ್ಲಿ ಅನುವಂಶಿಕ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಅದನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಇಲ್ಲಿ ಮಾರಾಟ ಮಾಡುತ್ತಿದ್ದ ರಕೂನ್‌ ಪ್ರಾಣಿಯ ಮಾಂಸದಲ್ಲಿ ಸಾರ್ಸ್‌-ಕೊವ್‌-2 ವೈರಸ್‌ ಪತ್ತೆಯಾಗಿದೆ ಎಂದು ಅಂತಾರಾಷ್ಟ್ರೀಯ ತಜ್ಞರ ತಂಡವು ತಿಳಿಸಿದೆ.

Advertisement

ಕೊರೊನಾ ಸ್ಫೋಟದ ಹಿನ್ನೆಲೆಯಲ್ಲಿ 2020ರ ಜನವರಿಯಲ್ಲಿ ಚೀನ ಸರ್ಕಾರ ವುಹಾನ್‌ ಮಾರುಕಟ್ಟೆ ಬಂದ್‌ ಮಾಡಿದ ಕೂಡಲೇ ಸಂಶೋಧಕರು ಅಲ್ಲಿದ್ದ ಗೋಡೆಗಳು, ನೆಲ, ಪ್ರಾಣಿಗಳನ್ನು ಸಾಗಾಟ ಮಾಡುತ್ತಿದ್ದ ಲೋಹದ ಪಂಜರಗಳು, ಬಂಡಿಗಳು, ಉಳಿದ ಮಾಂಸದಿಂದ ಮಾದರಿಗಳನ್ನು ಸಂಗ್ರಹಿಸಿದ್ದರು. ಇದನ್ನು ಅನುವಂಶಿಕ ಪರೀಕ್ಷೆಗೆ ಒಳಪಡಿಸಿ, ಇದರ ಆಧಾರದಲ್ಲಿ ಗುರುವಾರ ವರದಿಯನ್ನು ತಜ್ಞರು ಬಿಡುಗಡೆಗೊಳಿಸಿದ್ದಾರೆ.

ಮಾದರಿಯ ಜೈವಿಕ ಅಂಶವನ್ನು ಪರೀಕ್ಷಿಸಿದಾಗ ಇದು ರಕೂನ್‌ ಪ್ರಾಣಿಗೆ ಸೇರಿರುವುದು ಹಾಗೂ ಇದರಲ್ಲಿ ಕೊರೊನಾ ವೈರಸ್‌ ಇರುವುದು ಬಹಿರಂಗವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ತಜ್ಞರ ತಂಡದಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾ, ಅಸ್ಟ್ರೇಲಿಯಾದ ಸಿಡ್ನಿ ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳ ತಜ್ಞರು ಇದ್ದಾರೆ.

ಕಳೆದ ವಾರವಷ್ಟೇ ವುಹಾನ್‌ ವೈರಾಲಜಿ ಪ್ರಯೋಗಾಲಯದಿಂದ ಆಕಸ್ಮಿಕವಾಗಿ ವೈರಸ್‌ ಸೋರಿಕೆಯಾದ ಪರಿಣಾಮ ಜಗತ್ತಿನಾದ್ಯಂತ ಕೊರೊನಾ ಮಾರಿಗೆ ಕಾರಣವಾಯಿತು ಎಂದು ಅಮೆರಿಕ ಪ್ರತಿಪಾದಿಸಿತ್ತು.

ಈ ನಡುವೆ, ಇಸ್ರೇಲ್‌ನಲ್ಲಿ ಕೊರೊನಾ ಸೋಂಕಿನ ಹೊಸ ರೂಪಾಂತರಿಯೊಂದು ಪತ್ತೆಯಾಗಿದೆ. ವಿದೇಶದಿಂದ ಆಗಮಿಸಿದ್ದ ಇಬ್ಬರು ವ್ಯಕ್ತಿಗಳಿಗೆ ಸೋಂಕು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next