Advertisement

H-1B ವೀಸಾಗೆ ಹೊಸ ಮಾನದಂಡ

02:02 AM Feb 01, 2024 | Team Udayavani |

ಹೊಸದಿಲ್ಲಿ: ಎಚ್‌-1ಬಿ ವೀಸಾ ನೋಂದಣಿ ಪ್ರಕ್ರಿಯೆಯಲ್ಲಿನ ವಂಚನೆ ಅಪಾಯಗಳನ್ನು ತಗ್ಗಿಸಲು ಹಾಗೂ ಎಲ್ಲ ಅರ್ಜಿದಾರರಿಗೂ ನ್ಯಾಯಯುತ ಅವಕಾಶವನ್ನು ಖಚಿತಪಡಿಸುವ ನಿಟ್ಟಿನಲ್ಲಿ ಯುಎಸ್‌ ಪೌರತ್ವ ಮತ್ತು ವಲಸೆ ಸೇವೆಗಳ (ಯುಎಸ್‌ಸಿಐಎಸ್‌) ವಿಭಾಗವು ನೂತನ ಮಾನದಂಡಗಳನ್ನು ಪ್ರಕಟಿಸಿದೆ. ಅದರ ಅನ್ವಯ ಒಬ್ಬ ವ್ಯಕ್ತಿ ವಿವಿಧ ಕಂಪನಿಗಳಿಗೆ ಅರ್ಜಿಯನ್ನು ಸಲ್ಲಿಸಿದರೂ ಅದೆಲ್ಲವನ್ನೂ ಅವರ ಪಾಸ್‌ಪೋರ್ಟ್‌ ಸಂಖ್ಯೆ ಆಧಾರದಲ್ಲಿ ಒಂದೇ ಅರ್ಜಿ ಎಂದು ಪರಿಗಣಿಸಲಾಗುತ್ತದೆ.

Advertisement

ಇದು ನೋಂದಣಿ ಪ್ರಕ್ರಿಯೆಯಲ್ಲಿನ ಸಮಗ್ರತೆಯನ್ನು ಖಾತರಿ ಪಡಿಸಲಿದೆ. 2025ರಿಂದ ಆರ್ಥಿಕ ವರ್ಷದಿಂದ ಈ ನಿಯಮವು ಜಾರಿಗೆ ಬರಲಿದ್ದು, ಮಾ.6ರಿಂದಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ನೂತನ ನಿಯಮವು ಅರ್ಜಿದಾರರು ಅರ್ಜಿ ಸಲ್ಲಿಕೆ ಸಮಯದಲ್ಲೇ ಪಾಸ್‌ಪೋರ್ಟ್‌ ಮಾಹಿತಿ ಹಾಗೂ ಪ್ರಯಾಣ ದಾಖಲೆ ಮಾಹಿತಿಗಳನ್ನು ಸಲ್ಲಿಸುವಂತೆ ಸೂಚಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next