Advertisement

ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೂ ಬೀಳುತ್ತೆ ದಂಡ: ಸರಕಾರದಿಂದ ಹೊಸ ಕೋವಿಡ್ ಮಾರ್ಗಸೂಚಿ

07:59 PM Apr 25, 2022 | Team Udayavani |

ಬೆಂಗಳೂರು: ಕೋವಿಡ್ ನಾಲ್ಕನೇ ಅಲೆಯ ಭೀತಿಯ ನಡುವೆ ರಾಜ್ಯ ಸರ್ಕಾರ ಹೊಸ ಕೋವಿಡ್ ಮಾರ್ಗಸೂಚಿಯನ್ನು ಸೋಮವಾರ ಪ್ರಕಟಿಸಿದೆ.

Advertisement

ಎಲ್ಲೆಡೆ ಕೋವಿಡ್ ನಾಲ್ಕನೇ ಅಲೆಯ ಭೀತಿ ಶುರುವಾಗಿದೆ. ಏಪ್ರಿಲ್ 27 ರಂದು ಕೋವಿಡ್ ಹೆಚ್ಚಿರುವ ರಾಜ್ಯದ ಸಿಎಂಗಳ ಜೊತೆ ಪ್ರಧಾನಿ ಮೋದಿ ಸಭೆ ನಡೆಸಲಿದ್ದಾರೆ.

ಇಂದು ಮಧ್ಯಾಹ್ನ ಸಿಎಂ ಬೊಮ್ಮಾಯಿ ಆಧ್ಯಕ್ಷತೆಯಲ್ಲಿ ಕೋವಿಡ್ ಟಾಸ್ಕ್ ಫೋರ್ಸ್ ಪರಿಶೀಲನಾ ಸಭೆ ನಡೆಸಿ ಈ ಕೆಳಕಂಡ ಹೊಸ ಕೋವಿಡ್ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಹೊಸ ಮಾರ್ಗಸೂಚಿಗಳು:

  1. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ
  2. ಸಾರ್ವಜನಿಕ ಸ್ಥಳದಲ್ಲಿ ದೈಹಿಕ ಅಂತರ ಪಾಲನೆ ಕಡ್ಡಾಯ
  3. ಪ್ರಯಾಣದ ವೇಳೆ ಮಾಸ್ಕ್ ನ್ನು ಕಡ್ಡಾಯವಾಗಿ ಧರಿಸಬೇಕು
  4. ಕರ್ತವ್ಯದ ವೇಳೆ ಮಾಸ್ಕ್ ಧರಿಸಿ ನಿಯಮ ಪಾಲಿಸಬೇಕು
  5. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ದಂಡವನ್ನು ವಿಧಿಸಲಾಗುತ್ತದೆ.

 ಕೋವಿಡ್ ಪ್ರಕರಣ ರಾಜ್ಯದಲ್ಲಿ ಹೆಚ್ಚುತ್ತಿದ್ದು, ರಾಜಧಾನಿಯಲ್ಲಿ ದಿನೇ ದಿನೇ ಸೋಂಕು ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಸೋಮವಾರ ಒಟ್ಟು 64 ಪ್ರಕರಣಗಳು ಪತ್ತೆಯಾಗಿತ್ತು. ಈ ಪೈಕಿ ಬೆಂಗಳೂರಿನಲ್ಲೇ 63 ಪ್ರಕರಣ ಪತ್ತೆ ಆಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next