ಬೆಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಮತ್ತೆ ಕೋವಿಡ್ ಭೀತಿ ಪ್ರಾರಂಭವಾಗಿದೆ. ಕಳೆದೊಂದು ವಾರದಿಂದ ನೂರರ ಗಡಿ ದಾಟುತ್ತಿದ್ದ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಬುಧವಾರ 215ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ 75, ಶಿವಮೊಗ್ಗ 51, ಬಳ್ಳಾರಿ 16, ಕಲಬುರಗಿ 13, ಮೈಸೂರು, ಚಿಕ್ಕಮಗಳೂರು 8, ಉತ್ತರ ಕನ್ನಡ 7, ರಾಯಚೂರು 6, ವಿಜಯಪುರ, ಕೋಲಾರ, ಹಾಸನ ತಲಾ 5, ಬೆಂ.ಗ್ರಾಮಾಂತರ, ಹಾವೇರಿ ತಲಾ 3, ಬೀದರ್, ಧಾರವಾಢ ತಲಾ 2, ಬೆಳಗಾವಿ, ಚಾಮರಾಜನಗರ, ಚಿತ್ರದುರ್ಗ, ದಕ್ಷಿಣ ಕನ್ನಡ, ಕೊಪ್ಪಳ, ಬೆಳಗಾವಿ, ಮಂಡ್ಯ ತಲಾ 1 ಪ್ರಕರಣ ವರದಿಯಾಗಿದೆ. ರಾಜ್ಯದಲ್ಲಿ ಒಟ್ಟು 907 ಕೋವಿಡ್ ಪ್ರಕರಣಗಳು ಸಕ್ರಿಯವಾಗಿವೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ 2 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.