Advertisement

ಆಯುರ್ವೇದ ವೈದ್ಯಕೀಯ ವ್ಯವಸ್ಥೆಗೆ ಹೊಸ ಆಯೋಗ

12:30 AM Dec 30, 2018 | Team Udayavani |

ಹೊಸದಿಲ್ಲಿ: ಅಲೋಪತಿ ಹೊರತುಪಡಿಸಿ ದೇಶದಲ್ಲಿ ಚಾಲ್ತಿಯಲ್ಲಿರುವ ಇತರ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯನ್ನು ಆಮೂಲಾಗ್ರ ಸುಧಾರಣೆ ಮಾಡಲು ಹೊರಟಿರುವ ಕೇಂದ್ರ ಸರಕಾರವು ಭಾರತೀಯ ವೈದ್ಯಕೀಯ ವ್ಯವಸ್ಥೆ ರಾಷ್ಟ್ರೀಯ ಆಯೋಗ ಮಸೂದೆಗೆ ಅನುಮೋದನೆ ನೀಡಿದೆ. ಭಾರತೀಯ ವೈದ್ಯಕೀಯ ಕೇಂದ್ರೀಯ ಕೌನ್ಸಿಲ್‌ ಬದಲಿಗೆ ಹೊಸ ಆಯೋಗ ಜಾರಿಗೆ ಬರಲಿದೆ. ಆಯುರ್ವೇದ, ಯುನಾನಿ, ಸಿದ್ಧ ಮತ್ತು ಸೋವರಿಗ³ ಪದ್ಧತಿಯ ಅಡಿಯಲ್ಲಿ ಪ್ರತ್ಯೇಕ ಮಂಡಳಿಯನ್ನು ಇದು ಹೊಂದಿರಲಿದೆ. ಈ ಕೋರ್ಸ್‌ ಮಾಡಲಿಚ್ಛಿಸುವ ಅಭ್ಯರ್ಥಿಗಳಿಗೆ ಒಂದೇ ಪ್ರವೇಶ ಮತ್ತು ನಿರ್ಗಮನ ಪರೀಕ್ಷೆ ನಡೆಸುವ ವಿಚಾರ ಇದರಲ್ಲಿದೆ.

Advertisement

ಎರಡು ಪ್ರತ್ಯೇಕ ಮಂಡಳಿಯನ್ನು ಶಿಕ್ಷಣ ಮತ್ತು ಪಠ್ಯ ಕ್ರಮಕ್ಕೆ ರಚಿಸುವ ಪ್ರಸ್ತಾವ ಆಯೋಗದಲ್ಲಿದ್ದು, ಇವು ವೈದ್ಯರಿಗೆ ಲೈಸೆನ್ಸ್‌ ನೀಡುತ್ತವೆ. ಅಲೋಪತಿ ವೈದ್ಯಕೀಯ ವ್ಯವಸ್ಥೆಯಲ್ಲಿ ನೀಡಲಾಗುತ್ತಿರುವ ಶಿಕ್ಷಣ ಹಾಗೂ ಪ್ರಾಕ್ಟೀಸ್‌ನ ಮಾನದಂಡಕ್ಕೆ ಅನುಗುಣವಾಗಿ ಈ ಪದ್ಧತಿಯಲ್ಲೂ ಒದಗಿಸುವ ನಿಟ್ಟಿನಲ್ಲಿ ಈ ಆಯೋಗ ಮಹತ್ವದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next